Sunday, September 8, 2024

ಬಹು ಕುತೂಹಲದ ವಿಧಾನಪರಿಷತ್ ಚುನಾವಣಾ ಕ್ಷೇತ್ರವೆಂದರೆ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ

ವಿಧಾನಸಭಾ ಚುನಾವಣೆಗೂ ಲೇೂಕಸಭಾ  ಚುನಾವಣೆಗೂ ವಿಧಾನಪರಿಷತ್ ಚುನಾವಣೆಗೂ ತುಂಬಾ ವ್ಯತ್ಯಾಸವಿದೆ. ಭೌಗೋಳಿಕ ವ್ಯಾಪ್ತಿ ನೇೂಡಿದರೆ ಅತೀ ವಿಸ್ತಾರವಾದ ಕ್ಷೇತ್ರವೆಂದರೆ ವಿಧಾನಪರಿಷತ್ ಕ್ಷೇತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಿ ಸುಮಾರು 32 ವಿಧಾನ ಸಭಾ ಕ್ಷೇತ್ರಗಳನ್ನು ವ್ಯಾಪಿಸಿರುವ ಒಂದು ವಿಧಾನಪರಿಷತ್ ಕ್ಷೇತ್ರ. ಆದರೆ ವಿಧಾನಪರಿಷತ್ ನ ಶಿಕ್ಷಕರ  ಕ್ಷೇತ್ರವಿರಬಹುದು ಪದವೀಧರ ಕ್ಷೇತ್ರವಿರಬಹುದು ಮತದಾರರ ಸಂಖ್ಯೆ ಎಷ್ಟು ಕಡಿಮೆ ಅಂದರೆ ಒಂದು ವಿಧಾನ ಸಭಾ ವ್ಯಾಪ್ತಿಯ  1/10 ರಷ್ಟು ಮತದಾರರು ಇಲ್ಲ. ಇದುವೇ ಇದರ ವಿಶೇಷತೆ. ಇಷ್ಟು ಕಡಿಮೆ ಮತದಾರರಿಂದ ಚುನಾಯಿತರಾದ ಪ್ರತಿನಿಧಿಗೆ ಉಳಿದ ಶಾಸಕರುಗಳಿಗೆ ಸಿಕ್ಕ ವೇತನ ಸಾರಿಗೆ ಸೌಕರ್ಯಗಳೆಲ್ಲವೂ ಲಭ್ಯ.

ಈ ಬಾರಿ ನಡೆಯುವ ಆರು ವಿಧಾನಪರಿಷತ್ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ನೈರುತ್ಯ ಕ್ಷೇತ್ರದ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಅತ್ಯಂತ ಕುತೂಹಲದ ಚುನಾವಣೆ ಎಂದೇ ಪರಿಗಣಿಸ ಬಹುದು. ಇದಕ್ಕೂ ಹಲವು ಕಾರಣಗಳಿವೆ.

ಈ ವಿಧಾನಪರಿಷತ್ ಚುನಾವಣೆ ವಿಶೇಷತೆ ಅಂದರೆ ಇಲ್ಲಿನ ಮತದಾರರು ಯಾವುದೇ ಪಕ್ಷಕ್ಕೆ ಅಂಟಿಕೊಂಡಿರುವ ಮತದಾರರು ಅಲ್ಲ. ಹೆಚ್ಚಿನ ಸಂದರ್ಭದಲ್ಲಿ ಯಾವ ಪಕ್ಷ / ಚುನಾವಣೆಗೆ ನಿಂತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ನೊಂದಣಿ ಮಾಡಿರುವವರಿಗೆ ಸ್ವಲ್ಪ ಮಟ್ಟಿಗೆ ವರದಾನವೂ ಹೌದು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಶಿಕ್ಷಕರು ಮತ್ತು ಪದವಿಧರರು ಮೊದಲ ಪ್ರಾಶಸ್ತ್ಯ ನೀಡುವುದು ತಮ್ಮ ಸಮಸ್ಯೆ ಬೇಡಿಕೆಗಳಿಗೆ ಯಾರು ಹೆಚ್ಚು ಸ್ಪಂದಿಸಿದ್ದಾರೆ ಸ್ಪಂದಿಸಲಿದ್ದಾರೆ ಎನ್ನುವುದನ್ನೆ ಮೊದಲ ಮಾನದಂಡವಾಗಿ ಮತಚಲಾಯಿಸಿರುವುದನ್ನು ಕಳೆದ ಎಲ್ಲಾ ಚುನಾವಣಾ ಫಲಿತಾಂಶದಲ್ಲಿ ನೇೂಡಿದ್ದೇವೆ. ಬಹು ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಹೊಂದಿರುವ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದ ಅನಂತರದಲ್ಲಿ ಮತದಾರರ ಪರ ಧ್ವನಿ ಎತ್ತದೆ ಸೇೂತ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಅಂದರೆ ಇಲ್ಲಿ ಪಕ್ಷಕ್ಕಿಂತ ಅಭ್ಯರ್ಥಿಗಳ ಪ್ರಾಮಾಣಿಕ ಧ್ವನಿ ಮುಖ್ಯ. ಸದನದಲ್ಲಿ ಪಕ್ಷ ಸಿದ್ಧಾಂತ ಮೀರಿ ಸರಕಾರಿ /ಖಾಸಗಿ ಸಂಸ್ಥೆಗಳ ನೌಕರರ  ಪಿಂಚಣಿ ಸಮಸ್ಯೆ ಬಗ್ಗೆ ಧ್ವನಿ ಎತ್ತಿದವರನ್ನು ಪಕ್ಷ ಮೀರಿ ಈ ಎಲ್ಲಾ ಪದವಿಧರರು ಮತ್ತು ನೌಕರರು ಬೆಂಬಲಿಸಿರುವುದನ್ನು ನೇೂಡಿದ್ದೇವೆ.

