Monday, September 9, 2024

ಅವಿಭಜಿತ ದ.ಕ ಜಿಲ್ಲೆಯ ಪ್ರಾಥಮಿಕ ಪತ್ತಿನ ಸಂಘಗಳು ಪರಿಪೂರ್ಣ-ಡಾ.ಎಂ.ಎನ್.ರಾಜೇಂದ್ರ ಕುಮಾರ್

 

ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ನೂತನ ಕಟ್ಟಡ ‘ಬಾಂಡ್ಯ ಶ್ರೀ ಕೆ. ಸುಧಾಕರ ಶೆಟ್ಟಿ ಸಹಕಾರಿ ಸದನ’ ಉದ್ಘಾಟನೆ

ಕುಂದಾಪುರ, ಆ.24: (ಜನಪ್ರತಿನಿಧಿ ವಾರ್ತೆ) ಅವಿಭಜಿತ ದ.ಕ ಜಿಲ್ಲೆಯ ಎಲ್ಲಾ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ರಾಷ್ಟ್ರಕ್ಕೆ ಮಾದರಿಯಾಗಿ ಪರಿಪೂರ್ಣತೆ ಕಂಡುಕೊಂಡಿವೆ. ಸತತ 28 ವರ್ಷದಿಂದ ಕೃಷಿ ಸಾಲವನ್ನು ಶೇ.100 ಮರುಪಾವತಿಯ ಮೂಲಕ ನಮ್ಮ ಅವಿಭಜಿತ ದ.ಕ ಜಿಲ್ಲೆ ರಾಷ್ಟ್ರದಲ್ಲಿಯೇ ಗುರುತಿಸಿಕೊಂಡಿದೆ. ಸಹಕಾರ ಕ್ಷೇತ್ರ ಜನರ ವಿಶ್ವಾಸಾರ್ಹ ಕ್ಷೇತ್ರವಾಗಿ ಬೆಳೆದಿದೆ. ಅದಕ್ಕೆ ನಿದರ್ಶನವಾಗಿ ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ಅತೀ ನಷ್ಟದಿಂದ 86 ಲಕ್ಷ ಲಾಭಕ್ಕೆ ಬಂದು ನಿಂತಿರುವುದು ಮಾತ್ರವಲ್ಲದೇ ಅತ್ಯಾಧುನಿಕವಾದ ಕಟ್ಟಡ ನಿರ್ಮಿಸಿಕೊಳ್ಳುವ ಮೂಲಕ ಪರಿಪೂರ್ಣತೆ ಸಾಧಿಸಿರುವುದು. ಗ್ರಾಮಾಂತರ ಪ್ರದೇಶದಲ್ಲಿ ಇದು ಸಾಧ್ಯ ಎನ್ನುವುದನ್ನು ಈ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಸಾಧಿಸಿ ತೋರಿಸಿದ್ದಾರೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಂಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ಆ.24ರಂದು ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ನಿ., ಕರ್ಕುಂಜೆ ಇದರ ನೂತನ ಕಟ್ಟಡ ‘ಬಾಂಡ್ಯ ಶ್ರೀ ಕೆ. ಸುಧಾಕರ ಶೆಟ್ಟಿ ಸಹಕಾರಿ ಸದನ’ ಉದ್ಘಾಟಿಸಿ ಮಾತನಾಡಿದರು.

24 ವರ್ಷಗಳ ಹಿಂದೆ ಕರ್ಕುಂಜೆ ಸಹಕಾರಿ ಸಂಘ ಕಾವ್ರಾಡಿಯಿಂದ ಬೀಳ್ಕೊಂಡು ಮೂರು ಗ್ರಾಮಗಳ ಕಾರ್ಯವ್ಯಾಪ್ತಿಯಲ್ಲಿ ಪ್ರಾರಂಭವಾಯಿತು. ನಷ್ಟದಲ್ಲಿದ್ದ ಸಂಘವನ್ನು ಇವತ್ತು 76 ಲಕ್ಷ ಲಾಭಕ್ಕೆ ತಂದುಕೊಳ್ಳುವಲ್ಲಿ ಸಂಘದ ಅಧ್ಯಕ್ಷರಾಗಿ ಬಾಂಡ್ಯ ಸುಧಾಕರ ಶೆಟ್ಟಿ ಹಾಗೂ ಅವರ ಆಡಳಿತ ಮಂಡಳಿ ಶ್ರಮಿಸಿದೆ. ಈ ಗ್ರಾಮೀಣ ಭಾಗದಲ್ಲಿ ಹೊಸ ಶಕೆ ಆರಂಭವಾಗಿದೆ ಎಂದು ಹೇಳಿದರು.

ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ಸುಸಜ್ಜಿತವಾದ ಕಟ್ಟಡದಲ್ಲಿ ಬ್ಯಾಂಕಿಂಗ್, ಪಡಿತರ, ಸಭಾಂಗಣ ಎಲ್ಲವೂ ಒಂದೇ ಸೂರಿನಡಿ ತಂದಿದೆ. ಲಿಪ್ಟ್ ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಲಿಪ್ಟ್ ವ್ಯವಸ್ಥೆಯನ್ನೂ ಮಾಡಿದೆ ಸಹಕಾರಿ ಸ್ನೇಹಿಯಾಗಿ ಕಟ್ಟಡವನ್ನು ನಿರ್ಮಿಸಿದ್ದರಿಂದ 15 ಲಕ್ಷ ರೂ ನೆರವು ನೀಡುವುದಾಗಿ ಘೋಷಿಸಿದರು.

ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಕೆ.ಬಾಂಡ್ಯ ಸುಧಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸಭಾಭವನವನ್ನು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರದಲ್ಲಿ ಮೊಳಹಳ್ಳಿ ಶಿವರಾಯರು ಬಿತ್ತಿದ ಬೀಜ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಮೂಲಕ ದೃಢವಾಗಿ ಬೆಳೆಯುತ್ತಿದೆ. ಅದರ ಫಲವನ್ನು ಸಹಕಾರಿಗಳು ಪಡೆಯುತ್ತಿದ್ದಾರೆ. ಕರ್ಕುಂಜೆ ವ್ಯವಸಾಯ ಸಹಕಾರಿ ಸಂಘ ಇವತ್ತು ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಆಡಳಿತ ಮಂಡಳಿ, ನೌಕರರ ವಿಶೇಷ ಶ್ರಮವೂ ಇದರಲ್ಲಿ ಅಡಗಿದೆ. ಬಾಂಡ್ಯ ಸುಧಾಕರ ಶೆಟ್ಟಿಯವರ ಸಹಕಾರಿ ಸೇವಾ ಮನೋಭಾವದಿಂದ 20 ಸೆಂಟ್ಸ್ ಭೂಮಿಯನ್ನು ಸಂಘಕ್ಕೆ ದಾನಪತ್ರ ರೂಪದಲ್ಲಿ ನೀಡಿರುವುದು ಅರ್ಥಪೂರ್ಣವಾಗಿದೆ ಎಂದರು.

