Friday, June 14, 2024

ನಮ್ಮ ನಾಡ ಒಕ್ಕೂಟದ ವತಿಯಿಂದ ಎಸ್‌ಎಸ್‌ಎಲ್‌ಸಿ ಸಾಧಕಿಗೆ ಸನ್ಮಾನ

ನಮ್ಮ ನಾಡ ಒಕ್ಕೂಟ (ರಿ), ಹೆಬ್ರಿ ಘಟಕದ ವತಿಯಿಂದ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ, ಹೆಬ್ರಿ ಮಠದಬೆಟ್ಟು ನಿವಾಸಿ ಅನ್ವರ್ ರಫೀ ಹಾಗೂ ಆಯಿಶಾ ಭಾನು ದಂಪತಿ ಪುತ್ರಿ ಶಿಫಾ ಅವರಿಗೆ ಅಭಿನಂದನೆ ಕಾರ್ಯಕ್ರಮವು ಹೆಬ್ರಿ ಅನ್ವರ್ ರಫಿಯವರ ಮನೆಯಲ್ಲಿ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ ರಲ್ಲಿ ೬೧೨ ಅಂಕ ( ಶೇ.೯೭.೯೨% ) ಪಡೆದು ವಿಶೇ? ಸಾಧನೆ ಮಾಡಿದ್ದಾರೆ. ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ೧೦೦ ಅಂಕ ಪಡೆದಿದ್ದಾರೆ.

ನಮ್ಮ ನಾಡ ಒಕ್ಕೂಟ(ರಿ),ಹೆಬ್ರಿ ಘಟಕದ ಕೋಶಾಧಿಕಾರಿ ಅಬ್ದುಲ್ ಅಝೀಝ್ ಮುನಿಯಾಲು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರಾಫತ್ ಅಲ್ಬಾಡಿ, ಜಿಲ್ಲಾ ಸಮಿತಿ ಸದಸ್ಯ ಮೊಹಮ್ಮದ್ ರಯನ್, ಹೆಬ್ರಿ ಘಟಕದ ಸದಸ್ಯ ಜಿಫ್ರಿ ಸಾಹೇಬ್ ಬೆಳ್ವೆ, ಸ್ಥಳೀಯರಾದ ಮುಸ್ತಾಫಾ, ಹಸನಬ್ಬ ಹಾಗೂ ಇನ್ನೀತರರು ಉಪಸ್ಥಿರಿದ್ದರು.

ಫಾರಿಸ್ ಸ್ವಾಗತಿಸಿದರು,ರಯನ್ ಕಿರಾತ ಪಠಿಸಿದರು,ಅರಾಫತ್ ಕಾರ್ಯಕ್ರಮ ನಿರೂಪಿಸಿದರು,ಜಾಸಿಮ್ ವಂದಿಸಿದರು.

Related Articles

Stay Connected

21,961FansLike
3,912FollowersFollow
21,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!