Friday, November 8, 2024

ಮೋದಿ ಒಬ್ಬ ದ್ವೇಷ ಕಾರುವ ವ್ಯಕ್ತಿ, ಸುಳ್ಳು ಮತ್ತು ದ್ವೇಷದಿಂದಲೇ ಅಧಿಕಾರ ನಡೆಸುತ್ತಿದ್ದಾರೆ : ವೀರಪ್ಪ ಮೋಯ್ಲಿ ಆಕ್ರೋಶ

ಜನಪ್ರತಿನಿಧಿ (ಉಪ್ಪುಂದ) : ದೇಶದಲ್ಲಿ ಎಲ್ಲಾ ವರ್ಗದವರು ತಲೆ ಎತ್ತಿ ಬದುಕುವ ಹಾಗೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ದೇಶ ಉಳಿಬೇಕು ಎಂಬ ಕಾರಣಕ್ಕೆ ಗಡಿಗಳನ್ನು ಭದ್ರಗೊಳಿಸಿದ್ದು ನಮ್ಮ ಸರ್ಕಾರ. ನಮ್ಮ ಹಿರಿಯ ನಾಯಕರಿಗೆ ದೇಶ ಮೊದಲಾಗಿತ್ತು. ಹಸಿರು ಕ್ರಾಂತಿ ಸೃಷ್ಟಿಸಿ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

ಉಪ್ಪುಂದ ಅಂಬಾಗಿಲು ಸಂತೆ ಮಾರ್ಕೆಟ್ ವಠಾದಲ್ಲಿ ಬ್ಲಾಕ್ ಕಾಂಗ್ರೆಸ್ ಬೈಂದೂರು ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ನಿಲುವು ಎಂದಿಗೂ ಬಡವರ ಪರವಾಗಿತ್ತು. ಈ ದೇಶಕ್ಕಾಗಿ ಪ್ರಾಣತೆತ್ತವರಿದ್ದರೆ ಅದು ಕಾಂಗ್ರೆಸ್ ನಾಯಕರು. ಎಲ್ಲಾ ಧರ್ಮದವರು ಒಟ್ಟಾಗಿ ಬದುಕಬೇಕು ಎಂಬ ಉದ್ದೇಶ ಹೊಂದಿದ್ದ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಸರಿಸಮನಾದ ಅವಕಾಶ ಇರಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಜನಗಣತಿಯಿಂದ ಒಬ್ಬ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ಹಕ್ಕುಗಳಿಗೆ ಬಾಧ್ಯಸ್ತನಾಗುತ್ತಿದ್ದ. ಅಂತಹ ದೇಶದ ಜನಗಣತಿ ವ್ಯವಸ್ಥೆಯನ್ನೇ ಮುರಿದು ಬಿಟ್ಟಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಮೀನುಗಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಪ್ರಸ್ತಾವ ಇಟ್ಟು ಅವರಿಗೆ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂಬ ದೃಷ್ಟಿಯಲ್ಲಿ ಕೆಲಸ ನಾನು ಕೆಲಸ ಮಾಡಿದ್ದೆ. ಆದರೇ ಇಂದಿಗೂ ಮೋದಿ ನೇತೃತ್ವದ ಸರ್ಕಾರ ಮೀನುಗಾರರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕೆಲಸ ಮಾಡಿಲ್ಲ ಎಂದು ಮೋದಿ ಹಾಗೂ ಬಿಜೆಪಿ ವಿರುದ್ದ ಅವರು ಹರಿಹಾಯ್ದರು.

ಸಿಇಟಿ ಪರೀಕ್ಷೆಯಂತಹ ವ್ಯವಸ್ಥೆಯನ್ನು ತಂದು ಬಡವರಿಗೆ ಉನ್ನತ ಹುದ್ದೆಗೇರುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮೂಲಕ ತಂದೆ. ಸಿಇಟಿ ಮೂಲಕ ಅನೇಕ ಬಡ ವಿದ್ಯಾರ್ಥಿಗಳು ಉನ್ನತ ಹುದ್ದಗೇರಿದ ಉದಾಹರಣೆ ಇದೆ. ಬಡವರಿಗೆ ಕಾಂಗ್ರೆಸ್ ಸರ್ಕಾರ ಏನೆಲ್ಲಾ ಯೋಜನೆಗಳನ್ನೆಲ್ಲಾ ತಂದಿತ್ತೋ, ಅವುಗಳನ್ನೆಲ್ಲಾ ತೆಗೆದು ಹಾಕಿ ಬಡವರ ಹೊಟ್ಟೆ ಮೇಲೆ ಬಡಿಯುವ ಗುರಿಯೇ ಮೋದಿ ನೇತೃತ್ವ ಸರ್ಕಾರದ ಯೋಜನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಡವರು, ಮಹಿಳೆಯರು, ಯುವಕರ ರಕ್ತ ಕುದಿಯುತ್ತಿದೆ, ಈ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತು ಹೊಸಕಿ ಹಾಕುತ್ತಾರೆ ಎಂಬ ಭಯ ಮೋದಿಗೆ, ಬಿಜೆಪಿಗೆ ಮೂಡಿದೆ. ಬಿಜೆಪಿ ಎಂದಿಗೂ ಬಡವರ ಪರ ನಿಂತ ಉದಾಹರಣೆಯೇ ಇಲ್ಲ. ನನ್ನಂತಹ ಬಡ ಸಮುದಾಯದಲ್ಲಿ ಹುಟ್ಟಿದವನಿಗೆ ಮುಖ್ಯಮಂತ್ರಿ ಆಗುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ನಾನು ಅಧಿಕಾರದಲ್ಲಿದ್ದಾಗ ತಂದ ಕಾನೂನುಗಳೆಲ್ಲಾ ಬಡವರ ಪರವಾಗಿ ಇದ್ದವು. ಇದು ಕಾಂಗ್ರೆಸ್‌ನ ಬದ್ಧತೆ ಎಂದು ಅವರು ಹೇಳಿದರು.

