Sunday, September 8, 2024

ಉಡುಪಿ ಚಿಕ್ಕಮಗಳೂರು ಲೇೂಕಸಭಾ ಚುನಾವಣೆ : ರಾಜ್ಯದ ಚಿತ್ತ ಉಡುಪಿ-ಚಿಕ್ಕಮಗಳೂರಿನತ್ತ

ಉಡುಪಿ ಚಿಕ್ಕಮಗಳೂರು ಲೇೂಕಸಭಾ ಕ್ಷೇತ್ರದ ಚುನಾವಣೆ ಹಿಂದಿಗಿಂತಲೂ ಈ ಬಾರಿ ಹೆಚ್ಚು ಕುತೂಹಲ ಭರಿತವಾಗಿ ರಂಗೇರುವುದಂತು ಸತ್ಯ. ಅಭ್ಯರ್ಥಿಗಳ ಆಯ್ಕೆಯ ಮೊದಲೇ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಮ್ಮ ಮುಂದಿನ ಅಭ್ಯರ್ಥಿಗಳಾರು ಅನ್ನುವುದು ಕುತೂಹಲಕಾರಿ ಚರ್ಚೆಯಾಗಿತ್ತು. ಆದರೆ ಈಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೇೂಷಣೆ ಮಾಡಿಯಾಗಿದೆ. ಇನ್ನೇನಿದ್ದರು ತಮ್ಮ ಆಟದ ಮೈದಾನವನ್ನು ತಮ್ಮ ಅನುಕೂಲಕ್ಕೆ  ಸರಿಯಾಗಿ ಸಜ್ಜುಗೊಳಿಸಿಕೊಳ್ಳುವುದು ಮಾತ್ರ ಉಳಿದಿದೆ ಅಷ್ಟೇ. ಚುನಾವಣಾ ಪ್ರಚಾರದ ಚೊಚ್ಚಲ ಓವರಿನ ಪ್ರಥಮ ಬಾಲಿನಲ್ಲಿಯೇ ಸಾಕಷ್ಟು ವಾದ ವಿವಾದಗಳನ್ನು ಸೃಷ್ಟಿ ಮಾಡಿಕೊಂಡು ಅವರವರ ಅನುಕೂಲಕ್ಕೆ ಪೂರಕವಾಗಿ ಭಾವನಾತ್ಮಕ ತರದಲ್ಲಿ ಬ್ಯಾಟಿಂಗ್ ಮಾಡಲು ಶುರುವಾಗಿದೆ. ಮೊದಲ ಅಸ್ತ್ರವೇ “ಭಾಷಾಸ್ತ್ರ”. ಇದನ್ನು ಮೀರಿ ಇನ್ನೆಷ್ಟು ಬ್ರಹ್ಮಾಸ್ತ್ರಗಳು ಬರುತ್ತದೊ ಗೊತ್ತಿಲ್ಲ. ಅಂತೂ ಈ “ಭಾವನಾಸ್ತ್ರಗಳ” ಮಧ್ಯದಲ್ಲಿ “ಅಭಿವೃದ್ಧಿ ಅಸ್ತ್ರ” ಮರೆಯಾಗದಿದ್ದರೆ ಸಾಕು. ಅನ್ನುವುದು ಸಾಮಾನ್ಯ ಮತದಾರನ ಮನದಾಳದ ಭಾವನೆಯೂ ಹೌದು.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮತದಾರರು ಅತ್ಯಂತ ಸಹನಶೀಲರು ಸೌಹಾರ್ದ ಶೀಲರು ಪ್ರಬುದ್ಧ ಮತದಾರರು ಹೌದು. ಸಾಕ್ಷರತಾ ಪ್ರಮಾಣವೇ ಶೇ.75.3ರಷ್ಟಿದೆ. ಒಟ್ಟಿಗೆ 8 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಎರಡು  ಜಿಲ್ಲೆಯ ಸದ್ಯದ ರಾಜಕೀಯ ಬಲಾಬಲ ನೇೂಡುವಾಗ ಎರಡು ಜಿಲ್ಲೆಗಳು ಸರಿಸಮಾನವಾದ ಪಕ್ಷ ಪ್ರಾತಿನಿಧ್ಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಗಳಿಸಿಕೊಂಡಿದ್ದಾವೆ  ಅನ್ನುವುದು 2023ರ ವಿಧಾನಸಭಾ ಫಲಿತಾಂಶದಲ್ಲಿ ಕಂಡಿದ್ದೇವೆ. ಹಾಗಾಗಿ ಈ ಬಾರಿಯ ಲೇೂಕಸಭಾ ಚುನಾವಣೆ ಈ ಎರಡು ಪಕ್ಷಗಳಿಗು ಸರಿಸಮಾನವಾದ ನೈತಿಕ ಬಲವನ್ನು ತುಂಬಿದೆ ಅನ್ನುವುದು ಅಷ್ಟೇ ಸತ್ಯ.