ಭದ್ರತಾ ಕೊಠಡಿಯನ್ನು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಉದ್ಘಾಟಿಸಿದರು. ದುರ್ಗಾಪರಮೇಶ್ವರಿ ಭೋಜನ ಭೂಮಿಯನ್ನು ರಾಮಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜಯರಾಮ್ ರೈ ಉದ್ಘಾಟಿಸಿದರು. ಆಡಳಿತ ಸಭಾ ಭವನವನ್ನು ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಎಂ.ಮಹೇಶ ಹೆಗ್ಡೆ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ, ಕುಂದಾಪುರ ಉಪ-ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯಾ, ದ.ಕ ಜಿಲ್ಲಾ ಹಾಲು ಒಕೂಟದ ಮಾಜಿ ನಿರ್ದೇಶಕರಾದ ಕೆ.ಬಾಂಡ್ಯ ಸುಬ್ಬಣ್ಣ ಶೆಟ್ಟಿ, ಕರ್ಕುಂಜೆ ಗ್ರಾ.ಪಂ. ಅಧ್ಯಕ್ಷರಾದ ಬಿಜ್ರಿ ರಾಜೀವ ಶೆಟ್ಟಿ, ಭೂ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಎಚ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಬಾಂಡ್ಯ ಕೆ.ಸುಧಾಕರ ಶೆಟ್ಟಿ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕುಂದಾಪುರ ಉಪ-ವಿಭಾಗದ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಇಂಜಿನಿಯರ್ ಸತೀಶ, ಕಟ್ಟಡ ವಿನ್ಯಾಸ ರೂಪಿಸಿದ ಚೇತನ ಹೆಗ್ಡೆ, ಸಿವಿಲ್ ಕೆಕಸ ನಿರ್ವಹಿಸಿದ ಶ್ರೀಪತಿ ಆಚಾರ್ಯ, ಇಲೆಕ್ಟ್ರಿಕಲ್ ಕೆಲಸ ನಿರ್ವಹಿಸಿದ ಸುಜಿತ್ ಇವರನ್ನು ಗೌರವಿಸಲಾಯಿತು. ಇತ್ತೀಚೆಗೆ ವಿದ್ಯುತ್ ತಂತಿ ತುಳಿದು ಮೃತಪಟ್ಟ ಮಹಾಬಲ ದೇವಾಡಿಗ, ಲಕ್ಷ್ಮೀ ದೇವಾಡಿಗ ವಾರೀಸುದಾರರಿಗೆ ತಲಾ 1 ಲಕ್ಷ ರೂ ಗಳ ವಿಮಾ ಮೊತ್ತ ಹಸ್ತಾಂತರಿಸಲಾಯಿತು. ಆರೋಗ್ಯ ಸಹಾಯಧನ ನೀಡಲಾಯಿತು. ಇದೇ ಸಂದರ್ಭದಲ್ಲಿ ಲಕ್ಷ್ಮೀವೆಂಕಟರಮಣ ಹಾಗೂ ಶಾರದಾಂಬೆ ನವೋದಯ ಸ್ವಸಹಾಯ ಗುಂಪು ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಬಿಜ್ರಿ ರಾಜೀವ ಶೆಟ್ಟಿ, ನಿರ್ದೇಶಕರಾದ ಮಹಮ್ಮದ್ ಸಾಹೇಬ್ ನೇರಳಕಟ್ಟೆ, ಗೋಪಾಲ ಶೆಟ್ಟಿ ಹಂದಕುಂದ, ಕೃಷ್ಣ ಮಡಿವಾಳ ಕೊಡ್ಲಾಡಿ, ವಿವೇಕಾನಂದ ಭಂಡಾರಿ ಗುಲ್ವಾಡಿ, ಸುರೇಶ ಶೆಟ್ಟಿ ಹಂದಕುಂದ, ವಾಸು ನಾಯ್ಕ ಕೊಡ್ಲಾಡಿ, ಪ್ರವೀಣ ಕುಮಾರ್ ಶೆಟ್ಟಿ ಕೊಡ್ಲಾಡಿ, ಸಂತೋಷ ಪೂಜಾರಿ ಕರ್ಕುಂಜೆ, ಶ್ರೀಮತಿ ಸುಲೋಚನ ದಾಸ್ ಕರ್ಕುಂಜೆ, ಶ್ರೀಮತಿ ಜಾನಕಿ ಶೆಟ್ಟಿ ಸೌಕೂರು, ಸುಬ್ಬ ಗುಲ್ವಾಡಿ, ವಲಯ ಮೇಲ್ವಚಾರಕ ಸಂದೀಪ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.

ಸನ್ನಿಧಿ ಮತ್ತು ಬಳಗದವರು ಪ್ರಾರ್ಥಿಸಿದರು. ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಕೆ.ಬಾಂಡ್ಯ ಸುಧಾಕರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿ ಅನುಷಾ ವಂದಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಯಕ್ಷ-ನಾಟ್ಯ-ವೈಭವ ನಡೆಯಿತು ಮಧ್ಯಾಹ್ನ ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರ ಒಗ್ಗೂಡುವಿಕೆಯಲ್ಲಿ ಅದ್ದೂರಿಯ ಯಕ್ಷಗಾನ ಪ್ರದರ್ಶನ ದಿ.ಕಾಳಿಂಗ ನಾವಡ ವಿರಚಿತ ‘ನಾಗಶ್ರೀ’ ಪ್ರದರ್ಶನಗೊಂಡಿತು.

