Tuesday, April 30, 2024

ಕೂಡ್ಲು ಬಾಡಬೆಟ್ಟು: ಅಷ್ಠಪವಿತ್ರ ನಾಗಮಂಡಲೋತ್ಸವ ಸಂಪನ್ನ

ಕುಂದಾಪುರ: ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ರಿ., ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು, ಕನ್ಯಾನ ಇಲ್ಲಿ ಎಪ್ರಿಲ್ 14ರಂದು ಅಷ್ಠ ಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಮಧ್ಯಾಹ್ನ  ಮಹಾ ಅನ್ನಸಂತರ್ಪಣೆ ನಡೆಯಿತು. 13 ಸಾವಿರಕ್ಕೂ ಹೆಚ್ಚು ಭಕ್ತಾದಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ 7 ಕ್ಕೆ ಹಾಲಿಟ್ಟು ಸೇವೆ, ದೇವರ ದರ್ಶನ, ರಾತ್ರಿ 9 ಗಂಟೆಯಿಂದ ಅಷ್ಠಪವಿತ್ರ ನಾಗಮಂಡಲೋತ್ಸವ ನಡೆಯಿತು. ಸಾವಿರಾರು ಭಕ್ತರು ನಾಗಮಂಡಲೋತ್ಸವ ವೀಕ್ಷಿಸಿದರು.

ಧಾರ್ಮಿಕ ಸಭೆಯಲ್ಲಿ ಶ್ರೀ ಬಾರ್ಕೂರು ಮಹಾಸಂಸ್ಥಾನದ ಡಾ| ವಿಶ್ವ ಸಂತೋಷ ಭಾರತಿ ಶ್ರೀ ಆಶೀರ್ವಚನ ನೀಡಿ, ಶನೀಶ್ವರ ಕ್ಷೇತ್ರದಲ್ಲಿ ನಾಗಾರಾಧನೆ ನಡೆಯುತ್ತಿದೆ. ಧಾರ್ಮಿಕವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಥಹ ಆರಾಧನೆಗಳು ಪ್ರಮುಖವಾಗುತ್ತವೆ. ಶನಿ ಅತ್ಯಂತ ಪ್ರಭಾವಶಾಲಿ ಗ್ರಹ. ರಾಜ-ಮಹಾರಾಜರನ್ನೇ ಶನೀಶ್ವರ ಬಿಟ್ಟಿಲ್ಲ. ಈ ಸನ್ನಿಧಾನದಲ್ಲಿರುವ ಶನೀಶ್ವರನು ಸೌಮ್ಯ ರೂಪದಂತಿದ್ದು, ಎಲ್ಲರಿಗೂ ಅನುಗ್ರಹಿಸುತ್ತಾನೆ ಎಂದರು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಛತ್ರದ ಮುಖ್ಯ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ನಾಗ ಪ್ರಕೃತಿಯ ದೇವರು, ನಾಗಮಂಡಲದಿಂದ ಲೋಕಕ್ಕೆ ಒಳಿತಾಗುತ್ತದೆ. ಸುಖ ಶಾಂತಿ ಸಂತಾನ ನೆಮ್ಮದಿ ಲಭಿಸುತ್ತದೆ. ಸತ್ಕರ್ಮಗಳನ್ನು ಮಾಡುತ್ತಾ ಧರ್ಮ ಮಾರ್ಗದಲ್ಲಿ ಮುನ್ನಡೆದರೆ ಭಗವಂತನೇ ಎಲ್ಲವನ್ನು ಮಾಡಿಸುತ್ತಾನೆ ಎಂದು ಅಭಿಪ್ರಾಯ ಪಟ್ಟರು.

