Saturday, October 12, 2024

ಕೇರಳದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ : ವರದಿ

ಜನಪ್ರತಿನಿಧಿ (ಕೇರಳ) : ನೆರೆಯ ರಾಜ್ಯ ಕೇರಳದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ವಿದೇಶದಿಂದ ಮರಳಿದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕಿನ ರೋಗಲಕ್ಷಣಗಳು ಕಂಡುಬಂದಿದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿವೆ.

ಕೇರಳಕ್ಕೆ ಕೆಲವು ದಿನಗಳ ಹಿಂದೆ ಆಗಮಿಸಿದ ರೋಗಿ ಅನಾರೋಗ್ಯಕ್ಕೀಡಾದ ಬಳಿಕ ಮೊದಲಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದು ಮಂಕಿಪಾಕ್ಸ್ ಪ್ರಕರಣವಾಗಿರಬಹುದೆಂದು ಭಾವಿಸಿ, ಅವರ ಮಾದರಿಗಳನ್ನು ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿತ್ತು.ಹರಿಯಾಣದ ಹಿಸಾರ್‌ನ 26 ವರ್ಷದ ಯುವಕನೊಬ್ಬರಲ್ಲಿ ಪಾಸಿಟಿವ್ ಕಂಡುಬಂದ ಬಳಿಕ ಅವರನ್ನು ದೆಹಲಿಯ ಎಲ್ ಎನ್ ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜುಲೈ 2022 ರಿಂದ ಭಾರತದಲ್ಲಿ ವರದಿಯಾದ ಹಿಂದಿನ 30 ಪ್ರಕರಣಗಳಂತೆಯೇ ಇದನ್ನು ಪ್ರತ್ಯೇಕ ಪ್ರಕರಣ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪರಿಗಣಿಸಿದ್ದು ಮತ್ತು ಇದು ಮಂಕಿಪಾಕ್ಸ್ ಸೋಂಕಿನ ಕ್ಲಾಡ್ 1 ರ ಬಗ್ಗೆ WHO ವರದಿ ಮಾಡಿರುವ ಪ್ರಸ್ತುತ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಾಗಿಲ್ಲ ಎಂದು ಹೇಳಿದೆ. 26 ವರ್ಷದ ಹಿಸಾರ್ ನಿವಾಸಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲಾಡ್-2 ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆ ಕಳೆದ ತಿಂಗಳು ಎರಡನೇ ಬಾರಿಗೆ ಮಂಕಿ ಪಾಕ್ಸ್‌ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಮಂಕಿ ಪಾಕ್ಸ್ ಸೋಂಕು ಸಾಮಾನ್ಯವಾಗಿ ಸ್ವಯಂ-ಸೀಮಿತವಾಗಿದ್ದು, ಎರಡು ಮತ್ತು ನಾಲ್ಕು ವಾರಗಳ ನಡುವೆ ಇರುತ್ತದೆ ರೋಗಿಗಳು ಸಾಮಾನ್ಯವಾಗಿ ಆರೈಕೆ ಮತ್ತು ನಿರ್ವಹಣೆಯೊಂದಿಗೆ ಚೇತರಿಸಿಕೊಳ್ಳುತ್ತಾರೆ. ಇದು ಸೋಂಕಿತ ರೋಗಿಯೊಂದಿಗೆ ದೀರ್ಘಕಾಲದ ಮತ್ತು ನಿಕಟ ಸಂಪರ್ಕದ ಮೂಲಕ ಹರಡುತ್ತದೆ. ಜ್ವರ, ದದ್ದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಮಂಕಿಪಾಕ್ಸ್ ಸೋಂಕಿನ ರೋಗ ಲಕ್ಷಣಗಳು ಕಂಡುಬರುತ್ತವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!