spot_img
Thursday, April 2, 2026
spot_img

ಲೋಕಸಭಾ ಚುನಾವಣೆ : ದೇಶದ ಮೂಲೆಮೂಲೆಗಳಲ್ಲಿ ಪ್ರೀತಿಯ ಅಂಗಡಿ ತೆರೆಯಿರಿ, ಪ್ರಜಾಪ್ರಭುತ್ವವನ್ನು ಸದೃಢಗೊಳಿಸಿ : ರಾಗಾ ಕರೆ

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭಾಗಿದ್ದು, ದೇಶದ ಪ್ರತಿ ಮೂಲೆಮೂಲೆಗಳಲ್ಲಿ ದ್ವೇಷವನ್ನು ಸೋಲಿಸಿ, ಪ್ರೀತಿಯ ಅಂಗಡಿಗಳನ್ನು ತೆರೆಯುವ ಮೂಲಕ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸದೃಢಗೊಳಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯ ಮೂಲಕ, ಇಂದು ಮೊದಲ ಹಂತದ ಮತದಾನ, ನೆನಪಿಡಿ ನಿಮ್ಮ ಪ್ರತಿಯೊಂದು ಮತವೂ ಭಾರತದ ಪ್ರಜಾತಂತ್ರದ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸಲಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಆತ್ಮಕ್ಕೆ ಆಗಿರುವ ಗಾಯಗಳಿಗೆ ನಿಮ್ಮ ಮತದ ಬಾಮ್‌ ಹಚ್ಚಿ ಪ್ರಜಾಪ್ರಭುತ್ವವನ್ನು ಬಲಪಡಿಸಿ ಎಂದು ಅವರು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.

ದೇಶದ ಮೂಲೆಮೂಲೆಗಳಲ್ಲಿಯೂ ದ್ವೇಷವನ್ನು ಸೋಲಿಸಿ ಪ್ರೀತಿಯ ಅಂಗಡಿ ತೆರೆಯಿರಿ ಎಂದು ಅವರು ಹೇಳಿದ್ದಾರೆ.

ಅಪ್ರೆಂಟಿಸ್‌ ಹಕ್ಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ, ರಾಷ್ಟ್ರವ್ಯಾಪು ಜಾತಿಗಣತಿ ಸೇರಿದಂತೆ ಕಾಂಗ್ರೆಸ್‌ ಗ್ಯಾರಂಟಿಗಳ ಗ್ರಾಫಿಕ್ಸ್‌ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

https://x.com/RahulGandhi/status/1781144292725039286

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!