ಈ ಎರಡು  ಜಿಲ್ಲೆಯ ಲೇೂಕಸಭಾ ವ್ಯಾಪ್ತಿಯಲ್ಲಿ ಒಟ್ಟು 15,59,896 ಮತದಾರರನ್ನು ಹೊಂದಿದೆ. ಅಂದರೆ ಕಳೆದ ಬಾರಿಗಿಂತ 46ಸಾವಿರ ಮತದಾರರನ್ನು ಹೆಚ್ಚು ಪಡೆದಿದೆ.

ಕ್ಷೇತ್ರ ಪುನರ್ ವಿಂಗಡಣೆ  ಅನಂತರದಲ್ಲಿ ಅಂದರೆ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಹೆಗ್ಗಳಿಕೆಗೆ ಬಿಜೆಪಿ ಪಕ್ಷಕ್ಕೆ ಸಂದಾಯವಾಗಿದೆ. ಅದೂ ಕೂಡಾ ಪುತ್ತೂರಿನಿಂದ ಬಂದು ಚುನಾವಣೆಗೆ ಇಳಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಮೂಲಕ. ಅವರ ರಾಜಿನಾಮೆ ಅನಂತರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ.ಸುನೀಲ್ ಕುಮಾರ್ ವಿರುದ್ಧ  ಸ್ಪರ್ಧಿಸಿ ವಿಜಯಿಶಾಲಿಗಳಾಗಿದ್ದರು. ಈ ಚುನಾವಣೆಯಲ್ಲಿ  ಕಾಂಗ್ರೆಸ್ ಶೇ.46. 75ರಷ್ಟು ಮತಗಳನ್ನು ಗಳಿಸಿದರೆ ಎದುರಾಳಿ ಬಿಜೆಪಿ  ಶೇ.41.39ರಷ್ಟು ಮತಗಳಿಕೆಯೊಂದಿಗೆ ಸೇೂಲು ಕಾಣಬೇಕಾಯಿತು. ಆದರೆ ಇನ್ನೂ ಒಂದು ವಿಶೇಷ ಅಂಶವೆಂದರೆ ತದನಂತರದಲ್ಲಿ ನಡೆದ ಪ್ರತಿಯೊಂದು ಚುನಾವಣೆಯಲ್ಲಿ ಅಂದರೆ 2014 ಮತ್ತು 2019ರ ಚುನಾವಣೆಯಲ್ಲಿ ಶೇೂಭಾ ಕರಂದಾಜ್ಲೆ ಸತತವಾಗಿ ಎರಡು ಬಾರಿ ವಿಜಯಿಶಾಲಿಯಾಗಿ ಮತ್ತೆ ಹ್ಯಾಟ್ರಿಕ್ ಸಾಧನೆಗೆ ಮುಂದಾದಾಗ ಸೀಟ್ ಸಿಗದ ಕಾರಣ ಬೆಂಗಳೂರಿನ ಉತ್ತರಕ್ಕೆ ಮುಖ ಮಾಡ ಬೇಕಾಯಿತು. ಇದು ಈ ಕ್ಷೇತ್ರದಲ್ಲಿ ಬಿಜೆಪಿಯ ಸಾದನೆಯ ಹಿನ್ನೇೂಟ.

