Saturday, October 12, 2024

‘ರೇಡಿಯೋ ಕುಂದಾಪ್ರ’ಕ್ಕೆ ಬಿ.ಅಪ್ಪಣ್ಣ ಹೆಗ್ಡೆ ಭೇಟಿ

ಕುಂದಾಪುರ: ಭಂಡಾರ್‌ಕಾರ್‍ಸ್ ಕಾಲೇಜಿನ ರೇಡಿಯೋ ಕುಂದಾಪ್ರ ೮೯.೬ ಎಫ್. ಎಂ. ಸಮುದಾಯ ಬಾನುಲಿ ಕೇಂದ್ರಕ್ಕೆ ಬಿ. ಅಪ್ಪಣ್ಣ ಹೆಗ್ಡೆ ಭೇಟಿ ನೀಡಿದರು.

ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು, ಟಿ. ಪ್ರಕಾಶ ಸೋನ್ಸ್, ರಾಜೇಂದ್ರ ತೋಳಾರ್, ಕೆ. ದೇವದಾಸ ಕಾಮತ್, ಪ್ರಾಂಶುಪಾಲ ಡಾ| ಶುಭಕರಾಚಾರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ| ಜಿ. ಎಂ. ಗೊಂಡ ಸ್ವಾಗತಿಸಿ, ಅಪ್ಪಣ್ಣ ಹೆಗ್ಡೆಯವರನ್ನು ಗೌರವಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಯು. ಎಸ್. ಶೆಣೈ ರೇಡಿಯೋ ಕುಂದಾಪ್ರ ಸಮುದಾಯ ಬಾನುಲಿ ಕೇಂದ್ರದ ಬಗ್ಗೆ ವಿವರಣೆ ನೀಡಿದರು.
ಬಿ. ಅಪ್ಪಣ್ಣ ಹೆಗ್ಡೆಯವರ ಜೀವನಾನುಭವ ಸಾಧನೆ, ಆಸಕ್ತಿ ಕ್ಷೇತ್ರಗಳ ಕುರಿತು ರೇಡಿಯೋ ಕುಂದಾಪ್ರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ವಿ. ಅಲ್ಸೆ ಸಂದರ್ಶನ ನಡೆಸಿದರು.

ಕುಂದಾಪುರದಲ್ಲಿ ರೇಡಿಯೋ ಕುಂದಾಪ್ರ-೮೯.೬ ಎಫ್. ಎಂ. ಸ್ಥಾಪನೆಗೆ ಬಿ. ಅಪ್ಪಣ್ಣ ಹೆಗ್ಡೆ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!