spot_img
Wednesday, April 1, 2026
spot_img

ಮೋದಿ ತಮ್ಮ ಬಿಲಿಯನೇರ್‌ ಉದ್ಯಮಿ ಮಿತ್ರರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ : ರಾಹುಲ್‌ ಗಂಭೀರ ಆರೋಪ

ಜನಪ್ರತಿನಿಧಿ (ನವ ದೆಹಲಿ) : ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿಲಿಯನೇರ್‌ ಉದ್ಯಮಿ ಮಿತ್ರರ 16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು (ಬುಧವಾರ) ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿ ಮಾಡಿಉರವ ಈ ಅಪರಾಧವನ್ನು ದೇಶದ ಜನತೆ ಎಂದೂ ಕ್ಷಮಿಸುವುದಿಲ್ಲ. ಎಂದು ಅವರು ಹೇಳಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಈ ಬಗ್ಗೆ ಹೇಳಿರು ರಾಹುಲ್‌, ಭಾರತೀಯರ ಗಾಯಕ್ಕೆ ಮದ್ದು ಆಗಬಹುದಿದ್ದ ಈ ಹಣವನ್ನು ʼಅದಾನಿʼಗಳ ಸಂಪಾದನೆಗಾಗಿ ವ್ಯಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ʼಬಿಲಿಯನೇರ್‌ ಉದ್ಯಮಿ ಮಿತ್ರರ 16 ಲಕ್ಷ ಕೋಟಿ ಸಾಲವನ್ನು ನರೇಂದ್ರ ಮೋದಿ ಮನ್ನಾ ಮಾಡಿದ್ದಾರೆ. ಈ ಹಣದಲ್ಲಿ 16 ಕೋಟಿ ಯುವಜನತೆಗೆ ವರ್ಷಕ್ಕೆ ಒಂದು ಲಕ್ಷ ಸಂಬಳದ ಉದ್ಯೋಗ ದೊರಕುತ್ತಿತ್ತು. 16 ಕೋಟಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ನೀಡಿ ಅವರ ಕುಟುಂಬಗಳ ಬದುಕನ್ನೇ ಬದಲಾಯಿಸಬಹುದಿತ್ತು. 10 ಕೋಟಿ ರೈತ ಕುಟುಂಬದ ಸಾಲ ಮನ್ನಾ ಮಾಡಿ ಅಸಂಖ್ಯಾತ ಆತ್ಮಹತ್ಯೆಗಳನ್ನು ತಡೆಯಬಹುದಿತ್ತು. ಇಡೀ  ದೇಶಕ್ಕೆ 20 ವರ್ಷಗಳ ಕಾಲ ಕೇವಲ 400 ರೂ.ಗೆ ಗ್ಯಾಸ್‌ ಸಿಲಿಂಡರ್‌ ನೀಡಬಹುದಿತ್ತು. ಭಾರತೀಯ ಸೇನೆಯ ಸಂಪೂರ್ಣ ವೆಚ್ಚವನ್ನು ಮೂರು ವರ್ಷಗಳವರೆಗೆ ಭರಿಸಬಹುದಿತ್ತು. ದಲಿತ, ಬುಡಕಟ್ಟು ಹಾಗೂ ಹಿಂದುಳಿದ ವರ್ಗದವರಿಗೆ ಪದವಿಯವರೆಗೆ ಉಚಿತ ಶಿಕ್ಷಣ ನೀಡಬಹುದಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಆದರೇ, ಈಗ ಪರಿಸ್ಥಿತಿ ಬದಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯ ಪ್ರಗತಿಗಾಗಿ ಕಾಂಗ್ರೆಸ್‌ ಸರ್ಕಾರ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

https://x.com/RahulGandhi/status/1782978348375007259

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!