ಈ ಪುನರ್ ವಿಂಗಡಣೆಯ ಪೂವ೯ದ ಇತಿಹಾಸ ಅಂದರೆ 2008ರ ಹಿಂದಿನ ರಾಜಕೀಯ  ನೇೂಡಿದಾಗ ಉಡುಪಿ ಲೇೂಕ ಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ರಾಜಕೀಯ ದಿಗ್ಗಜರು ಅಂದರೆ  ಕಾಂಗ್ರೆಸ್ ಪಕ್ಷದ ಯು.ಶ್ರೀನಿವಾಸ ಮಲ್ಯ, ರಂಗನಾಥ ಶೆಣೈ, ಜೆ.ಎಂ.ಲೇೂಬೊ, ಪ್ರಭು (ಸ್ವತಂತ್ರ ಪಕ್ಷ;), ಕಾಂಗ್ರೆಸನ ಟಿ.ಎ.ಪೈ. ಕಾಂಗ್ರೆಸ್ 1980 ರಿಂದ 1996ರ ತನಕ ಐದು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ ಕೀರ್ತಿ ಓಸ್ಕರ್ ಫೇರ್ನಾಂಡೆಸ್ ರಿಗೆ ಸಲ್ಲುತ್ತದೆ.‌ ಮೂಲತಃ  ಕುಂದಾಪುರದವರೇ ಆದ ಐ.ಎಂ. ಜಯರಾಂ ಶೆಟ್ಟಿಯವರು ಹನ್ನೆರಡನೆಯ ಲೇೂಕಸಭೆಗೆ ಈ ಕ್ಷೇತ್ರದಲ್ಲಿ ಬಿಜೆಪಿಯ ಹೆಸರಿನಲ್ಲಿ ಖಾತೆ ತೆರೆದ ಹೆಗ್ಗಳಿಕೆಗೆ ಅವರಿಗಿದೆ. ಪುತ್ತೂರಿನಿಂದ ಬಂದ ವಿನಯಕುಮಾರ ಸೊರಕೆ ಹದಿಮೂರನೇ ಲೇೂಕಸಭೆಗೆ ಉಡುಪಿಯಿಂದಲೇ ಪ್ರವೇಶ ಮಾಡಿದರು. 2004ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದು ಮನೇೂರಮಾ ಮಧ್ವರಾಜ್ ವಿಶೇಷ ತರದಲ್ಲಿ ಖಾತೆ ತೆರೆದಿದ್ದು ಚುನಾವಣಾ ಇತಿಹಾಸ.

ಜಾತಿವಾರು ಲೆಕ್ಕಾಚಾರ ನೇೂಡಿದಾಗ ಕೂಡಾ ಈ ಕ್ಷೇತ್ರದಲ್ಲಿ ಬಿಲ್ಲವರು ಬಂಟರು ಅಂಕೆ ಸಂಖ್ಯೆಯಲ್ಲಿ ಸರಿಸಮಾನವಾಗಿದ್ದಾರೆ. ಪರಿಶಿಷ್ಟ ಜಾತಿ  ಪರಿಶಿಷ್ಟ ವರ್ಗ, ಅಲ್ಪ ಸಂಖ್ಯಾತರು ಒಕ್ಕಲಿಗರು, ಲಿಂಗಾಯತರು ಮತ್ತಿತರ ಜಾತಿಯವರು ಕೂಡಾ ಚುನಾವಣಾ ಫಲಿತಾಂಶವನ್ನು ತಲೆ ಮೇಲೆ ಕೆಳಗೆ ಮಾಡುವಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಇಲ್ಲಿ ಜಾತಿ ಲೆಕ್ಕಾಚಾರದ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ ಅಂದು ನಿರ್ಧರಿಸುವುದು ತಪ್ಪು. ಆದರೆ ಇತ್ತೀಚಿನ  ಚುನಾವಣಾ ಕಾಲ ಘಟ್ಟದಲ್ಲಿ ಜಾತಿಯನ್ನು ಪರಿಗಣಿಸಿ ಮಣೆ ಹಾಕುವ ಲೆಕ್ಕಾಚಾರ ಎರಡು ಪಕ್ಷಗಳಲ್ಲಿ ನಡೆಯುವುತ್ತಿರುವುದು ವಿಪರ್ಯಾಸ.

