spot_img
Saturday, December 7, 2024
spot_img

ಮತಗಟ್ಟೆವಾರು ಅಂಕಿಅಂಶಗಳನ್ನು ಪ್ರಕಟಿಸುವಂತೆ ಇಸಿಐ ಗೆ ನಿರ್ದೇಶಿಸಲು ಸುಪ್ರೀಂ ಕೋರ್ಟ್‌ ನಕಾರ

ಜನಪ್ರತಿನಿಧಿ (ನವದೆಹಲಿ) : ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲೋಕಸಭಾ ಚುನಾವಣೆಯ ಮತದಾನದ ಅಂಕಿ ಅಂಶವನ್ನು ಮತಗಟ್ಟೆವಾರು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸರ್ಕಾರೇತರ ಸಂಸ್ಥೆವೊಂದು ಸಲ್ಲಿಸಿದ್ದ ಅರ್ಜಿ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡವುದಕ್ಕೆ ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ಹೇಳಿದೆ.

ಈಗಾಗಲೇ ಐದು ಹಂತಗಳ ಮತದಾನ ಈಗಾಗಲೇ ನಡೆದಿದೆ, ಮತದಾನದ ಅಂಕಿ ಅಂಶವನ್ನು ಮತಗಟ್ಟೆವಾರು ಪ್ರಕಟಿಸಲು ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವುದು ಚುನಾವಣಾ ಆಯೋಗಕ್ಕೆ ದುಸ್ತರವಾಗಲಿದೆ. ಇನ್ನು ಎರಡು ಹಂತಗಳ ಮತದಾನ ಬಾಕಿ ಇರುವುದದರಿಂದ ಆ ರೀತಿಯ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಸತೀಶ್ ಚಂದ್ರ ಶರ್ಮಾ ರಜಾ ಕಾಲದ ವಿಭಾಗೀಯ ನ್ಯಾಯಪೀಠ ಹೇಳಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸಾಮಾನ್ಯ ಕಲಾಪದ ಅವಧಿಗೆ ಮುಂದೂಡಿ ಆದೇಶಿಸಿದೆ.

ಮತಗಟ್ಟೆವಾರು ಫಾರ್ಮ್ 17ಸಿ ಅಂಕಿ ಅಂಶವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಮತದಾನ ನಡೆದು 48 ಗಂಟೆಗಳೊಳಗಾಗಿ ಪ್ರಕಟಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಶನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಮೇ 17ರಂದು ಎಡಿಆರ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಬಗ್ಗೆ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಎಲ್ಲ ಮತಗಟ್ಟೆಗಳ ಮತದಾನದ ನಂತರ ಕೂಡಲೇ ಫಾರ್ಮ್ 17ಸಿ(ಮತದಾನದ ದಾಖಲು) ಪ್ರತಿಗಳ ಸ್ಕ್ಯಾನ್‌ ಕಾಪಿಯನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಎಡಿಆರ್ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!