Sunday, September 8, 2024

ರಾಷ್ಟ್ರದ ಚಿತ್ತ ಬೆಂಗಳೂರು ಗ್ರಾಮೀಣದತ್ತ

ರಾಜಕೀಯವೆಂದರೆ ಹೇಗಿರಬೇಕು, ಹೇಗಿರಬಾರದು, ಹೀಗಿದ್ದರೆ ಚೆಂದ ಅನ್ನುವ ಕುರಿತಾಗಿ ಸಾಕಷ್ಟು ಚರ್ಚೆಗಳು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ನಡೆಯುತ್ತಾ ಇದೆ. ಅವರವರ ಮೂಗಿನ ನೇರಕ್ಕೆ ಸರಿ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಬಂದಿದ್ದೇವೆ.

ರಾಜಕೀಯ ಅಂದರೆ ಒಳ್ಳೆಯವರ ತಾಣವಲ್ಲ ಕೆಟ್ಟವರು ಆಟವಾಡುವ ತಾಣವೆಂದು ಭಾವಿಸುವಷ್ಟು ಮಟ್ಟಿಗೆ  ರಾಜಕಾರಣವನ್ನು ಬೆಳೆಸಿಕೊಂಡು ಬಂದಿದ್ದೇವೆ. ಈ ಎಲ್ಲಾ ಒಡಕು ಕೆಡುಕುಗಳ ಮಧ್ಯೆದಲ್ಲೂ ಕೆಲವರು ಒಳ್ಳೆಯತನವನ್ನು ಬಿತ್ತಿ ಹೇೂಗಿದ್ದಾರೆ ಈ ಮಧ್ಯದಲ್ಲಿ  ಕೆಟ್ಟವರು ಮುಖ ತೇೂರಿಸಿಹೇೂಗಿದ್ದು ಉಂಟು.

ಬಹು ಹಿಂದೆ ಡಾ.ಶಿವರಾಮ ಕಾರಂತರು ಕೂಡಾ ಪ್ರತಿಭಟನಾರ್ಥವಾಗಿ ತಮ್ಮ ಉಮೇದುವಾರಿಕೆಯನ್ನು ಕೈಗಾ ವಿಚಾರದಲ್ಲಿ ಕಾರವಾರದಲ್ಲಿ ಮುಂದಿಟ್ಟು ಠೇವಣಿಯನ್ನು ಕಳೆದುಕೊಂಡ ಉದಾಹರಣೆವೂ ನಮ್ಮ ಮುಂದಿದೆ. ಅದೇ ರೀತಿಯಲ್ಲಿ ಕವಿ ಗೇೂಪಾಲಕೃಷ್ಣ ಅಡಿಗರು ಕೂಡಾ ಮತದಾರರ ಹೃದಯದ ಮೀಡಿತವನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪರೀಕ್ಷಿಸಿ ಸೇೂಲುಂಡ ಅನುಭವವೂ ಕವಿ ಅಡಿಗರಿಗೂ ಆಗಿದೆ. ಅದೇ ರೀತಿ ನಮ್ಮ .ಟಿ.ಎ.ಪೈ ಯವರು ಕೂಡಾ ಒಬ್ಬ ಶ್ರೇಷ್ಠ ಪಾರ್ಲಿಮೆಂಟೇರಿಯನ್ ಆಗಿ ತಮ್ಮ ಛಾಪನ್ನು ಒತ್ತಿ ಉಡುಪಿಯಲ್ಲಿಯೇ ಸೇುಾಲುಂಡ ನಿದಶ೯ನವೂ ನಮ್ಮ ಮುಂದಿದೆ..

ಇದನ್ನೆಲ್ಲಾ ಕಂಡ ಮೇಲೆ ಈಗ ನನಗೆ ನೆನಪಾಗಿದ್ದು ಬೆಂಗಳೂರಿನ ಗ್ರಾಮೀಣ ಲೇೂಕಸಭಾ ಕ್ಷೇತ್ರ. ಇಂದು ಈ ಕ್ಷೇತ್ರದಲ್ಲಿ ರಾಜಕೀಯ ಹೇೂರಾಟದಲ್ಲಿ ಹ್ಯಾಟ್ರಿಕ್ ವೀರ ಅನ್ನಿಸಿಕೊಂಡ ಡಿ.ಕೆ.ಸುರೇಶ್ ರಾಜಕೀಯವಾಗಿ  ಆಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡವರು. ಧನಬಲ ಜನಬಲ ಎಲ್ಲವೂ ಇದೆ. ಇಂತಹ ಬಂಡೆಯನ್ನು ಸುಲಭವಾಗಿ ಪುಡಿಗಟ್ಟಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕಾಗಿಯೇ ಬಿಜೆಪಿ ವರಿಷ್ಠರು ರಾಜ್ಯದ ವೈದ್ಯಕೀಯ ರಂಗದಲ್ಲಿ ಅದ್ವಿತೀಯ ಸಾಧನೆ ಜನಮನ್ನಣೆ ಗಳಿಸಿದ ದೇವೇಗೌಡರ ಖಾಸಾ ಅಳಿಯ ದೇವರಾದ ಡಾ.ಎನ್.ಸಿ.ಮಂಜುನಾಥರನ್ನೆ ಬಿಜೆಪಿ   ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಕ್ಕೆ ಇಳಿಸಿ ಬಿಟ್ಟಿದ್ದಾರೆ.