ಇತ್ತೀಚಿನ ದಶಕಗಳ ಚುನಾವಣೆಯಲ್ಲಿ ಕರಾವಳಿ ಅಂದರೆ ಹಿಂದುತ್ವ ಅಲೆ. ಮೇೂದಿಯವರ ಪ್ರಭಾವಳಿಯ ಹೆಸರಿನಲ್ಲಿ ಗೆದ್ದು ಬರಬಹುದು ಅನ್ನುವ ಚುನಾವಣಾ ಕಾವು ಜೇೂರಾಗಿ ಬೀಸುತ್ತಿದೆ. ಎಪ್ಪತ್ತರ ದಶಕದಲ್ಲಿ ಇದೇ ರೀತಿಯ ಬಿರುಗಾಳಿ ಇಂದಿರಾ ಗಾಂಧಿ ಅವರ ದಿಕ್ಕಿನಿಂದಲೂ ಬೀಸಿದ ಅನುಭವ ಈ ಕ್ಷೇತ್ರದ ಜನರಿಗಿದೆ. ಹಾಗಾದರೆ 2024ರ ಲೇೂಕಸಭಾ ಚುನಾವಣೆಯಲ್ಲಿ 2019 ರ ಫಲಿತಾಂಶ ಮತ್ತೆ ಮರುಕಳಿಸಬಹುದಾ? 2019 ರ ಲೇೂಕಸಭಾ ಚುನಾವಣೆಯ ಸಂದರ್ಭದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸರಿಯಾದ ನೆಲೆಗಟ್ಟು ಇರಲೇ ಇಲ್ಲದ ಸ್ಥಿತಿ. ಅಂದರೆ ಪರಿಸ್ಥಿತಿ ಹೇಗಿತ್ತು ಕೇಳಿದರೆ ತಮ್ಮ ಪಕ್ಷದಿಂದಲೇ ಸರಿಯಾದ ಅಭ್ಯರ್ಥಿಯನ್ನು ನಿಲ್ಲಿಸಲು ಸಾಧ್ಯವಾಗದೆ ತಮ್ಮ ಪಕ್ಷದವರೇ ಆದ ಪ್ರಮೇೂದ ಮಧ್ವರಾಜರನ್ನು ಜೆಡಿಎಸ್ ಗೆ ಎರವಾಲಾಗಿ ಕೊಟ್ಟು ಸ್ಪರ್ಧಿಸಬೇಕಾದ ಪರಿಸ್ಥಿತಿ ಇತ್ತು, ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಮಾತ್ರವಲ್ಲ ಬಿಜೆಪಿ ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ನ್ನು ಎದುರಿಸಲು ಮುಂದಾಗಿದೆ. ಕಳೆದ 2023ರ ವಿಧಾನ ಸಭಾ ಫಲಿತಾಂಶದ ಅನಂತರದಲ್ಲಿ ಕಾಂಗ್ರೆಸ್ ಬಿಜೆಪಿ ಸಮಬಲದ ಪ್ರಾತಿನಿಧ್ಯವನ್ನು ಹೊಂದಿದೆ. ಅಂದರೆ 4 ಪ್ಲಸ್‌ 4 ರ ಸಮಬಲದ ತಾಕತ್ತು ಈ ಎರಡು ರಾಷ್ಟ್ರೀಯ ಪಕ್ಷಗಳಿಗಿದೆ. ಅದೇ 2019 ಲೇೂಕಸಭಾ ಚುನಾವಣಾ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ 7 ಶಾಸಕರು ಬಿಜೆಪಿಯವರಾಗಿದ್ದರು ಮಾತ್ರವಲ್ಲ ಕೇವಲ ಒಬ್ಬ ಶಾಸಕರು ಮಾತ್ರ  ಕಾಂಗ್ರೆಸ್ ಕಡೆ ಇದ್ದರು. ಆದರೆ ಈಗಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಅನ್ನುವುದು ಸದ್ಯಕ್ಕೆ ಕಾಣಬಹುದಾದ ರಾಜಕೀಯ ವಾತಾವರಣ.

 ಇನ್ನೂ ಒಂದು ಅಂಶ ಗಮನಿಸುವುದಿದ್ದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾದಲ್ಲಿ ಇರುವ ಕಾರಣ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಶಕ್ತಿ ನೀಡುವ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇದೊಂದು ಪ್ಲಸ್ ಎಂದೇ ವಿಶ್ಲೇಷಿಸಬಹುದು.

