spot_img
Saturday, December 7, 2024
spot_img

ಕೋಟ ವಿವೇಕ ಪದವಿ ಪೂರ್ವ ಕಾಲೇಜು: ವಿಶಿಷ್ಟ ಸಾಧಕರಿಗೆ ಸನ್ಮಾನ

ಕೋಟ: ವಿವೇಕ ಪದವಿ ಪೂರ್ವ ಕಾಲೇಜಿನ ೨೦೨೩ – ೨೪ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.

ಕೋಟ ವಿದ್ಯಾ ಸಂಘ (ರಿ )ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಜಿ, ಅರುಣ್ ಮಯ್ಯ ಪ್ರೊಫೆಸರ್, ಫಿಜಿಯೋಥೆರಪಿ ವಿಭಾಗ ಎಂ ಸಿ ಎಚ್ ಪಿ ಮಾಹೆ ಮಣಿಪಾಲ ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ , ಕೋಟ ವಿವೇಕ ವಿದ್ಯಾಸಂಸ್ಥೆ ಕೋಟದ ಗ್ರಾಮೀಣ ಪರಿಸರದಲ್ಲಿ ಇದ್ದರೂ ಇದು ಕೇವಲ ನಮ್ಮ ಜಿಲ್ಲೆಯಲ್ಲಿ ಮಾತ್ರ ವಲ್ಲ ಇಡೀ ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ವಿದ್ಯಾಸಂಸ್ಥೆಯಾಗಿದೆ. ಇಲ್ಲಿ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳಲ್ಲೂ ಕೂಡ ಸಮಾನವಾದ ಸ್ಥಾನವನ್ನು ನೀಡಲಾಗುತ್ತಿದೆ. ಇಲ್ಲಿ ಅಧ್ಯಯನ ಮಾಡಿದ ಈ ಹಿಂದಿನ ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ಕಲಿಸಿದ ಪಾಠ ಮತ್ತು ಶಿಸ್ತು , ಜೀವನ ಮೌಲ್ಯಗಳು ಅಳವಡಿಸಿಕೊಂಡು ಸಮಾಜದ ಉನ್ನತ ಸ್ಥಾನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಅವಕಾಶ ಸಿಕ್ಕಿದಲ್ಲಿ ಅದೊಂದು ವಿದ್ಯಾರ್ಥಿಗಳ ಸೌಭಾಗ್ಯವೇ ಸರಿ.
ಆದ್ದರಿಂದ ವಿದ್ಯಾರ್ಥಿಗಳು ತಮಗೆ ದೊರಕಿದ ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಹಾಗೆ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿದಾಗ ಕೇವಲ ಡಾಕ್ಟರ್ ಆಗುವುದು ಅಥವಾ ಇಂಜಿನಿಯರ್ ಆಗುವುದು ಮಾತ್ರವಲ್ಲ ಸಾಕಷ್ಟು ಬೇರೆಬೇರೆ ಕೋರ್ಸ್ ಗಳಲ್ಲಿ ಉನ್ನತ ಅಧ್ಯಯನ ಪಡೆಯುವಂತಹ ಅವಕಾಶಗಳು ಇರಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅ ಂ ಪಿ ಪ್ರಭಾಕರ್ ಮುಯ್ಯರು , ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದದ್ದು ಸಾಧನೆಯಾಗಿದೆ ಆದರೆ ಇದು ಸಾಧನೆಯ ಆರಂಭ ಮಾತ್ರ ಇಲ್ಲಿಗೆ ಇದು ಅಂತ್ಯ ಆಗಬಾರದು ಇನ್ನಷ್ಟು ಕೂಡ ಹೆಚ್ಚಿನ ಸಾಧನೆ ಮಾಡಬೇಕು. ನಿರಂತರ ಪರಿಶ್ರಮ ,ಸತತವಾದ ಅಧ್ಯಯನದಿಂದ ವಿದ್ಯಾರ್ಥಿಗಳು ಯಶಸ್ಸನ್ನ ಪಡೆಯಬಹುದೆಂದು .ತಿಳಿಸಿದರು.

ವಿದ್ಯಾ ಸಂಘದ ಕಾರ್ಯದರ್ಶಿ ಎಂ , ರಾಮದೇವ ಐತಾಳರು ಶುಭಹಾರೈಸಿದರು.ಕೋಶಾಧಿಕಾರಿ ವಲೇರಿಯನ್ ಮೆನೇಜಸ್ ಮತ್ತು ಜೊತೆ ಕಾರ್ಯದರ್ಶಿ ಶ್ರೀ ಪಿ ಮಂಜುನಾಥ್ ಉಪಾಧ್ಯರು ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ ಶ್ರೀಪ್ರಿಯಾ ಪಿ ಅಡಿಗ ಮತ್ತು ೯ನೇ ಸ್ಥಾನ ಗಳಿಸಿದ ಅಕ್ಷಯ ಶಾಸ್ತ್ರಿ,ವಿಭಾವನ ಹೇರಳೆ ಮತ್ತು NATA ಎಕ್ಸಾಂ ನಲ್ಲಿ ರಾಜ್ಯಕ್ಕೆ ೭ನೇ ಸ್ಥಾನ ಗಳಿಸಿದ ಶ್ರೀ ಲಕ್ಷ್ಮೀ ಸೋಮಯಾಜಿ ಇವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು .ಇದರೊಂದಿಗೆ ೨೩೨ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಪೋಷಕರ ಸಮ್ಮುಖದಲ್ಲೇ ಗುರುತಿಸಲಾಯಿತು ಉಪನ್ಯಾಸಕ  ರವಿ ಕಾರಂತ್ ಧನ್ಯವಾದವಿತ್ತರು. ಉಪನ್ಯಾಸಕ ಸದಾಶಿವ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!