Wednesday, September 11, 2024

ಗಂಗೊಳ್ಳಿ ಎಚ್.ರಂಗನಾಥ ಕಾಮತ್ ನಿಧನ

ಗಂಗೊಳ್ಳಿ : ಪ್ರಸಿದ್ಧ ಹಟ್ಟಿಯಂಗಡಿ ಮನೆತನದ ಹಿರಿಯರಾದ ಗಂಗೊಳ್ಳಿ ನಿವಾಸಿ ಎಚ್.ರಂಗನಾಥ ಕಾಮತ್ (90) ಅಲ್ಪಕಾಲದ ಅಸೌಖ್ಯದಿಂದ ಗಂಗೊಳ್ಳಿಯಲ್ಲಿ ಶನಿವಾರ ನಿಧನರಾದರು.

ಪ್ರಸಿದ್ಧ ಜಮೀನುದಾರರಾಗಿದ್ದ ಇವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಅನೇಕ ವರ್ಷಗಳ ಕಾಲ ಗಂಗೊಳ್ಳಿಯಲ್ಲಿ ವಿನಾಯಕ ಸೋ ಮಿಲ್ ಉದ್ಯಮ ನಡೆಸಿದ್ದ ಇವರು, ಬಸ್ರೂರು ಶ್ರೀ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅನೇಕ ದೇವಾಲಯಗಳ ಜೀಣೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದರು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ತನ್ನದೇ ಆದ ಕೊಡುಗೆ ನೀಡುವ ಮೂಲಕ ಜನಾನುರಾಗಿದ್ದರು. ಮೃತರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!