spot_img
Saturday, December 7, 2024
spot_img

ಸಹೋದರ ರಾಹುಲ್, ನಾನು ನಿಮ್ಮ ಸಹೋದರಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ : ಪ್ರಿಯಾಂಕ ಪ್ರೀತಿಯ ಸಂದೇಶ

ಜನಪ್ರತಿನಿಧಿ (ನವದೆಹಲಿ) : ಈ ಬಾರಿಯ  ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಎಂತದ್ದೇ ಪರಿಸ್ಥಿತಿ ಎದುರಾದರು ರಾಹುಲ್ ಗಾಂಧಿ ಎಂದಿಗೂ ಹಿಂದೆ ಸರಿಯಲಿಲ್ಲ ಹಾಗೂ ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು(ಬುಧವಾರ) ತಮ್ಮ ಸಹೋದರನ ಗುಣಗಾನ ಮಾಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ, ತನ್ನ ಸಹೋದರ ರಾಹುಲ್‌ ಗೆ ಸಂದೇಶ ನೀಡಿರುವ ಪ್ರಿಯಾಂಕಾ, ‘ಅವರು(ಬಿಜೆಪಿಯವರು) ನಿಮಗೆ ಏನೇ ಹೇಳಿದರೂ ಹಾಗೂ ಏನೇ ಮಾಡಿದರೂ ನೀವು ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿ ನಿಂತಿದ್ದೀರಿ, ಯಾವುದೇ ವಿರೋಧಾಭಾಸಗಳಿದ್ದರೂ ನೀವು ಎಂದಿಗೂ ಹಿಂದೆ ಸರಿಯಲಿಲ್ಲ, ಅವರು ನಿಮ್ಮ ನಂಬಿಕೆಯನ್ನು ಎಷ್ಟು ಅನುಮಾನಿಸಿದರೂ ನೀವು ನಂಬಿಕೆಯಲ್ಲಿಯೇ ಇದ್ದಿದ್ದೀರಿ.

ಬಿಜೆಪಿಯ ಸುಳ್ಳಿನ ಪ್ರಚಾರದ ಹೊರತಾಗಿಯೂ ಸತ್ಯಕ್ಕಾಗಿ ನೀವು ನಿರಂತರವಾಗಿ ಶ್ರಮಿಸಿದ್ದೀರಿ. ಪ್ರತಿದಿನ ಅಪಪ್ರಚಾರವನ್ನು ನಿಮಗೆ ಉಡುಗೊರೆ ಎಂಬಂತೆ ನೀಡಿದರೂ ಸಹ ಕೋಪ ಮತ್ತು ದ್ವೇಷವು ನಿಮ್ಮನ್ನು ಜಯಿಸಲು ನೀವು ಎಂದಿಗೂ ಅನುಮತಿ ನೀಡಲಿಲ್ಲ’ ಎಂದಿದ್ದಾರೆ

‘ನೀವು ನಿಮ್ಮ ಹೃದಯದಲ್ಲಿನ ಪ್ರೀತಿ, ಸತ್ಯ ಮತ್ತು ದಯೆಯಿಂದ ಹೋರಾಡಿದ್ದೀರಿ. ಕೆಲವರು ಮೊದಲು ನಿಮ್ಮ ಆತ್ಮಸ್ಥೈರ್ಯವನ್ನು ಗಮನಿಸದಿದ್ದರೂ, ಅವರು ಈಗ ಅದನ್ನು ನೋಡಲು ಸಮರ್ಥರಾಗಿದ್ದಾರೆ. ಆದಾಗ್ಯೂ, ನಿಮ್ಮ ಧೈರ್ಯವನ್ನು ಯಾವಾಗಲೂ ತಿಳಿದಿರುವ ಮತ್ತು ಒಪ್ಪಿಕೊಂಡಿರುವ ಇತರರು ಇದ್ದಾರೆ. ಸಹೋದರ ರಾಹುಲ್ ಗಾಂಧಿ, ನಾನು ನಿಮ್ಮ ಸಹೋದರಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ’ ಎಂದು ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ನೀಡಿದ್ದಾರೆ.

https://x.com/priyankagandhi/status/1798236583352557855

2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದು, ಉತ್ತಮ ಪ್ರದರ್ಶ ನೀಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!