Saturday, October 12, 2024

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಶ್ರೀವಿನಾಯಕ ಸಾಧನ ಶ್ರೀ ಪುರಸ್ಕಾರ

ಕೋಟ : ಶ್ರೀ ವಿನಾಯಕ ಯುವಕ ಮಂಡಲ ಸಾಹೇಬರಕಟ್ಟೆ-ಯಡ್ತಾಡಿ ಕೊಡಮಾಡುವ ೨೦೨೪ನೇ ಸಾಲಿನ ಶ್ರೀವಿನಾಯಕ ಸಾಧನ ಶ್ರೀ ಪುರಸ್ಕಾರಕ್ಕೆ ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಕರಾವಳಿ ಪರಿಸರದಲ್ಲಿ ಕಳೆದ ಮೂವತೈದು ವರುಷಗಳಿಂದ ಸಮಾಜ ಸೇವೆಯಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡು. ಸಾವಿರಾರು ಅಶಕ್ತ ಕುಟುಂಬಗಳಿಗೆ ಆಸರೆಯಾಗಿ ಹೊಸ ಬದುಕನ್ನು ನೀಡಿ ಆಪತ್ಬಾಂಧವ ಎಂದು ಖ್ಯಾತಿ ಪಡೆದಿರುವ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು 2024ನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ.

ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಕ್ಟೋಬರ್ 9 ರ ಸಂಜೆ 7.30ಕ್ಕೆ ಮಹಾತ್ಮ ಗಾಂಧಿ ಫ್ರೌಡಶಾಲೆಯಲ್ಲಿ ಸಾಹೇಬರಕಟ್ಟೆಲ್ಲಿ ನಡೆಯುವ ಸಾರ್ವಜನಿಕ ಶಾರದೋತ್ಸವದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದೆಂದು ಯುವಕ ಮಂಡಲದ ಅಧ್ಯಕ್ಷ ಅಮೃತ್ ಪೂಜಾರಿ, ಕಾರ್ಯದರ್ಶಿ ಗಿರೀಶ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!