ಬಿಜೆಪಿಯ ಮೇೂದಿ  ಮತ್ತು ಹಿಂದುತ್ವ ದ ಅಲೆಯನ್ನು  ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿಗಳ ಅಸ್ತ್ರ ಪ್ರಯೇೂಗಿಸಲು ಸಿದ್ಧವಾಗಿ ನಿಂತಿದೆ ಸಿದ್ದು ಸರ್ಕಾರ ಅನ್ನುವುದು, ಇನ್ನೊಂದು ಕಾಂಗ್ರೆಸ್ ಪಾಲಿಗೆ  ಪೂರಕವಾದ ಇನ್ನೊಂದು ಅಸ್ತ್ರ.  ಬಹುಮುಖ್ಯವಾಗಿ ಎರಡು ಗ್ಯಾರಂಟಿಗಳಾದ  ಮಹಿಳಾ ಉಚಿತ ಬಸ್ ಪಯಾಣ ಇನ್ನೊಂದು ಉಚಿತ ವಿದ್ಯುತ್‌ ಇದು ಹೆಚ್ಚು  ಫಲಕಾರಿಯಾದ ಕಾರಣ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ವಲ್ಪ ಹೆಚ್ಚಿನ  ಶಕ್ತಿ ನೀಡಬಹುದು ಅನ್ನುವುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯ.  ಈ ಗ್ಯಾರಂಟಿ ಅಸ್ತ್ರದ ಫಲಾನುಭವಿಗಳು ಮನಸ್ಸು ಮಾಡಿದರೆ ಮೇೂದಿಯವರ ಬ್ರಹ್ಮಾಸ್ತ್ರವನ್ನು ಎದುರಿಸಿ ಕನಿಷ್ಠ ಪಕ್ಷ 28ರಲ್ಲಿ 20 ಸ್ಥಾನಗಳನ್ನು ಗೆಲ್ಲಿಸಿಕೊಡ ಬಹುದು ಅನ್ನುವ ಭರವಸೆ  ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿರುವುದಂತೂ ನಿಜ.

ಹಾಗಾದರೆ ಕಾಂಗ್ರೆಸ್ ಗೆ ಇರುವ ಸವಾಲುಗಳೇನು? ಬಹು ಮುಖ್ಯವಾಗಿ ಬಿಜೆಪಿ ಅನ್ನುವುದಕ್ಕಿಂದ ಉಡುಪಿ ಕರಾವಳಿಯ ಹಿಂದುತ್ವ ಪ್ರಭಾವ ಇದರ ಜೊತೆಗೆ ಮೇೂದಿಯವರ ಮೇಲಿಟ್ಟಿರುವ ಅತಿಯಾದ ವಿಶ್ವಾಸ .ಇನ್ನೊಂದು ಪ್ರಮುಖವಾಗಿ ಗಮನಿಸ ಬೇಕಾದದ್ದು 2019ರಲ್ಲಿ ಬಹು ಸಲಿಸಾಗಿ ಬಹು ಅಂತರದಲ್ಲಿ ಗೆಲುವು ಸಾಧಿಸಿರುವ ಟ್ರ್ಯಾಕ್ ರೆಕಾರ್ಡ್  ಬಿಜೆಪಿಗೆ  ಇದೆ.

ಇದಕ್ಕೊಂದಿಷ್ಟು ಪೂರಕವಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಹುಮುಖ್ಯವಾಗಿ ಉಡುಪಿ  ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಅಂತರದಲ್ಲಿ ಪಕ್ಷಕ್ಕೆ  ಲೀಡ್  ಕೊಟ್ಟಿರುವುದು ಬಿಜೆಪಿಗೆ ಮನ ಸ್ಥೈರ್ಯ ಜಾಸ್ತಿ ಮಾಡಿರುವುದಂತು ನಿಜ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ತನ್ನ ಮುಂದಿನ ರಣತಂತ್ರ ರೂಪಿಸಿ ಕೊಳ್ಳ ಬೇಕಾದ ಅನಿವಾರ್ಯತೆ ಇದೆ.

