spot_img
Saturday, December 7, 2024
spot_img

NEET UG 2024: ಮರು ಪರೀಕ್ಷೆಯ ಫಲಿತಾಂಶ ಪ್ರಕಟ

ಜನಪ್ರತಿಧಿ (ನವದೆಹಲಿ) : ನೀಟ್‌-ಯುಜಿ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು(ಸೋಮವಾರ) ಪ್ರಕಟಿಸಿದೆ.

ಅಕ್ರಮ ಗ್ರೇಸ್‌ ಮಾರ್ಕ್ಸ್‌ ಪಡೆದಿರುವ ಕಾರಣದಿಂದಾಗಿ 1,563 ಅಭ್ಯರ್ಥಿಗಳಿಗೆ ಈ ಮರು ಪರೀಕ್ಷೆಯನ್ನು ನಡೆಸಲಾಗಿದ್ದು ಅವರ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದೆ.

ಈ ಫಲಿತಾಂಶ ಪ್ರಕಟದ ಜೊತೆಗೆ ಎಲ್ಲಾ 24 ಲಕ್ಷ ವಿದ್ಯಾರ್ಥಿಗಳ ರಾಂಕಿಂಗ್ ಕೂಡ ಬದಲಾಗಿದ್ದು, ತಮ್ಮ ತಮ್ಮ ರ್ಯಾಂಕಿಂಗ್ ಯಾವ ಹಂತದಲ್ಲಿ ಏರಿಳಿತವಾದಿರಬಹುದು ಎಂಬುದನ್ನು ವಿದ್ಯಾರ್ಥಿಗಳು ಪರಿಶೀಲಿಸಬಹುದಾಗಿದೆ.

ಮೇ 5 ರಂದು ನಡೆದ ಮೂಲ ನೀಟ್ ಯುಜಿ ಪರೀಕ್ಷೆಯ ಸಮಯದಲ್ಲಿ ಉಂಟಾದ “ಸಮಯದ ನಷ್ಟ” ದಿಂದಾಗಿ ಹೆಚ್ಚುವರಿ ಅಂಕಗಳನ್ನು ಈ 1563 ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಈ ಬಗ್ಗೆ ದೇಶದಾದ್ಯಂತ ದೊಡ್ಡ ಮಟ್ಟದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಗಳ ಅಂಕಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ರದ್ದು ಮಾಡಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಈ ಅಭ್ಯರ್ಥಿಗಳು ಪರೀಕ್ಷೆಯನ್ನು ಮರುಪಡೆಯಲು ಅಥವಾ ಗ್ರೇಸ್ ಅಂಕಗಳಿಲ್ಲದೆ ತಮ್ಮ ಮೂಲ ಅಂಕಗಳನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಕೊಡಲಾಗಿತ್ತು.

ಜೂನ್ 23 ರಂದು ನಡೆದ ಮರು ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪೈಕಿ 813 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.

ಜೂನ್ 4 ರಂದು ಘೋಷಿಸಲಾದ ಮೂಲ NEET UG 2024 ಪರೀಕ್ಷೆಯ ಫಲಿತಾಂಶಗಳು, ಪೇಪರ್ ಸೋರಿಕೆ ಮತ್ತು ಅಕ್ರಮಗಳ ಆರೋಪಗಳಿಂದ ವಿವಾದವನ್ನು ಎದುರಿಸಿದ್ದು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಅಂದರೆ 67 ವಿದ್ಯಾರ್ಥಿಗಳು ಈ ಸಲ 720 ರಲ್ಲಿ 720 ಪರಿಪೂರ್ಣ ಅಂಕಗಳನ್ನು ಪಡೆದು ಒಟ್ಟಾರೆ ನೀಟ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜನರು ಮತ್ತು ಶಿಕ್ಷಣ ತಜ್ಞರಲ್ಲಿ ಅನುಮಾನ ಮೂಡಿಸಿತ್ತು.

ಶಿಕ್ಷಣ ಸಚಿವಾಲಯವು ಈ ವಿಷಯವನ್ನು ನಂತರ ಸಿಬಿಐ ತನಿಖೆಗೆ ಒಪ್ಪಿಸಿದ್ದು, ಈಗ ಸಿಬಿಐ ತನಿಖೆ ನಡೆಯುತ್ತಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!