spot_img
Wednesday, January 22, 2025
spot_img

ನೇತ್ರವಿಜ್ಞಾನ ಪಠ್ಯ ಪುಸ್ತಕ “ಎಸೆನ್ಷಿಯಲ್ಸ್ ಆಫ್ ನೇತ್ರವಿಜ್ಞಾನ” ಬಿಡುಗಡೆ

ಉಡುಪಿ: ಬಹು ನಿರೀಕ್ಷಿತ ವೈದ್ಯಕೀಯ ಪಠ್ಯ ಪುಸ್ತಕ “ಎಸೆನ್ಷಿಯಲ್ ಆಫ್ ನೇತ್ರವಿಜ್ಞಾನ” ವನ್ನು ಉಡುಪಿಯ ಓಷನ್ ಪರ್ಲ್ ನಲ್ಲಿ ವೈದ್ಯಕೀಯ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಗಣ್ಯರು ಉಪಸ್ಥಿತಿಯಲ್ಲಿ ಅ.12ರಂದು ಬಿಡುಗಡೆ ಮಾಡಲಾಯಿತು.

ಐ.ಎಂ.ಎ. ಉಡುಪಿ ಕರಾವಳಿ ೨೦೨೩ ರ ಅಧ್ಯಕ್ಷೆ ಡಾ.ರಾಜಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನೇತ್ರವಿಜ್ಞಾನ ಕ್ಷೇತ್ರದಲ್ಲಿ ಈ ಪಠ್ಯ ಪುಸ್ತಕದ ಮಹತ್ವವನ್ನು ತಿಳಿಸಿ ಅಭಿನಂದಿಸಿದರು.

ಪುಸ್ತಕದ ಮುದ್ರಣ ಆವೃತ್ತಿಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಅವರು ಬಿಡುಗಡೆ ಮಾಡಿ, ಮಾತನಾಡಿದ ಅವರು ಸಾಮರ್ಥ್ಯ ಆಧಾರಿತ ಸಮಗ್ರ ಸಂಪನ್ಮೂಲವನ್ನು ರಚಿಸುವಲ್ಲಿ ಲೇಖಕರ ಅವಿರತ ಪ್ರಯತ್ನಗಳಿಗಾಗಿ ಲೇಖಕರನ್ನು ಶ್ಲಾಘಿಸಿದರು. ವೈದ್ಯಕೀಯ ಶಿಕ್ಷಣ ಪಠ್ಯಕ್ರಮ ಮತ್ತು ಪರಿಷ್ಕರಣೆ ಪರಿಕರಗಳ ಕುರಿತು ವಿಶೇಷ ಅಧ್ಯಾಯವನ್ನು ಒಳಗೊಂಡಿರುವ ಪುಸ್ತಕವನ್ನು ಬರೆಯುವಲ್ಲಿ ಲೇಖಕರು ತಮ್ಮ ಇಚ್ಛಾಶಕ್ತಿ ಮತ್ತು ಧೈರ್ಯಕ್ಕಾಗಿ ಡಾ. ವೆಂಕಟೇಶ್ ಅವರನ್ನು ಶ್ಲಾಘಿಸಿದರು.

ಕರ್ನಾಟಕ ಆಪ್ತಾಲ್ಮಿಕ್ ಸೊಸೈಟಿಯ ಅಧ್ಯಕ್ಷ ಮತ್ತು ಪ್ರಸಾದ್ ನೇತ್ರಾಲಯ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್ನ ಎಂ.ಡಿ. ಡಾ. ಕೃಷ್ಣ ಪ್ರಸಾದ್ ಕೂಡ್ಲು ಇ-ಪುಸ್ತಕವನ್ನು ಬಿಡುಗಡೆ ಮಾಡಿದರು, ಬಿಡುಗಡೆ ಸಂದರ್ಭದಲ್ಲಿ ಪುಸ್ತಕದ ವೈಶಿಷ್ಟ್ಯಗಳನ್ನು ಕುರಿತು ಮಾತನಾಡಿದರು ಪುಸ್ತಕದ ಸ್ಪಷ್ಟತೆ ಮತ್ತು ಸಮಗ್ರ ವ್ಯಾಪ್ತಿಯನ್ನು ಶ್ಲಾಘಿಸಿದರು, ಇದು ನೇತ್ರಶಾಸ್ತ್ರಜ್ಞರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ ಮತ್ತು ಕರ್ನಾಟಕದಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಪಠ್ಯಪುಸ್ತಕವನ್ನು ಒದಲು ಉತ್ತೇಜಿಸ ಬೇಕು ಎಂದು ತಿಳಿಸಿದರು.

ಈ ಪುಸ್ತಕದ ಮುಖ್ಯ ಲೇಖಕಿ ಕಸ್ತೂರಬಾ ವೈದ್ಯಕೀಯ ಕಾಲೇಜಿನ ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ವಿಭಾಗ ಮುಖ್ಯಸ್ಥೆ ಡಾ. ಸುಲತಾ ಭಂಡಾರಿ ಅವರು ಲೇಖಕರ ದೃಷ್ಟಿಕೋನದಿಂದ ಪುಸ್ತಕದ ಅವಲೋಕನವನ್ನು ಪರಿಸಚಯಿಸಿದರು. ವೋಲ್ಟರ್ ಕ್ಲುವರ್ನ ರವಿ ಅವರು ವರ್ಚುವಲ್ ಉಪಸ್ಥಿತಿಯ ಮೂಲಕ ಪ್ರಕಾಶಕರ ದೃಷ್ಟಿಕೋನವನ್ನು ಹಂಚಿಕೊಂಡರು.

ಪಠ್ಯ ಪುಸ್ತಕವನ್ನು ಸಹ ಲೇಖಕರಾದ ಡಾ.ಸುಲತಾ ಭಂಡಾರಿ (ಮುಖ್ಯ ಲೇಖಕಿ)- ಡಾ. ವಿಜಯ ಪೈ (ಕಸ್ತೂರಬಾ ವೈದ್ಯಕೀಯ ಕಾಲೇಜು ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗ ಘಟಕ ಮುಖ್ಯಸ್ಥರು) – ಡಾ.ಲಾವಣ್ಯ ರಾವ್ (ನಿವೃತ್ತ ವಿಭಾಗ ಮುಖ್ಯಸ್ಥರು ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲ) ಡಾ.ಉಮಾ ಕುಲಕರ್ಣಿ (ನೇತ್ರ ವಿಭಾಗದ ಪ್ರಾಧ್ಯಾಪಕಿ, ಯೆನೆಪೊಯ ವೈದ್ಯಕೀಯ ಕಾಲೇಜು ಮಂಗಳೂರು) ಇವರುಗಳು ಮತ್ತು ಈ ಪುಸ್ತಕದಲ್ಲಿ ಒಂದು ಅಧ್ಯಾಯವನ್ನು ಬರೆದಿರುವ ಡಾ ಆಶ್ರಿತ್ ಕಾಮತ್ ಮತ್ತು ಡಾ ನಿಹಿತ್ ಚಂದ್ರ ಕೆ ಇಬ್ಬರು ಸ್ನಾತಕೋತ್ತರ ಪದವೀಧರರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಪ್ರಮುಖರು, ಲೇಖಕರ ಸ್ನೇಹಿತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!