ಪಕ್ಷಗಳಿಂದ ಹೊರಗೆ ನಿಂತು ಅಭ್ಯರ್ಥಿಗಳನ್ನೆ  ಗಮನದಲ್ಲಿಟ್ಟುಕೊಂಡು ಇಟ್ಟುಕೊಂಡು  ವಿಶ್ಲೇಸುವಾಗ ಕಾಣಬಹುದಾದ ಪ್ಲಸ್ ಮತ್ತು ಮೈನಸ್ ಕಡೆಗೆ ನೇೂಡಿದಾಗ ಮೇಲ್ನೋಟಕ್ಕೆ ಪರಿಗಣಿಸಬಹುದಾದ ಪ್ರಮುಖ ಅಂಶಗಳು ಹೀಗಿವೆ. ಕಾಂಗ್ರೆಸ್ಸಿನ  ಕಡೆಯಿಂದ ಕಣದಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರ  ಪ್ಲಸ್  ಪಾಯಿಂಟ್ ಗಳೆಂದರೆ ಹೆಗ್ಡೆ ಅವರಿಗಿರುವ ವಯಕ್ತಿಕ  ವರ್ಚಸ್ಸಿನ ಜೊತೆಗೆ ಸಜ್ಜನಿಕೆಯ ವ್ಯಕ್ತಿತ್ವ. ಸಂಸದೀಯ ನಡವಳಿಕೆಯ ಬಗ್ಗೆಗಿನ ಅವರ ಅಪಾರ ಅನುಭವ ಮತ್ತು ಜ್ಞಾನ. ಕರಾವಳಿ ಜಿಲ್ಲೆಯಲ್ಲಿ ಪಕ್ಷಾತೀತರಾಗಿ ಗೆಲುವು ಸಾಧಿಸಿದ  ಹಿರಿಮೆ ಅವರಿಗಿದೆ. ಅಂದಿನ ಬ್ರಹ್ಮಾವರ ಕ್ಷೇತ್ರದಿಂದ ಮೂರು  ಬಾರಿ ಆಯ್ಕೆಯಾಗಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಸಚಿವರಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಡುಪಿ ಜಿಲ್ಲಾ ಸ್ಥಾಪನೆಗೂ ಕಾರಣೀಕರ್ತರು ಅನ್ನುವ ಸಾಧನೆಗಳ ಕೀರ್ತಿ ಅವರಿಗೆ ಸಂದಿದೆ. ಮಾತ್ರವಲ್ಲ ಕೇವಲ ಎರಡು ವರುಷಗಳ ಕಾಲ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಕಾರ್ಯ ನಿರ್ವಹಿಸಿದ ಹಿರಿತನ ಅವರಿಗಿದೆ. ಹಾಗೂ ಎರಡು ಜಿಲ್ಲೆಯಲ್ಲಿ ಚಿರಪರಿಚಿತ ಅಭ್ಯರ್ಥಿ ಎಂದು ಗುರುತಿಸಿ ಕೊಂಡಿದ್ದಾರೆ. ಹಿಂದುಳಿದ ಶಾಶ್ವತ ಆಯೇೂಗದ ಅಧ್ಯಕ್ಷರಾಗಿ ವರದಿ ನೀಡಿದ ಸಾಧನೆಯ ಪಟ್ಟಿ ಅವರಿಗಿದೆ.

ಇಷ್ಟೆಲ್ಲಾ ಪ್ಲಸ್ ಪಾಯಿಂಟ್ ಗಳಿದ್ದರು ಅವರಿಗಿರುವ ಮೈನಸ್ ಪಾಯಿಂಟ್ ಏನು.? ಒಂದೇ ಒಂದು ನೆಗೆಟ್ಯೂ ಅಂದರೆ ಕಾಂಗ್ರೆಸ್ ನಿಂದ ಬಿಜೆಪಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ಮುಖ ಮಾಡಿದ್ದಾರೆ ಅನ್ನುವ ಮಾತು. ಇದರ ಅರ್ಥ ಈ ಎರಡು ಪಕ್ಷಗಳಲ್ಲಿ ಹೆಗ್ಡೆ ಅವರನ್ನು ಟೀಕಿಸುವವರು ಎಷ್ಟು ಮಂದಿ ಇದ್ದಾರೊ ಅಷ್ಟೇ ಮಂದಿ ಪ್ರೀತಿಸುವವರು ಇದ್ದಾರೆ. ಇಂದಿನ ಪರಿಸ್ಥಿತಿ ಏನಾಗಿದೆ ಅಂದರೆ ನಾವು ಬಯಸುವ ಪಕ್ಷಕ್ಕೆ ಬಂದಾಗ ಗೌರವಿಸುವುದು ಅದೇ ರೀತಿಯಲ್ಲಿ ಬೇರೆ ಪಕ್ಷಕ್ಕೆ ಹೇೂದಾಗ ನಿಂದಿಸುವುದು ಸಾಮಾನ್ಯ ಮನ ಸ್ಥಿತಿಯಾಗಿ ಬಿಟ್ಟಿದೆ. ಪ್ರಬಲವಾದ ವಯಕ್ತಿಕ ವರ್ಚಸಿನ ಜಯಪ್ರಕಾಶ್ ಹೆಗ್ಡೆಯವರು ಚುನಾವಣಾ ಕಣದಲ್ಲಿ ಇರುವುದು ಕೂಡಾ ಬಿಜೆಪಿಗರಿಗೆ ಅತಿ ದೊಡ್ಡ ಸವಾಲಾಗಿರುವುದಂತೂ ನಿಜ.