ಹಿರಿಯ ನ್ಯಾಯವಾದಿ ಟಿ.ಬಿ. ಶೆಟ್ಟಿ ಶುಭಶಂಸನೆಗೈದರು.
ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ಜಯರಾಮ ಸ್ವಾಮಿ ಬಾಡಬೆಟ್ಟು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಾರ್ವತಿ, ತಂತ್ರಿ ಗುರುರಾಜ ಸೋಮಯಾಜಿ, ನ್ಯಾಯವಾದಿ ವೈ. ಶರತ್ ಕುಮಾರ್ ಶೆಟ್ಟಿ, ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಬಬ್ಬುಸ್ವಾಮಿ ಮೂಲಕ್ಷೇತ್ರದ ಧರ್ಮದರ್ಶಿ ಗೋಕುಲ್ ದಾಸ್ ಬಾರ್ಕೂರು, ತಾಲೂಕು ಭಜನ ಪರಿಷತ್ ಅಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಉದ್ಯಮಿ ಪ್ರಕಾಶ್ ಪೂಜಾರಿ ಗುಜ್ಜಾಡಿ, ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಖಾರ್ವಿ ಚೌಕಿಮನೆ, ಗೌರವಾಧ್ಯಕ್ಷರಾದ ರವಿ ದೇವಾಡಿಗ ಉಪ್ಪಿನಕುದ್ರು, ಜಗದೀಶ್ ಆಚಾರ್ ಹಟ್ಟಿಯಂಗಡಿ ಕ್ರಾಸ್, ರವಿ ದೇವಾಡಿಗ ಬಾಡಬೆಟ್ಟು, ಮರ್ಲಣ್ಣ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾಗ ಮಂಡಲೋತ್ಸವಕ್ಕೆ ಶ್ರಮಿಸಿದವರನ್ನು ಗೌರವಿಸಲಾಯಿತು.ಜ್ಯೋತಿಷ್ಯರಾದ ದಿನಕರ ಉಡುಪ ಹರವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ನಾಗಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ ರವಿ ದೇವಾಡಿಗ ಉಪ್ಪಿನಕುದ್ರು ಸ್ವಾಗತಿಸಿ, ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಿ.ರಾಜೇಂದ್ರ ಕುಮಾರ್ ಬಸ್ರೂರು ಬಳಗದವರಿಂದ ಸುಗಮ ಸಂಗೀತ ಭಕ್ತಿ ಗಾಯನ ನಡೆಯಿತು. ಬಳಿಕ ತೆಂಕು ಬಡಗಿನ ಪ್ರಸಿದ್ಧ ಯಕ್ಷಗಾನ ಹಿಮ್ಮೇಳ ಕಲಾವಿದರಿಂದ ಗಾನ ವೈಭವ ಪ್ರಸ್ತುತಗೊಂಡಿತು.

ತೆಂಕುತಿಟ್ಟು ಗಾನವೈಭವದಲ್ಲಿ ಭಾಗವತರು ರವಿಚಂದ್ರ ಕನ್ನಡಿಕಟ್ಟೆ, ಅಮೃತ ಅಡಿಗ, ಮದ್ದಳೆಯಲ್ಲಿ ಚೈತನ್ಯ ಪದ್ಯಾಣ, ಚಂಡೆಯಲ್ಲಿ ಕೌಶಲ್ ರಾವ್, ಚಕ್ರತಾಳದಲ್ಲಿ ವಸಂತ ಸಹಕರಿಸಿದರು. ಬಡಗುತಿಟ್ಟು ಗಾನ ವೈಭವದಲ್ಲಿ ಭಾಗವತರು-ಸುರೇಶ ಶೆಟ್ಟಿ ಶಂಕರನಾರಾಯಣ, ರಕ್ಷಾ ಹೆಗಡೆ, ಮದ್ದಳೆಯಲ್ಲಿ ಎನ್.ಜಿ ಹೆಗಡೆ, ಚಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದರು. ಕಲಾವಿದ ಸುನಿಲ್ ಹೊಲಾಡು ಗಾನವೈಭವ ನಿರ್ವಹಿಸಿದರು.

ಬಳಿಕ ಪ್ರತಿಭಾನ್ವಿತ ಗಾಯಕಿ ಸ್ಮಿತಾ ಬಾರ್ಕೂರು ಇವರಿಂದ ಭಕ್ತಿ ಲಹರಿ ನಡೆಯಿತು. ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಶ್ರೀದೇವಿ ವೈಭವ ಮತ್ತು ಬಿಡುವನೆ ಬ್ರಹ್ಮಲಿಂಗ ಪ್ರಸ್ತುತಗೊಂಡಿತು. ನೃತ್ಯ ವೈಭವ ದಕ್ಷಯಜ್ಞ, ರಾಮಾಯಣ ದರ್ಶನಂ-ದಾಸ ಕೀರ್ತನೆಗಳು ನಡೆದವು.

ಅಷ್ಠಪವಿತ್ರ ನಾಗಮಂಡಲೋತ್ಸವ:
ಅಷ್ಠಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪ್ರಧಾನ ಪುರೋಹಿತರಾಗಿ ನೇರಳಕಟ್ಟೆ ಬ್ರಹ್ಮನಜಿಡ್ಡುವಿನ ತಂತ್ರಿ ಗುರುರಾಜ ಸೋಮಯಾಜಿ, ನಾಗಪಾತ್ರಿಗಳಾಗಿ ವೇ| ಮೂ| ಶ್ರೀಧರ ಮಂಜ ಹಿಲ್ಲೋಡು, ವೈದ್ಯರಾಗಿ ಸುಬ್ರಹ್ಮಣ್ಯ ವೈದ್ಯ ಗೋಳಿಯಂಗಡಿ, ನಾಗಕನ್ನಿಕೆಯರಾಗಿ ಬಾಲಚಂದ್ರ ವೈದ್ಯ, ಹರಿಶ್ಚಂದ್ರ ವೈದ್ಯ ಅವರು ನಾಗಮಂಡಲೋತ್ಸವನ್ನು ನಡೆಸಿಕೊಟ್ಟರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!