spot_img
Friday, April 25, 2025
spot_img

ಜಿ.ಟಿ.ಟಿ.ಸಿ ಡಿಪ್ಲೋಮಾ ಕೋರ್ಸ್‍ಗಳ ಪ್ರವೇಶಾತಿ : ಅರ್ಜಿ ಆಹ್ವಾನ

ಉಡುಪಿ: ಉಡುಪಿಯ ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ತಾಂತ್ರಿಕ ಡಿಪ್ಲೋಮಾ ಕೋರ್ಸ್‍ಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಖಾಂತರ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಜಿ.ಟಿ.ಟಿ.ಸಿ ಕೇಂದ್ರದಲ್ಲಿ 3+1 ವರ್ಷದ ಡಿಪ್ಲೋಮಾ ಇನ್ ಟೂಲ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಮತ್ತು ಡಿಪ್ಲೋಮಾ ಇನ್ ಪ್ರಿಸಿಶನ್ ಮ್ಯಾನ್ಯುಪ್ಯಾಕ್ಚರಿಂಗ್ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಐ.ಟಿ.ಐ ಮತ್ತು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನೇರವಾಗಿ ಎರಡನೇ ವಷರ್Àದ ಡಿಪ್ಲೋಮಾ ಕೋರ್ಸ್‍ಗೆ ಪ್ರವೇಶ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೊಳಲಗಿರಿ, ಉಡುಪಿ, ಮೊಬೈಲ್ ಸಂಖ್ಯೆ: 9880510585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!