Saturday, September 14, 2024

ಮುಂಗಾರು: ಸೂಕ್ತ ಮುಂಜಾಗರೂಕ ಕ್ರಮ ಅಗತ್ಯ

ಮುಂಗಾರು ಸಮೀಪಿಸುತ್ತಿದೆ. ಮುಂಗಾರು ಸಮಯದಲ್ಲಿ ಸಂಭವಿಸಬಹುದಾದ ಸಂಭಾವ್ಯ ಅನಾಹುತಗಳ ಅರಿವು ಇದ್ದೇ ಇರುತ್ತದೆ. ಅವಘಡ ಸಂಭವಿಸದಂತೆ ತಡೆಯು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯತೆಗಳಿವೆ. ಸರ್ಕಾರಗಳು ಕೂಡಾ ಅದನ್ನೇ ಪುನರುಚ್ಚಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿ‌ಇ‌ಓಗಳ ಸಭೆ ನಡೆಸಿ ಮುಂಗಾರು ತಯಾರಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಸಕ್ತ ಮುಂಗಾರು ಮಳೆ ಹಾಗೂ ಚಂಡಮಾರುತಗಳ ಪರಿಣಾಮಗಳನ್ನು ತಗ್ಗಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಮುಂಗಾರು ಮುನ್ಸೂಚನೆಯನ್ವಯ ರಾಜ್ಯದಲ್ಲಿ ಪ್ರಸ್ತುತ ಮುಂಗಾರಿನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇರುತ್ತದೆ ಎನ್ನುವ ವಿಚಾರವನ್ನು ಒತ್ತಿ ಹೇಳಿದೆ. ಜಿಲ್ಲೆಯಲ್ಲಿ ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯ ಸಮುದಾಯಕ್ಕೆ ಅರಿವು ಮೂಡಿಸುವ ಕರ್ತವ್ಯವನ್ನು ಜವಬ್ದಾರಿಯಿಂದ ಮಾಡಬೇಕಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗುವ ಅನಾಹುತಗಳು ಪ್ರತಿವರ್ಷವೂ ಆಗುವುದರಿಂದ ಸೂಕ್ತ ಮುಂಜಾಗರೂಕ ಕ್ರಮಗಳನ್ನು ಮುಂಚಿತವಾಗಿ ಕೈಗೊಳ್ಳಲು ಸಾಧ್ಯವಿದೆ. ನೆರೆಪೀಡಿತ ಪ್ರದೇಶಗಳ ಮಾಹಿತಿ ಮುಂಚಿತವಾಗಿ ಇರುತ್ತದೆ.ಅದೇ ರೀತಿ ಅಸುರಕ್ಷಿತವಾದ ಹೊಂಡಗಳು, ಕಲ್ಲುಕೊರೆ, ಕೊಜೆ ಹೊಂಡ, ಮದಗ, ತೆರೆದ ಬಾವಿ, ಕೆರೆಗಳನ್ನು ಕೂಡಾ ಗುರುತಿಸಿ ಸೂಕ್ತ ತಡೆಬೇಲಿಯನ್ನಾದರೂ ಮಾಡುವುದರ ಬಗ್ಗೆ ಗಮನ ಹರಿಸಬೇಕಾಗಿದೆ. ಮಳೆಯ ಅಬ್ಬರ ಆರಂಭವಾಗುವ ಮೊದಲೆ ಸಂಭಾವ್ಯ ಅನಾಹುತಗಳ ಬಗ್ಗೆ ಸೂಕ್ತ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಸೂಕ್ತ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳದೆ ಅನಾಹುತಗಳು ಸಂಭವಿಸಿದರೆ ಸಂಭಂಧಪಟ್ಟ ಅಧಿಕಾರಿಗಳನ್ನೇ ಜವಬ್ದಾರನ್ನಾಗಿ ಮಾಡಬೇಕು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!