ಡಾ.ಮಂಜುನಾಥ ಬರೇ ಹೃದಯ ತಜ್ಞ ಮಾತ್ರವಲ್ಲ ದೀನ ದಲಿತರ ಬಡ ಬಗ್ಗರ ನೇೂವಿನ ಆಳವನ್ನು ಕಣ್ಣಿನಲ್ಲಿಯೇ ಅಳೆಯ ಬಲ್ಲ ಶ್ರೇಷ್ಠ ಹೃದಯ ಶೀಲ ವ್ಯಕ್ತಿ ಅನ್ನುವುದರಲ್ಲಿ ಎರಡುಮಾತಿಲ್ಲ..ಇತ್ತೀಚೆಗೆ  ಪತ್ರಿಕೆಗೆ ನೀಡಿದ ಸಂದಶ ೯ನ ಒಂದರಲ್ಲಿ ಪತ್ರಕರ್ತರು ಅವರಿಗೆ ಕೇಳಿದ ಒಂದು ಪ್ರಶ್ನೆ ಅಂದರೆ “ನಿಮ್ಮ ರಾಜಕೀಯ ಬದುಕು ನಿಲುವು ಧಮ೯ಕೇಂದ್ರಿತವಾಗಿರತ್ತಾ?..ಅದಕ್ಕೆ ಅವರು ನೀಡಿದ ಉತ್ತರ ಎಷ್ಟು ಮಾಮಿ೯ಕ ವಾಗಿತ್ತು ಅಂದರೆ .”ನನ್ನ ರಾಜಕೀಯ ನಿಲುವು ಬದುಕು ಧಮ೯ ಕೇಂದ್ರಿತ ವಾಗಿರುವುದಿಲ್ಲ..ಬದಲಾಗಿ ಜನ ಕೇಂದ್ರಿತವಾಗಿರುತ್ತದೆ..ಮಾತ್ರವಲ್ಲ ನನ್ನ ನಿಜ ಬದುಕಿನಲ್ಲಿ ಕೂಡಾ ಧಮ೯ ಜಾತಿ ನೇೂಡಿ ನನ್ನ ವೈದ್ಯಕೀಯ ಸೇವೆಯನ್ನು ನೀಡಿದವನ್ನಲ್ಲ…”ಇದು ನಮ್ಮ ಡಾಕ್ಟರ್ ರವರ ಹೃದಯ  ವೈಶಾಲ್ಯ ಗುಣ.

ಹಾಗಾದರೆ ಇಂತಹ ಸದ್ಗುಣಿ ಬೆಂಗಳೂರಿನ ಗ್ರಾಮೀಣ ಚುನಾವಣೆಯಲ್ಲಿ ಗೆಲ್ಲ ಬಹುದೇ..? ನೂರಕ್ಕೆ ನೂರು ಗೆದ್ದೆ ಗೆಲುತ್ತಾರೆ ಅನ್ನುವುದು ಕಷ್ಟ.ಯಾಕೆ ಕೇಳಿದರೆ ನಮ್ಮಮತದಾರರ ಸಾಮಾನ್ಯ ಮನ ಸ್ಥಿತಿ ಹೇಗಿದೆ ಅಂದರೆ ರಾಜಕೀಯಕ್ಕೆ ರಾಜಕಾರಣಿಗಳೇ ಬೇಕು..ಯಾವುದೊ ಒಬ್ಬ  ಸಾಹಿತಿವೊ;ವೈದ್ಯರೊ ಪ್ರೊಫೇಸರೊ ಚುನಾವಣೆಗೆ ನಿಂತರೆ ಮೊದಲು ಕೇಳುವ ಪ್ರಶ್ನೆ “ನಿಮಗೆ ಇದು ಬೇಡವಾಗಿತ್ತು”ಅಂದರೆ ನೀವು ಒಳ್ಳೆಯವರು ಹಾಗಾಗಿ ಇದು ನಿಮಗೆ ಬೇಡವಾಗಿತ್ತು ಅನ್ನುವ ಅನುಕಂಪದ ಮಾತು.ಕೊನೆಗೂ ನಮ್ಮ ಸೇೂಲನ್ನು  ಇದೇ ಸಂತಾಪದ ನುಡಿಯಲ್ಲಿ ಸಂತೈಸಿಕೊಳ್ಳಬೇಕಾದ ಪರಿಸ್ಥಿತಿ..ಇದು ಉತ್ತಮರೆನ್ನಿಸಿಕೊಂಡವರು  ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅನುಭವಿಸ ಬೇಕಾದ ವಾಸ್ತವಿಕತೆಯ ಚಿತ್ರಣವೂ ಹೌದು.

-ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!