spot_img
Wednesday, April 1, 2026
spot_img

ನಾಗೂರು: ಬಾವಿಯಲ್ಲಿ ಮೊಸಳೆ ಪತ್ತೆ

ಬೈಂದೂರು ತಾಲೂಕು ನಾಗೂರು ಕೊಡೇರಿ ರಸ್ತೆಯ ಉಡುಪರ ಮನೆಯ ಬಾವಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಸಮುದ್ರದಿಂದ ಸುಮಾರು 100 ಮೀಟರ್ ಅಂತರದಲ್ಲಿ ಬಾವಿ ಇದ್ದು ಈ ಬಾವಿಯಲ್ಲಿ ಜು.30ರಂದುಮ ಮೊಸಳೆ ಪತ್ತೆಯಾಗಿ ಆತಂಕ ಸೃಷ್ಟಿಸಿತು.

ನಾಗೂರು ಗ್ರಾಮದ ಒಡೆಯರ ಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ದಿಢೀರನೆ ಕಾಣಿಸಿಕೊಂಡಿದೆ.

ಸಮುದ್ರದಿಂದ ಸುಮಾರು 100 ಮೀಟರ್ ಅಂತರದಲ್ಲಿ ಬಾವಿ ಇದ್ದು ಈ ಬಾವಿಯಲ್ಲಿ ಜು.೩೦ರಂದುಮ ಮೊಸಳೆ ಪತ್ತೆಯಾಗಿ ಆತಂಕ ಸೃಷ್ಟಿಸಿತು. ಸಾಕಷ್ಟು ದೊಡ್ಡ ಗಾತ್ರದ ಮೊಸಳೆ ಇದಾಗಿದ್ದು ರಾತ್ರಿ ವೇಳೆ ಸಮುದ್ರದಿಂದ ಮೇಲೆ ಬಂದಿರಬೇಕು ಎಂದು ಅಂದಾಜಿಸಲಾಗಿದೆ. ಆವರಣ ಗೋಡೆ ಇರುವ ಬಾವಿಗೆ ಮೊಸಳೆ ಹೇಗೆ ಹೋಯಿತು? ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಮೊಸಳೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ದಳ ಕಂದಾಯ ಇಲಾಖೆ ಅವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕುವುದರ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಲೆ, ಬೋನುಗಳನ್ನು ಸ್ಥಳಕ್ಕೆ ತರಲಾಗಿದೆ. ಮಾಂಸದ ಆಮಿಷ ತೋರಿಸಿ ಮೊಸಳೆಯನ್ನು ಸೆರೆ ಹಿಡಿಯುವ ಕಾರ್ಯವೂ ನಡೆಯುತ್ತಿದೆ.

ನಾಗೂರು ನೆಟ್ವರ್ಕ್ ಅಂಡ್ ಸೆಕ್ಯೂರಿಟಿ ಸಲ್ಯೂಷನ್ ಇವರ ಸಹಕಾರದೊಂದಿಗೆ ಬಾವಿಯ ಸುತ್ತಲೂ ಸಿ ಸಿ ಕ್ಯಾಮೆರಾವನ್ನು ಅಳವಡಿಸಿ ದೂರದಿಂದ ಕಂಪ್ಯೂಟರ್ ಮೂಲಕ ಮೊಸಳೆಯ ಚಲನವಲನ ಗಮನಿಸಲಾಗುತ್ತಿದೆ.

 

 

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!