Tuesday, April 30, 2024

ಬಿಜೆಪಿ 400 ಕ್ಷೇತ್ರಗಳನ್ನು ಗೆದ್ದರೆ ಮೀಸಲಾತಿಯನ್ನು ರದ್ದುಗೊಳಿಸಲ್ಲ : ಅಮಿತ್‌ ಶಾ

ಜನಪ್ರತಿನಿಧಿ (ನವ ದೆಹಲಿ) : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಷೇತ್ರಗಳನ್ನು ಗೆದ್ದರೆ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಹೇಳಿದ್ದಾರೆ.

ಭಂಡಾರಾ ಜಿಲ್ಲೆಯ ಸಾಕೋಲಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಈ ಗೊಂದಲವನ್ನು ಹಬ್ಬಿಸುತ್ತಿದೆ. ಬಿಜೆಪಿ ಎಂದಿಗೂ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ನಮಗೆ ಈಗ ಬಹುಮತವಿದ್ದು, ಮೀಸಲಾತಿ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ.ಈಗ 370 ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ ಹಾಗೂ ತ್ರಿವಳಿ ತಲಾಖ್ ಕೊನೆಗೊಳಿಸಿದ್ದೇವೆ ಆದರೆ ಮೀಸಲಾತಿಯನ್ನು ರದ್ದುಗೊಳಿಸಲಿಲ್ಲ. ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ ಎಂಬುದು ನರೇಂದ್ರ ಮೋದಿಯವರ ಗ್ಯಾರಂಟಿಯಾಗಿದೆ ಎಂದು ಹೇಳಿದರು.

“70 ವರ್ಷಗಳಲ್ಲಿ ಕಾಂಗ್ರೆಸ್ 370 ನೇ ವಿಧಿಯನ್ನು ರದ್ದುಗೊಳಿಸಲಿಲ್ಲ. ಆದರೆ ನಾವು ಅದನ್ನು ತೆಗೆದು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದಿದ್ದೇವೆ. ರಾಮಮಂದಿರ ವಿಚಾರವನ್ನು ಕಾಂಗ್ರೆಸ್‌ ವರ್ಷಗಳ ಕಾಲ ಎಳೆದಾಡುತ್ತಾ ಬಂದಿತ್ತು. ರಾಮಮಂದಿರ ನಿರ್ಮಾಣದ ಭರವಸೆಯನ್ನೂ ಮೋದಿ ಈಡೇರಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ, 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಮನೆಗಳಿಗೆ ಅನಿಲ ಸಂಪರ್ಕ, ಬಡವರ ಮನೆಗಳಿಗೆ ಉಚಿತ ವಿದ್ಯುತ್ ಭರವಸೆಯನ್ನು ಬಿಜೆಪಿ ಈಡೇರಿಸಲು ಜನರು ಮೂರನೇ ಅವಧಿಗೆ ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಬೇಕು ಎಂದು ವಿನಂತಿಸಿಕೊಂಡರು.

ಕಾಂಗ್ರೆಸ್ ಐದು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ ಹಾಗೂ ಅವರನ್ನು ನಿರಂತರವಾಗಿ ಅವಮಾನಿಸಿದೆ. ಬಾಬಾಸಾಹೇಬರಿಗೆ ಸಂಬಂಧಿಸಿದ ಐದು ಸ್ಥಳಗಳಿಗೂ ಬಿಜೆಪಿ ಸರಕಾರ ಪಾವಿತ್ರ್ಯತೆ ನೀಡಿದೆ ಎಂದು ಅಮಿತ್ ಶಾ ಹೇಳಿದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!