Thursday, November 14, 2024

ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಸುಧಾಮೂರ್ತಿ ರಾಜ್ಯ ಸಭೆಯಲ್ಲಿ ಸಲಹೆ : ಮೋದಿ ಪ್ರಶಂಸೆ

ಜನಪ್ರತಿನಿಧಿ (ನವದೆಹಲಿ) : ರಾಜ್ಯಸಭೆಯ ಸದಸ್ಯರಾಗಿ ಸುಧಾಮೂರ್ತಿ ಅವರು ಮಾಡಿರುವ ಚೊಚ್ಚಲ ಭಾಷಣದಲ್ಲೇ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ನಿನ್ನೆ(ಬುಧವಾರ) ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದ ಸುಧಾಮೂರ್ತಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮದ ಅಗತ್ಯವಿದೆ. ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸುಧಾಮೂರ್ತಿ ಅವರನ್ನು ಅಭಿನಂದಿಸಿದ್ದು, ”ಮಹಿಳೆಯರ ಆರೋಗ್ಯದ ಕುರಿತು ವಿವರವಾಗಿ ಮಾತನಾಡಿದ ಸುಧಾ ಮೂರ್ತಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಆದ್ಯತಾ ವಲಯವಾಗಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಗಮನ ಹರಿಸಿದೆ” ಎಂದು ಹೇಳಿ ಸುಧಾಮೂರ್ತಿ ಅವರು ತಾಯಂದಿರ ಕುರಿತು ಭಾವನಾತ್ಮಕವಾಗಿ ಆಡಿದ ಮಾತುಗಳನ್ನು ಪ್ರಸ್ತಾಪಿಸಿ ಶ್ಲಾಘಿಸಿದರು.

ಸುಧಾಮೂರ್ತಿ ತಮ್ಮ ಚೊಚ್ಚಲ ಭಾಷಣದಲ್ಲಿ ಏನಂದಿದ್ದರು ?
ಒಂಬತ್ತು ಮತ್ತು 14 ವರ್ಷದೊಳಗಿನ ಹುಡುಗಿಯರಿಗೆ ನೀಡಲು ಲಸಿಕೆ ಇದೆ. ಇದನ್ನು ಗರ್ಭಕಂಠದ ಲಸಿಕೆ ಎಂದು ಕರೆಯಲಾಗುತ್ತದೆ. ಹುಡುಗಿಯರು ಅದನ್ನು ತೆಗೆದುಕೊಂಡರೆ, ಕ್ಯಾನ್ಸರ್ ತಪ್ಪಿಸಬಹುದು. ನಮ್ಮ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ನಾವು ಲಸಿಕೆಯನ್ನು ಉತ್ತೇಜಿಸಬೇಕು. ಯಾಕೆಂದರೆ, ಚಿಕಿತ್ಸೆಗಿಂತ ತಡೆಗಟ್ಟುವಿಕೆಯ ಉಪಕ್ರಮಗಳು ಮುಖ್ಯ’ ಎಂದು ಸುಧಾಮೂರ್ತಿ ಪ್ರತಿಪಾದಿಸಿದ್ದರು.

ಅಲ್ಲದೆ ‘ಸರ್ಕಾರವು ಕೋವಿಡ್ ಸಮಯದಲ್ಲಿ ದೊಡ್ಡ ಲಸಿಕಾ ಅಭಿಯಾನ ನಡೆಸಿದೆ. ಆದ್ದರಿಂದ 9-14 ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಲಸಿಕೆ ನೀಡುವುದು ತುಂಬಾ ಕಷ್ಟಕರವಾಗುವುದಿಲ್ಲ. ಗರ್ಭಕಂಠದ ಲಸಿಕೆಯನ್ನು ಪಶ್ಚಿಮದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಕಳೆದ 20 ವರ್ಷಗಳಿಂದ ಬಳಸಲಾಗುತ್ತಿದೆ’ ಎಂದಿದ್ದರು.

ಅಷ್ಟಲ್ಲದೇ, ದೇಶದ ಪ್ರವಾಸೋಧ್ಯಮದ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿ ಅವರು, ”57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವ ಪಾರಂ‍ಪರಿಕ ತಾಣಗಳೆಂದು ಪರಿಗಣಿಸಬೇಕು. ಇವುಗಳಲ್ಲಿ ಕರ್ನಾಟಕದ ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ, ಲಿಂಗರಾಜ ದೇವಾಲಯ ಸೇರಿವೆ ಎಂದು ಉಲ್ಲೇಖಿಸಿದ್ದರು.

Excellent maiden speech by SudhaMurthy in RajyaSabha

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!