Monday, September 9, 2024

ಕುಂದಾಪ್ರ ಕನ್ನಡ ಸಣ್ಣ ಕಥಾ ಸ್ಪರ್ಧೆ: ‘ಕಾನು ನಾಯ್ಕರ್ ಕಾನಿಸ್ಮಾರಿ’ ಕಥೆಗೆ ಮೊದಲ ಬಹುಮಾನ

ಕುಂದಾಪುರ : ಆ.17 ಹಾಗೂ 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕುಂದಾಪ್ರ ಕನ್ನಡ ಹಬ್ಬದ ಪ್ರಯುಕ್ತ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಇದರ ಪ್ರಾಯೋಜಕತ್ವದಲ್ಲಿ ನಿಂದೊಳ್ಳೆ ಕತಿಯಾಯ್ತಲ್ಲ ಮಾರಾಯ್ತಿ !’ ಎನ್ನುವ ಶೀರ್ಷಿಕೆಯಲ್ಲಿ ನಡೆಸಲಾದ ಕುಂದಾಪ್ರ ಕನ್ನಡದ ಸಣ್ಣ ಕಥಾ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ ನೆಲೆಸಿರುವ ಚನ್ನ ಎಂ ಪೂಜಾರಿ ಅವರು ಬರೆದ ಕಾನು ನಾಯ್ಕರ್ ಕಾನಿಸ್ಮಾರಿ’ ಕಥೆಗೆ ಮೊದಲ ಬಹುಮಾನ ಬಂದಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಾರ್ಕೂರು ಡಾ.ದೀಪಕ್‌ಕುಮಾರ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜಾಪುರದ ಆಶೀಷ್ ಮಾರಾಳಿ ಅವರ ಗಿಡ್ಕೆ ತೊಟ್ಲ್ ಕಟ್ಟಿ’ ಕಥೆಗೆ ದ್ವಿತೀಯ, ಕುಂಭಾಶಿಯ ಜ್ಯೋತಿಲಕ್ಷ್ಮೀ ಅವರ ’ಗುಲಾಬಿ ರವ್ಕಿ’ಗೆ ತೃತೀಯ ಬಹುಮಾನ ದೊರಕಿದೆ. ಹಾಲಾಡಿಯ ವಿಜಯಶ್ರೀ ಅವರ ಮಾಣಿಕಿಬಾಯಿ’, ವಡ್ಡರ್ಸೆ ಕೊತ್ತಾಡಿಯ ಮಂಜುನಾಥ್ ಶೆಟ್ಟಿ ಅವರ ’ ಹಣಿ ಬರು ’, ಶಿವಮೊಗ್ಗದ ಸುಚಿತ್ರಾ ಆರ್ ಶೆಟ್ಟಿ ಅವರ ’ ನೆತ್ರ್ ’, ಗುಳ್ಳಾಡಿ ದಿಲೀಪ್ ಶೆಟ್ಟಿ ಅವರ ಚೋಣಿ ’, ಹಿಲಿಯಾಣ ಮಂಜುನಾಥ್ ಅವರ ’ ಚೋಮ ಮತ್ತು ಡೋಲ್’, ಕಂಬದಕೋಣೆಯ ಮಿಥುನ್ ಅವರ ಹೆಗ್ಗೋಲಿ ಆಣ್ಬ್’ ಹಾಗೂ ಬೆಂಗಳೂರಿನ ಅಶ್ವಿನಿ ಎಸ್.ಜಿ ಅವರ ’ ಅಬ್ಬಿ ಅಂಬಳ್ ಸಂಕ್ಟ ’ ಅವರ ಕಥೆಗಳು ಮೆಚ್ಚುಗೆಗೆ ಪಾತ್ರವಾಗಿದೆ.

ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನಿತರಿಗೆ ರೂ. ೧೦,೦೦೦, ಎರಡನೆಯವರಿಗೆ ರೂ. ೭,೦೦೦, ಮೂರನೆಯವರಿಗೆ ರೂ. ೪,೦೦೦ ನಗದು ಸಹಿತ ಪ್ರಶಸ್ತಿ ಹಾಗೂ ಸಮಾಧಾನಕರ ಬಹುಮಾನ ಪಡೆದವರಿಗೆ ಪುಸ್ತಕ ನೀಡಲಾಗುವುದು. ಆ.೧೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ೩ನೇ ವರ್ಷದ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಮೊದಲ ಬಾರಿ ನಡೆಸಲಾದ ಕುಂದಾಪ್ರ ಕನ್ನಡದ ಕಥಾ ಸ್ಪರ್ಧೆಗೆ ದೇಶದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು,೧,೬೦೦ ಸ್ಪರ್ಧಿಗಳು ಕಥೆಯನ್ನು ಕಳುಹಿಸಿದ್ದರು. ಮೂರು ಹಂತಗಳಲ್ಲಿ ಪರಿಶೀಲನೆ ಹಾಗೂ ವಿಮರ್ಶೆಯನ್ನು ನಡೆಸಿ ತೀರ್ಮಾನಕಾರರು ಫಲಿತಾಂಶ ಪ್ರಕಟಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!