ಹೊರದೇಶದಲ್ಲಿದ್ದ 35 ಲಕ್ಷ ಕೋಟಿ ಕಪ್ಪು ಹಣವನ್ನು ನಮ್ಮ ಸರ್ಕಾರ ದೇಶಕ್ಕೆ ತಂದಿತ್ತು. ನಾನು ಅಧಿಕಾರದಲ್ಲಿದ್ದಾಗ ಹೊರದೇಶಗಳಲ್ಲಿ ಇನ್ನೂ ಕಪ್ಪು ಹಣವಿದೆ ಎಂಬ ವರದಿ ನೀಡಿದ್ದೆ. ಮೋದಿ ಸರ್ಕಾರ ಬಂದಾಗ ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು. ಕಪ್ಪು ಹಣ ತಂದು ದೇಶದ ನಾಗರಿಕರ ಖಾತೆಗಳಿಗೆ ಹದಿನೈದು ಲಕ್ಷ ಹಾಕುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೇರಿದರು. ಅಧಿಕಾರ ಹಿಡಿದು ಹತ್ತು ವರ್ಷಗಳಾದರೂ ಕಪ್ಪು ಹಣ ತರುವುದಕ್ಕೆ ಮೋದಿಯಿಂದ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಮೋದಿ ಒಬ್ಬ ದ್ವೇಷ ಕಾರುವ ವ್ಯಕ್ತಿ. ಮೋದಿ ದ್ವೇಷ, ಸುಳ್ಳಿನಿಂದಲೇ ಅಧಿಕಾರ ನಡೆಸುತ್ತಿದ್ದಾರೆ. ಅವರಿಗೆ ಈ ಬಾರಿ ಸೋಲಿನ ಭಯ ಅವರಿಗೆ ಕಾಡಿದೆ. 150-200  ಕ್ಷೇತ್ರಗಳಿಗಿಂತ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದಿಲ್ಲ‌. ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುವ ಕಾಲ ಮತ್ತೆ ಸನ್ನಿಹಿತವಾಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಸ್ವಲ್ಪವೂ ಮೆಚ್ಯುರಿಟಿ ಇಲ್ಲ : ಗೀತಾ ಶಿವರಾಜ್‌ ಕುಮಾರ್‌

ಪಂಚ ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಯಾವುದೇ ಭ್ರಷ್ಟಾಚಾರವಿಲ್ಲದೆ ಮನೆಮನೆಗೆ ತಲುಪಿಸಿದೆ. ರೈತರ ಸಾಲಮನ್ನ ಮಾಡಿದ್ದು ನಮ್ಮ ಸರ್ಕಾರ. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಸದಾ ನಿಂತಿದೆ. ಈ ಬಾರಿ ಶಾಶ್ವತ ಕೃಷಿ ಸಾಲ ಮನ್ನಾ ಆಯೋಗ ಸ್ಥಾಪನೆಯ ಭರವಸೆ ನೀಡಿದೆ ನಾವು ಅಧಿಕಾರಕ್ಕೆ  ಬಂದರೇ ಖಂಡಿತ ನಮ್ಮ ಸರ್ಕಾರ ಈಡೇರಿಸುತ್ತದೆ ಎನ್ನುವುದ ಮಾಡಿದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

ನಮ್ಮ ತಂದೆ ನಡೆದ ಹಾದಿಯಲ್ಲೇ ನಡೆದು, ಸದಾ ಬಡವರ ಪರವಾಗಿ ಇರುವ ಕನಸಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಡುತ್ತೀರಿ ಎನ್ನುವ ನಂಬಿಕೆ ಇದೆ. ಬಡವರ ಧ್ವನಿಯಾಗಿ ಸಂಸತ್ತಿನಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿಕೊಂಡರು.

