Monday, September 9, 2024

ಬೈಲೂರು ಶಾಲೆಯಲ್ಲಿ ಆಸಾಡಿ ಆಹಾರ ಮೇಳ ಮತ್ತು ಉಚಿತ ಶೂ ಮತ್ತು ಸಾಕ್ಸ್ ವಿತರಣೆ

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ “ಉಸಿರು ಇಕೋ ಕ್ಲಬ್ ಮತ್ತು ಶಿಕ್ಷಾ ಸಪ್ತಾಹ’ ದ ಅಂಗವಾಗಿ ಆಸಾಡಿ ಆಹಾರ ಮೇಳ ಮತ್ತು ಸರಕಾರದಿಂದ ಕೊಡಮಾಡಿದ ಉಚಿತ ಶೂ ಮತ್ತು ಸಾಕ್ಸ್ ವಿರತಣೆ ಕಾರ್ಯಕ್ರಮವು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ಶೋಭಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು, ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿಗಳೂ ಆದ ಜಯಕರ ಶೆಟ್ಟಿ ಮೂಡುಬೈಲೂರು ಇವರು ಆಹಾರ ಮೇಳವನ್ನು ಉದ್ಘಾಟಿಸಿದರು.

ಶಂಕರನಾರಾಯಣ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವತ್ಸಲಾ ಶೆಟ್ಟಿ, ಸದಸ್ಯರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಶಾಲಾ ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಆಶಾಲತಾ ಶಿವರಾಮ ಶೆಟ್ಟಿ ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿರತಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಆಷಾಡ ತಿಂಗಳಲ್ಲಿ ಹೆಚ್ಚಾಗಿ ಮಾಡುವ ಕ್ಯಾನಿಗೆಂಡಿ ಕಡಬು, ಹಲಸಿನ ಹಣ್ಣಿನ ಕಡಬು, ಮುಳ್ಕಾ, ಹಪ್ಪಳ, ಕೆಸುವಿನ ಪತ್ರೊಡೆ, ಒಂದೆಲಗ, ಕೆಸು, ಚಕ್ಟಿ ಚಟ್ನಿ, ಹುರುಳಿ ಸಾರು, ತಂಬಳಿ, ಅರಸಿನ ಎಲೆ ಕಡಬು, ಅಕ್ಕಿ ಹೊಡಿ, ಮುಂತಾದ ಸಂಪ್ರಾದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ. ಪ್ರಸ್ತಾವನೆಗೈದರು. ಸಹ ಶಿಕ್ಷಕಿ ಸಂಧ್ಯಾ ಕೆ ಸ್ವಾಗತಿಸಿದರು. ಸಹ ಶಿಕ್ಷಕ ಆನಂದ ಕುಲಾಲ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಪ್ರಮೀಳಾ ವಂದಿಸಿದರು. ಗೌರವ ಶಿಕ್ಷಕಿಯರಾದ ವಿಶಲಾಕ್ಷಿ, ವೈಶಾಲಿ ಶೆಟ್ಟಿ ಮತ್ತು ನಯನ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!