 

‘ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ಇರುವುದು ಕೇವಲ 24 ವರ್ಷಗಳ ಇತಿಹಾಸ. ಈ 24 ವರ್ಷಗಳಲ್ಲಿ ನಾವು ಪ್ರಗತಿ ಸಾಧಿಸಿದ್ದನ್ನು ಸಹಕಾರ ಕ್ಷೇತ್ರ ಇಂದು ಗುರುತಿಸಿದೆ. ಕರ್ಕುಂಜೆ, ಕೊಡ್ಲಾಡಿ, ಗುಲ್ವಾಡಿ ಗ್ರಾಮಗಳು ನಮ್ಮ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ಕೃಷಿಕರೇ ಜಾಸ್ತಿ. ಯಾವುದೇ ದೊಡ್ಡ ಉದ್ಯಮಗಳು ಇಲ್ಲಿಲ್ಲ. ಆದರೆ ಈ ಭಾಗದ ರೈತರು, ಕೃಷಿಕರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಕಾವ್ರಾಡಿಯಿಂದ ವಿಭಜನೆಯಾಗಿ ಬರುವಾಗ 50 ಸಾವಿರ ನಷ್ಟದಲ್ಲಿದ್ದೆವು. ಕೇವಲ 89 ಸಾವಿರ ಠೇವಣಿ ಇದ್ದಿತ್ತು. ಕ್ಷೇಮನಿಧಿಯಲ್ಲಿ 2335 ರೂಪಾಯಿಗಳು ಮಾತ್ರ ಇದ್ದಿದ್ದವು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕೃಷಿ ಸಾಲ 25 ಲಕ್ಷ ಇದ್ದಿತುಮಿಷ್ಟು ಬಿಟ್ಟರೆ ಯಾವುದೇ ಆಸ್ತಿ ಇರಲಿಲ್ಲ. ಈ ಹೊತ್ತು ಹೆಮ್ಮೆಯಿಂದ ಹೇಳಬಹುದು. ಇಂದು ನಮ್ಮ ಠೇವಣಾತಿಗಳು 38 ಕೋಟಿ ಇದೆ. 3 1/2 ಕೋಟಿಗೂ ಮಿಕ್ಕಿ ನಿಧಿಗಳಿವೆ. ಕೇಂದ್ರ ಬ್ಯಾಂಕಿನಿಂದ 20 ಕೋಟಿಗೂ ಮಿಕ್ಕಿ ಕೃಷಿ ಸಾಲ ತಂದು ನೀಡಿದ್ದೇವೆ. ಪ್ರತಿ ವರ್ಷ 70 ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸುತ್ತಿದ್ದೇವೆ. ಈ ವರೆಗೂ ನಾವು ಸಣ್ಣ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೆವು. ನಮ್ಮ ಸಿಬ್ಬಂದಿಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಇಂದು ಯಾವುದೇ ಸಾಲವಿಲ್ಲದೆ ಕಟ್ಟಡದ ನಿಧಿಯಿಂದಲೇ 2 ಕೋಟಿಗೂ ಮಿಕ್ಕಿ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಸಂಸ್ಥೆಗೆ ಯಾವುದೇ ಸ್ವಂತ ಜಾಗವಿರಲಿಲ್ಲ. ನಾನು ನನ್ನ ಸ್ವಂತ 20 ಸೆಂಟ್ಸ್ ಜಾಗವನ್ನು ಸಂಘಕ್ಕೆ ಜಾಗವನ್ನು ದಾನವಾಗಿ ನೀಡಿದೆ. ಇದು ನನ್ನ ಸಹಕಾರ ಮನೋಭಾವ ಅಷ್ಟೆ”- ಬಾಂಡ್ಯ ಕೆ.ಸುಧಾಕರ ಶೆಟ್ಟಿ, ಅಧ್ಯಕ್ಷರು

 

https://fb.watch/u9CM5xvW2c/

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!