ಇದಾಗಲೇ ಕಾಂಗ್ರೆಸ್ ಪದವಿಧರರ ಶಿಕ್ಷಕರ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೇೂಷಿಸಿ ಬಿಟ್ಟಿದೆ. ಆದರೆ ಇನ್ನು ಉಳಿದಿರುವುದು ಬಿಜೆಪಿ ಮತ್ತು  ಜೆಡಿಎಸ್ ಹೊಂದಾಣಿಕೆಯ ಜಂಜಾಟ ಮಾತ್ರ . ನೈರುತ್ಯ ಶಿಕ್ಷಕರ ಕ್ಷೇತ್ರ ಮೊದಲಿನಿಂದಲೂ ಬಿಜೆಪಿಗೆ ಬಹು ಹಿಡಿತವಿರುವ ಕ್ಷೇತ್ರ.ಆದರೆ ಈ ಬಾರಿ ಇದು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಇದು ಬಿಜೆಪಿ ಜೆಡಿಎಸ್ ನಡುವಿನ ಸ್ಥಳೀಯ ನಾಯಕರ ಮನಸ್ತಾಪದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಗೊತ್ತಿಲ್ಲ. ಈ ಬುದ್ಧಿವಂತ ವಿದ್ಯಾರ್ಥಿವಂತ ಮತದಾರರು ಈ ಹೊಂದಾಣಿಕೆ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೊ ಕಾದು ನೇೂಡ ಬೇಕು. ತಮಗೆ ಯಾರು ಹಿತನೀಡಬಹುದು ಎನ್ನುವ ಕಾರಣಕ್ಕಾಗಿಯೇ ಸೂಕ್ತ ಅಭ್ಯರ್ಥಿಗಳ ಹಿಂದೆ ಹೇೂದರೂ ಆಶ್ಚರ್ಯಪಡಬೇಕಾಗಿಲ್ಲ.

ಇನ್ನು ಪದವಿಧರರ ಕ್ಷೇತ್ರ. ಈ ಕ್ಷೇತ್ರವನ್ನು ಸಮಥ೯ವಾಗಿ ಪ್ರತಿನಿಧಿಸಿ ಶಾಸನ ಸಭೆಯಲ್ಲಿ ನೌಕರರ ಪದವೀಧರ ಸಮಸ್ಯೆಗಳಿಗೆ ಪಕ್ಷ ಮೀರಿ ಧ್ವನಿ ಎತ್ತಿದ ಹೆಗ್ಗಳಿಕೆಗೆ ಅಯನೂರು ಮಂಜುನಾಥ್ ರಿಗಿದೆ. ಮಾತ್ರವಲ್ಲ ಸಾಕಷ್ಟು ಮಂದಿ ಪದವಿಧರರು ನೊಂದಾಯಿಸಿದ ಹಿನ್ನೆಲೆ ಇವರಿಗಿದೆ. ಪ್ರಚಾರ ಕಾರ್ಯದಲ್ಲಿ  ಎಲ್ಲರಿಗ್ಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಪ್ರಸ್ತುತ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪಧೆ೯ಮಾಡಲು ಮುಂದಾಗಿದ್ದಾರೆ. ಇವರನ್ನು ಯಾರು ಸರಿ ಸಾಟಿಯಾಗಿ ಎದುರಿಸ ಬಲ್ಲರು ಅನ್ನುವುದು ಬಿಜೆಪಿ ಗರಿಗೆ ಬಹುದೊಡ್ಡ ಸವಾಲಿನ ಪ್ರಶ್ನೆ. ಈ ಅಯನೂರರನ್ನು ಎದುರಿಸಲು ಶಿವಮೊಗ್ಗ ಕಡೆಯವರಾಗಬೇಕಾ? ಉಡುಪಿ ಕಡೆಯವರಾಗಬಹುದಾ ಎನ್ನುವ ಹುಡುಕಾಟದಲ್ಲಿ ಬಿಜೆಪಿ ಆಯ್ಕೆ ಸಮಿತಿ ಇರುವದಂತೂ ನಿಜ.

ಅಂತೂ ಈ ಬಾರಿಯ ವಿಧಾನಪರಿಷತ್ ಚುನಾವಣೆ ಈ ಎಲ್ಲಾ ಗ್ಯಾರಂಟಿ ಭಾವನಾತ್ಮಕ ವಿಷಯಗಳನ್ನು ಮೀರಿ ಹೊಸದೊಂದು ದಿಕ್ಕಿನಲ್ಲಿ ಸಾಗಬಹುದು ಅನ್ನುವುದು ಸದ್ಯದ ಲೆಕ್ಕಾಚಾರ. ಕಾದು ನೇೂಡೇೂಣ.

-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!