spot_img
Thursday, December 5, 2024
spot_img

ಇ.ಡಿ ಪ್ರಶ್ನೆಗಳಿಗೂ ಮೋದಿ ʼನನ್ನನ್ನು ದೇವರು ಕಳುಹಿಸಿದ್ದಾನೆʼ ಎಂದು ಹೇಳಬಹುದು : ರಾಗಾ ವ್ಯಂಗ್ಯ

ಜನಪ್ರತಿನಿಧಿ (ಪಟ್ನಾ) : ಸುದೀರ್ಘ ಭಾಷಣ ಮಾಡುವುದನ್ನು ಬಿಟ್ಟು, ದೇಶವನ್ನು ವಿಭಜಿಸುವುದನ್ನು ನಿಲ್ಲಿಸಿ, ಇಲ್ಲಿನ ಯುವಕರಿಗೆ ಎಷ್ಟು ಉದ್ಯೋಗ ನೀಡಿದ್ದೀರೆಂದು ಹೇಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

ಬಿಹಾರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಗಾ, ಜೂ.೦4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನಂತರ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ನನ್ನನ್ನು ʼದೇವರು ಕಳುಹಿಸಿದ್ದಾರೆʼ ಎಂದು ಉತ್ತರಿಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

https://x.com/ANI/status/1794999846958715213

ದೇಶದಲ್ಲಿ ಸ್ವಾತಂತ್ರ್ಯ ನಂತರ ಹಲವು ರಾಜ್ಯಗಳಲ್ಲಿ ರಾಜ ಪ್ರಭುತ್ವವನ್ನು ತೊಡೆದು ಹಾಕಲು ಪ್ರಯತ್ನ ಮಾಡಿತು. ಆದರೇ ಪ್ರಧಾನಿ ಮೋದಿ ರಾಜ್ಯಗಳಲ್ಲಿ ಅದಾನಿ ಹಾಗೂ ಅಂಬಾನಿ ಎಂಬ ಹೊಸ ರಾಜರುಗಳನ್ನು ನೇಮಕ ಮಾಡಿದ್ದಾರೆ. ಜೂನ್‌ 4 ರ ನಂತರ ಇಡಿ ಅಧಿಕಾರಿಗಳು ಭ್ರಷ್ಟಾಚಾರ ಹಾಗೂ ಬಂಡವಾಳಶಾಹಿ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಅವರನ್ನು ಪ್ರಶ್ನೆ ಮಾಡುತ್ತಾರೆ. ಆಗ ಕೂಡ ಪ್ರಧಾನಿ ʼನನ್ನನ್ನು ದೇವರು ಕಳುಹಿಸಿದ್ದಾನೆʼ ಎಂದು ಹೇಳಿದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ವಿಡಂಬನೆ ಮಾಡಿದ್ದಾರೆ.

https://x.com/ANI/status/1794997213698945189

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!