Wednesday, September 11, 2024

ಕುಂದಾಪ್ರ ಕನ್ನಡ ವೇದಿಕೆ ಸ್ಥಾಪನೆಗೆ ನಿರ್ಣಯ

ಕುಂದಾಪುರ: ಕುಂದಾಪ್ರ ಭಾಷೆ, ಸಂಸ್ಕೃತಿಯ ಉಳಿವು ಅಭಿವೃದ್ಧಿಯ ದೃಷ್ಠಿಯಿಂದ ಕುಂದಾಪ್ರ ಕನ್ನಡ ವೇದಿಕೆ ಕುಂದಾಪುರದಲ್ಲಿ ಸ್ಥಾಪನೆ ಮಾಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ.

ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬಂಟರ ಯಾನೆ ನಾಡವರ ಸಂಘದ ಸಭಾಂಗಣದಲ್ಲಿ ಕುಂದಾಪ್ರ ಕನ್ನಡಿಗರ ಪ್ರತಿನಿಧಿಗಳ ಸಭೆ ಏರ್ಪಡಿಸಲಾಗಿತ್ತು.

ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಹಾಗೂ ಬಿದ್ಕಲ್‌ಕಟ್ಟೆ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಾಗ್ಮಿ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಉಮೇಶ್ ಪುತ್ರನ್ ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಸಂಘದ ಕುಂದಾಪುರ ತಾಲೂಕು ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಸ್ವಾಗತಿಸಿದರು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.

“ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪ್ರ ಕನ್ನಡದ ಕಾರ್ಯಕ್ರಮ ಎಲ್ಲ ಕಡೆ ಆಗುತ್ತಿರುವುದು ಸಂತೋಷದ ವಿಷಯ. ಆದರೆ ಕುಂದಾಪ್ರ ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ, ಜಾನಪದ ಸಂಪತ್ತು ಉಳಿಸಿಕೊಳ್ಳಲು ಕುಂದಾಪ್ರ ಕನ್ನಡ ವೇದಿಕೆ ಅಗತ್ಯವೆಂದು ಹಲವರಿಗೆ ಅನಿಸಿದೆ, ಹಾಗಾಗಿ ವಿಚಾರ ವಿನಿಮಯ ನಡೆಸಿ ನಿರ್ಣಯ ಕೈಗೊಳ್ಳಲು ಈ ಸಭೆ ಕರೆಯಲಾಗಿದೆ.” ಎಂದರು.

ಪತ್ರಕರ್ತ ಜಾನ್ ಡಿಸೋಜಾ, ಮುಂಬೈ ಕುಂದಾಪ್ರ ಕನ್ನಡ ಬಳಗದ ವೆಂಕಟೇಶ ಪೈ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ, ಹಿರಿಯ ವಕೀಲ ಟಿ. ಬಿ. ಶೆಟ್ಟಿ, ಶಿಕ್ಷಕಿ ಜಯಶೀಲ ಕಾಮತ್ ಕುಂಭಾಸಿ, ಹಿರಿಯ ಶಿಕ್ಷಕರಾದ ಜಯಶೀಲ ಶೆಟ್ಟಿ, ಸೀತಾರಾಮ ಶೆಟ್ಟಿ ಕೆದೂರು ಮಾತನಾಡಿ, ಕುಂದಾಪ್ರ ಕನ್ನಡ ವೇದಿಕೆ ಯ ಅಗತ್ಯತೆ ಬಗ್ಗೆ ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ| ಉಮೇಶ್ ಪುತ್ರನ್, ಕುಂದಾಪ್ರ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸ್ಥಾಪಿಸುವ ನಿರ್ಣಯ ಮಂಡಿಸಿದರು. ಸಭೆ ಅನುಮೋದನೆ ನೀಡಿತು.

ಕೃಷ್ಣ ಪ್ರಸಾದ ಅಡ್ಯಂತಾಯ, ಕೊರ್ಗಿ ವಿಠಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹತ್ತು ಸಾವಿರ ರೂ. ವೇದಿಕೆಗೆ ಒದಗಿಸುವ ಘೋಷಣೆ ಮಾಡಿದರು.

ಸಾಲಗದ್ದೆ ಶಶಿಧರ ಶೆಟ್ಟಿ, ಬುದ್ಧರಾಜ ಶೆಟ್ಟಿ, ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಎಸ್. ದಯಾನಂದ ರಾವ್ ಶಂಕರನಾರಾಯಣ, ಕೆ. ಕರುಣಾಕರ ಶೆಟ್ಟಿ, ವೈ. ಸೀತಾರಾಮ ಶೆಟ್ಟಿ ಕುಂದಾಪುರ, ಸತೀಶ್ ಶೆಟ್ಟಿ ಕುಂದಾಪುರ, ಸುನಿಲ್ ಶೆಟ್ಟಿ ಹೇರಿಕುದ್ರು, ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಪಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ನಿತೀಶ್ ಶೆಟ್ಟಿ ಬಸ್ರೂರು, ಸುಬ್ಬಣ್ಣ ಕೋಣಿ, ಶಂಕರನಾರಾಯಣ ಕುಂದಾಪುರ, ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಬಿ. ಸುರೇಶ ನಾಯಕ್, ದಿವಾಕರ ಶೆಟ್ಟಿ ಬಸ್ರೂರು, ಕೆ. ಎಸ್. ಮಂಜುನಾಥ್, ಶೇಖರ ಎನ್. ಶೆಟ್ಟಿ, ಕೃಷ್ಣಪ್ಪ ಶೆಟ್ಟಿ ಆಲೂರು, ಎಚ್. ಸೋಮಶೇಖರ ಶೆಟ್ಟಿ, ಪ್ರಕಾಶ್ ಹೆಬ್ಬಾರ್ ನಾಡ, ರಾಮರತನ್ ಶೆಟ್ಟಿ ಕುಂದಾಪುರ, ಕೆ. ರಮೇಶ್ ಶೆಟ್ಟಿ, ಎ. ಮುತ್ತಯ್ಯ ಶೆಟ್ಟಿ ಕುಂದಾಪುರ, ಎನ್. ನಿತ್ಯಾನಂದ ಶೆಟ್ಟಿ ಹಂಗ್ಲೂರು, ಎಚ್. ಸುರೇಶ್ ಕುಮಾರ್ ಶೆಟ್ಟಿ, ಶಿರೂರು, ಎಸ್. ರಾಜೀವ ಶೆಟ್ಟಿ ಕುಂದಾಪುರ, ಕೆಂಚನೂರು ಸೋಮಶೇಖರ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಕೆ. ಆರ್. ನಾಯ್ಕ್ ಹಂಗ್ಲೂರು, ರಾಜೀವ ನಾಯ್ಕ, ಡಾ| ಬಿ. ವಿ. ಉಡುಪ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಕುಂದಾಪ್ರ ಕನ್ನಡ ಹಾಡು ಹಾಡಿದರು. ಕುಂದಾಪ್ರ ಕನ್ನಡ ಚಿತ್ರ ನಿರ್ದೇಶಕ ಶ್ರೀರಾಜ್ ಕೊಠಾರಿಯವರನ್ನು ಗೌರವಿಸಲಾಯಿತು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!