Tuesday, October 8, 2024

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜಯ : ಪೋಲ್ ಟ್ಯ್ರಾಕರ್ ಚುನಾವಣಾ ಪೂರ್ವ ಸಮೀಕ್ಷಾ ವರದಿ !

ಜನಪ್ರತಿನಿಧಿ (ಬೆಂಗಳೂರು) : ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ರಾಜ್ಯದಾದ್ಯಂತ ಚುನಾವಣಾ ಕಾವು ಜೋರಾಗಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ, ಆಡಳಿತಾರೂಢ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರಗಳ ಲೆಕ್ಕಚಾರದಲ್ಲಿವೆ.

ದಿನೇದಿನೇ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಪಕ್ಷಗಳ ನಿರೀಕ್ಷೆಗಳಿಗೆ ಶಾಕ್‌ ನೀಡುತ್ತಿದ್ದು, ರಾಜಕೀಯ ವಲಯದ ಕುತೂಹಲವನ್ನೂ ಕೆರಳಿಸಿವೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಮತ್ತೊಂದು ಸಮೀಕ್ಷೆ ಆಘಾತ ನೀಡಿದೆ. ಕಾಂಗ್ರೆಸ್‌ ಕಡೆ ಜನರ ಒಲವು ಇದ್ದು, ವಿಧಾನಸಭಾ ಚುನಾವಣೆ ಬಳಿಕ ಮತ್ತೊಮ್ಮೆ ಬಿಜೆಪಿಗೆ ರಾಜ್ಯದಲ್ಲಿ ಮುಖಭಂಗವಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್‌ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ್ದ ʼಪಂಚ ಗ್ಯಾರಂಟಿʼಗಳ ಪರಿಣಾಮ ಬಹುತೇಕ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬೀರಿವೆ ಎಂದು ಸಮೀಕ್ಷೆ ಪರೋಕ್ಷವಾಗಿ ಹೇಳಿದೆ.

ಪೋಲ್ ಟ್ಯ್ರಾಕರ್ (Poll Tracker) ಎನ್ನುವ ಸಂಸ್ಥೆ ಕರ್ನಾಟಕದಲ್ಲಿ ನಡೆಸಿರುವ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಬರೋಬ್ಬರಿ 18 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವನ್ನು ಕಾಣಲಿದೆ ಎಂದು ಹೇಳಿದೆ.

ಇನ್ನು, ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿ 8 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ವರದಿ ಹೇಳಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕೂಡ ಇದೆ ಎಂದು ಅಚ್ಚರಿಯ ವರದಿ ನೀಡಿದೆ.

https://x.com/PollTracker/status/1779518373929566467

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!