ಬಿಜೆಪಿಯ ಅಪಪ್ರಚಾರದ ಬಗ್ಗೆ ಮೃದುವಾಗಿಯೇ ಕುಟುಕಿದ ಗೀತಾ,  ಬಿಜೆಪಿಯವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಮನೆಯಲ್ಲಿ ನಾಯಿ ಇದೆ ಗೀತಾ ಶಿವರಾಜ್ ಅವರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಬಿಜೆಪಿಯವರಿಗೆ ಸ್ವಲ್ಪವೂ ಮೆಚ್ಯುರಿಟಿ ಇಲ್ಲ. ಬರೀ ಇಂತದ್ದನ್ನೇ ಮಾತಾಡುತ್ತಿದ್ದಾರೆ. ಇದನ್ನು ಬಿಟ್ಟು ಬಿಜೆಪಿಯವರಿಗೆ ಬೇರೆ ನನ್ನ ಬಗ್ಗೆ ಹೇಳುವುದಕ್ಕೆ ವಿಷಯವೇ ಇಲ್ಲ ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಮಾತನಾಡಿ, ಯಾವುದೇ ಸರ್ಕಾರ ಬಂದರು ಆ ಸರ್ಕಾರ ಜನರ ಧ್ವನಿಯಾಗಿ ಇರಬೇಕು.ಕಾಂಗ್ರೆಸ್‌ ಸರ್ಕಾರ ಬಡವರ ಧ್ವನಿಯಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟಿದೆ. ಗೀತಾ ಪರವಾಗಿ ನಾನೇ ನಿಮಗೆ ಗ್ಯಾರಂಟಿ ಕೊಡ್ತೇನೆ ಎಂದು ಭರವಸೆ ನೀಡಿದರು.

ರಾಘವೇಂದ್ರ ಪಾರ್ಲಿಮೆಂಟ್ ಗೆ ಹೋಗಿ ನಿದ್ರೆ ಮಾಡ್ಕೊಂಡ್ ಬಂದ್ರು : ಗೋಪಾಲ್‌ ಪೂಜಾರಿ ಆಕ್ರೋಶ

 

ಸುಳ್ಳು ಹೇಳುವವರಿಗೆ ನಿಮ್ಮ ಮತ ಹಾಕಬೇಡಿ. ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹೊಂದಿದ್ದಿದ್ದರೇ ಅದು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ. ಈ ಭಾಗದ ಮೀನುಗಾರರನ್ನು ನಿರಂತರವಾಗಿ ತಾತ್ಸಾರ ಧೋರಣೆ ಮೆರೆದಿದ್ದು ಬಿಜೆಪಿ. ಹಿಂದುತ್ವದ ಹೆಸರಿನಲ್ಲಿ ನಿಮ್ಮನ್ನು ಬಿಜೆಪಿ ಮೋಸ ಮಾಡಿದೆ‌ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಪಾರ್ಲಿಮೆಂಟ್ ಗೆ ಹೋಗಿ ನಿದ್ದೆ ಮಾಡಿಕೊಂಡು ಬಂದ ರಾಘವೇಂದ್ರ ಅವರನ್ನು ನೀವು ಈ ಭಾರಿ ಸೋಲಿಸಬೇಕು. ಈ ಭಾರಿಯೂ ಬೈಂದೂರಿನ ಜನರು ರಾಘವೇಂದ್ರ ಅವರನ್ನೇ ಆರಿಸಿದರೇ ಬೈಂದೂರು ಪೂರ್ತಿ ರಾಘವೇಂದ್ರನ ಆಸ್ತಿ ಆಗುವುದು ಖಚಿತ ಎಂದು ಕಿಡಿ ಕಾರಿದರು.

ಇನ್ನು, ಉಡುಪಿ ಚಿಕ್ಕಮಗಳೂರಿನಲ್ಲಿ ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡದಲ್ಲಿ ಪದ್ಮರಾಜ್ ಪೂಜಾರಿ, ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್, ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್ ಗೆಲ್ಲುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಬೈಂದೂರು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಮೋದಿ ಸಾಹೇಬರು ಕೊಟ್ಟಿದ್ದು ಟ್ಯಾಕ್ಸ್ ಬರೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಕಟ್ಟಿ ಬೆಳೆಸಿದ ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳನ್ನು ಅದಾನಿ, ಅಂಬಾನಿಗೆ ಮೋದಿ ಮಾರಿ ಬಿಟ್ಟಿದ್ದಾರೆ. ದೇಶದಲ್ಲಿ ಮಾರುವುದಕ್ಕೆ ಉಳಿದಿರುವುದು ಅರಬಿ ಸಮುದ್ರ, ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಹಿಮಾಲಯ ಪ್ರದೇಶ ಅಷ್ಟೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಬಡವರನ್ನು ಬಡವರನ್ನಾಗಿಯೇ ಉಳಿಸುವ ಹಾಗು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಉದ್ದೇಶದಿಂದ ಅಧಿಕಾರ ನಡೆಸುತ್ತಿದೆ ಎಂದು ಅವರು ಹರಿಹಾಯ್ದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಅರವಿಂದ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ, ರಿಯಾಝ್ ಅಹಮದ್, ಸುರೇದ್ರ ಶೆಟ್ಟಿ, ನಾಗೇಶ್ ಖಾರ್ವಿ ಉಪ್ಪುಂದ, ಸದಾಶಿವ ಪಡುವರಿ ಸೇರಿ ಪಕ್ಷದ ಪದಾಧಿಕಾರಿಗಳು, ಕಾರ್ಯಕ‌ರ್ತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!