spot_img
Tuesday, February 18, 2025
spot_img

ಬಿ. ಬಿ. ಹೆಗ್ಡೆ ಕಾಲೇಜು: ಕ್ಯಾಂಪಸ್ ನೇಮಕಾತಿ ಡ್ರೈವ್

ಕುಂದಾಪುರ: ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ದಿನಾಂಕ 17/05/2024ರಂದು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Glow Touch, Muthoot Finance, ICICI Bank ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನೆರವೇರಿತು.

ಅತಿಥಿ ನೆಲೆಯಲ್ಲಿ ಮಾತನಾಡಿದ ಗ್ಲೋ ಟಚ್ ಕಂಪೆನಿಯ ಸೀನಿಯರ್ ಅನಾಲಿಸ್ಟ್  ತುಷಾರ್ ಕದ್ರಿಯವರು ಲಭ್ಯವಿರುವ ಹುದ್ದೆಗಳ ಮತ್ತು ಉದ್ಯೋಗಿಗಳಿಗೆ ಇರುವ ಸವಲತ್ತು ಬಗ್ಗೆ ವಿವರಿಸಿದರು. ಇನ್ನೋರ್ವ ಅತಿಥಿ TVS ಟ್ರೆöÊನಿಂಗ್ ಸರ್ವಿಸಸ್ನ ಸೀನಿಯರ್ ಹೆಚ್.ಆರ್. ಗೋಪಾಲಕೃಷ್ಣ ಅವರು ವಿದ್ಯಾರ್ಥಿಗಳಿಗೆ ICICI ಬ್ಯಾಂಕ್ನ ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾತನಾಡಿ, ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಮುತ್ತೂಟ್ ಫೈನಾನ್ಸ್ನ ಅಸಿಸ್ಟೆಂಟ್ ಮ್ಯಾನೇಜರ್  ಆಶಿಶ್ ಪಿ. ಶೇಟ್, ಗ್ಲೋ ಟಚ್ ಕಂಪೆನಿಯ ಹೆಚ್.ಆರ್. ಅನಾಲಿಸ್ಟ್ ಅಕ್ಷಯಾ, ವೃತ್ತಿ ಮಾರ್ಗದರ್ಶನ ಘಟಕದ ಸಂಯೋಜಕರಾದ  ಮಹೇಶ್ ಕುಮಾರ್,  ರಜತ್ ಬಂಗೇರ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿ  ಹರೀಶ್ ಕಾಂಚನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರತೀಕ್ಷಾ ಪ್ರಾರ್ಥಿಸಿ, ವರ್ಷಿಣಿ ಸ್ವಾಗತಿಸಿ, ಕಾವ್ಯ ವಂದಿಸಿ, ಪ್ರಿಯಾಂಕ ನಿರೂಪಿಸಿದರು.

 

 

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!