Wednesday, September 11, 2024

ಎಲ್ಲೆಲ್ಲೂ ಈಗ ಹಲಸು….! ಇದು ಹಲಸಿನ ಋತು

ಕುಂದಾಪುರ: (ಜನಪ್ರತಿನಿಧಿ ವರದಿ) ಹಲಸಿನ ಋತು ಆರಂಭವಾಗಿದೆ. ಈಗ ಎಲ್ಲೇ ನೋಡಿದರೂ ಹಲಸಿನ ಹಣ್ಣಿನದ್ದೆ ಸುಗ್ಗಿ. ಕುಂದಾಪುರ ಸಂತೆಯಲ್ಲಿ ಕೂಡಾ ದೊಡ್ಡ ಪ್ರಮಾಣದಲ್ಲಿಯೇ ಹಲಸಿನ ಹಣ್ಣು ಲಗ್ಗೆ ಇಟ್ಟಿವೆ. ಈ ಬಾರಿ ಸ್ಥಳೀಯವಾಗಿ ಹಲಸಿನ ಬೆಳೆ ಕಡಿಮೆಯಾದರೂ ಕೂಡಾ ಬೇಡಿಕೆಯಷ್ಟು ಹಲಸು ಮಾರುಕಟ್ಟೆ ಪ್ರವೇಶ ಮಾಡಿದೆ. ಸಂತೆಯಲ್ಲಿ ಕೆ.ಜಿ 20 ರೂಗಳಂತೆ ಹಲಸು ಮಾರಾಟವಾಗುತ್ತಿದೆ.


ಏಪ್ರಿಲ್ ಮೇ ತಿಂಗಳಲ್ಲಿ ಹಲಸು ಬೆಳೆಯ ಸೀಸನ್ ಅದರಲ್ಲೂ ಮೇ ತಿಂಗಳೆಂದರೆ ಬೇಜಾನ್ ಹಲಸು ಸಿಗುತ್ತದೆ. ಮಳೆ ಪ್ರಾರಂಭವಾಗುವ ಮುಂಚೆ ಹಲಸು ತಿನ್ನಬೇಕು. ಮಳೆ ಬಿದ್ದ ನಂತರ ಹಲಸಿನ ರುಚಿ ಇರುವುದಿಲ್ಲ. ಹಾಗಾಗಿ ಮೇ ತಿಂಗಳೆಂದರೆ ಹಲಸು ಹಣ್ಣಿನ ಭರಾಟೆಯೇ ನಡೆಯುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಹಲಸಿಗೂ ಒಳ್ಳೆಯ ಮಾರುಕಟ್ಟೆ ಬೇಡಿಕೆ ಬಂದಿದೆ. ಹಲಸಿನ ಮರಗಳು ಮನುಷ್ಯನ ಸ್ವಾರ್ಥಕ್ಕೆ ಬಲಿಯಾದ ಬಳಿಕ ಮಾರುಕಟ್ಟೆಯಿಂದ ದುಬಾರಿ ಹಣ ಕೊಟ್ಟು ಹಲಸು ಹೊತ್ತು ತರಬೇಕಾದ ಸ್ಥಿತಿ ಬಹುತೇಕ ಜನರಿಗೆ ಬಂದು ಬಿಟ್ಟಿದೆ. ಅದರಲ್ಲೂ ಈ ಬೇಸಿಗೆ ತಿಂಗಳು (ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣ ತನಕ) ಜಕಣಿಯ ಪದ್ದತಿ ನಡೆಯುವ ಕಾಲ. ಅದಕ್ಕೆ ಹಲಸಿನ ಹಣ್ಣಿನ ಖಾದ್ಯ ಕಡ್ಡಾಯ. ಆ ಕಾರಣದಿಂದಲೂ ಕೂಡಾ ಹಲಸಿಗೆ ಮೇ ತಿಂಗಳು ಒಳ್ಳೆಯ ಬೇಡಿಕೆ ಇರುವ ಕಾಲ.

ಕುಂದಾಪುರ ಸಂಜೆ ಈ ವಾರ ಬಂದಿರುವುದು ಎಲ್ಲಾ ಸ್ಥಳೀಯ ತಳಿಯ ಬಕ್ಕೆ ಹಲಸುಗಳೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ರಾಜ್ಯದ, ಬೇರೆ ಬೇರೆ ಜಿಲ್ಲೆಯ, ತರಹೇವಾರಿ ತಳಿಯ ಹಲಸುಗಳು ಲಭ್ಯವಿದೆ. ಆದರೆ ಜನ ಬಯಸುವುದು ಕುಂದಾಪುರ ಭಾಗದ ಶುದ್ಧ ಸಿಹಿಯ ಬಕ್ಕೆ ಹಲಸು. ಅದರಲ್ಲೂ ಜೇನು ಹಲಸು, ಚಂದ್ರಬಕ್ಕೆ, ಜಾಜಿಬಕ್ಕೆ ಇತ್ಯಾದಿಗಳನ್ನು.

ಹಲಸಿನ ಉಪಯೋಗ ಹಲವು.ಹಲಸಿನ ಎಳೆ ಕಾಯಿಯಿಂದ ಆರಂಭಿಸಿ, ಹಲಸಿನ ಬೀಜ, ಹಣ್ಣಿನ ತೊಳೆ, ಒಳಭಾಗದ ಮೈಪದರ, ತಿರುಳು ಎಲ್ಲವೂ ಕೂಡಾ ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಇವತ್ತು ಹಲಸು ಸಾಕಷ್ಟು ಮೌಲ್ಯವರ್ಧಿತ ಉತ್ಪನ್ನಗಳಿಗೂ ಒಗ್ಗಿಕೊಂಡಿದೆ. ಹಲಸಿನ ಹಣ್ಣಿನ ಹಪ್ಪಳ, ಚಿಪ್ಸ್, ಜಾಮ್, ಐಸ್ ಕ್ರೀಂ ಕೊನೆಗೂ ಹಳ್ಳಿಹಳ್ಳಿಗಳಲ್ಲಿ ಹಲಸಿನ ಕಾಯಿಯ ಹುಳಿ ಕೂಡಾ ಅದ್ಭುತ.

ಒಟ್ಟಾರೆಯಾಗಿ ಹಲಸಿನ ಸೀಸನ್ ಆರಂಭವಾಗಿದೆ. ಸವಿಯುಂಡು ಆನಂದಿಸಬೇಕಾಗಿದೆ.

https://fb.watch/s8dGCK4qTU/

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!