ಹಾಗಾದರೆ ಬಿಜೆಪಿ ಪರ ಕಣದಲ್ಲಿರುವ ಕೇೂಟ ಶ್ರೀನಿವಾಸ್ ಪೂಜಾರಿಯವರ ಪ್ಲಸ್ ಪಾಯಿಂಟ್ ಗಳೇನು? ರಾಜಕೀಯದಲ್ಲಿ ಗ್ರಾಮ ಮಟ್ಟದಿಂದ ಬೆಳೆದು ಬಂದ ಸುದೀರ್ಘವಾದ ರಾಜಕೀಯ ಅನುಭವ ಪೂಜಾರಿಯವರ ಅತೀ ದೊಡ್ಧ ಸಾಧನೆಯೂ ಹೌದು. ಈ ಅರ್ಥದಲ್ಲಿ ಬಿಜೆಪಿಯಲ್ಲಿ ಇಷ್ಟೊಂದು ಲಕ್ಕಿ ವ್ಯಕ್ತಿಗಳು ಇನ್ನೊಬ್ಬರಿಲ್ಲ ಅನ್ನುವುದನ್ನು ಅವರ ಪಕ್ಷದವರೆ ಹೇಳುವ ಮಾತು. ಚುನಾವಣೆಯಲ್ಲಿ ನೇರವಾಗಿ ಚುನಾಯಿತರಾಗದಿದ್ದರು ಪಕ್ಷಕ್ಕೆ ತೇೂರಿದ ನಿಷ್ಠೆ ಸೇವೆ ಕೃತಜ್ಞತಾ ಭಾವ ಪೂಜಾರಿ ಅವರಿಗೆ ಸಾಕಷ್ಟು ಸ್ಥಾನಮಾನವನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು ಅನ್ನುವುದು ಅಷ್ಟೇ ನಿಜ. ಸಾಧಾರಣವಾಗಿ  ಶ್ರೀನಿವಾಸ ಪುಾಜಾರಿ ಅವರೆಂದರೆ ಸರಳ ಅಂದರೆ ಸಿಂಪಲ್ ಸಿಟಿ ಅನ್ನುವುದು ಅವರಿಗೆ ಅನ್ವರ್ಥವಾಗಿ ಬಂದ ಹೆಸರು. ಅವರು ತಮ್ಮ ರಾಜಕೀಯ ಅನುಭವಗಳನ್ನು ಗ್ರಾಮ ತಾಲೂಕು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಯಾಗಿ ಪಡೆದು ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ, ವಿಪಕ್ಷ ನಾಯಕರಾಗಿ ವಿಧಾನಪರಿಷತ್ ನಲ್ಲಿ ಗಮನ ಸೆಳೆದವರು. ಇವರಿಗಿರುವ ಮೈನಸ್ ಪಾಯಿಂಟ್ ಅಂದರೆ ಇವರು ನೇರ ನೇರ ಚುನಾವಣೆ ಯಲ್ಲಿ ಸೆಣಸಾಡಿದ ಅನುಭವ ಕಡಿಮೆ. ಅವರು ಉಡುಪಿ ಜಿಲ್ಲಾ ಪರಿಸರಕ್ಕೆ ಹೆಚ್ಚು ಚಿರಪರಿಚಿತರು ಆದರೆ ಚಿಕ್ಕಮಗಳೂರು ಕಡೆ ಇನ್ನಷ್ಟು ಪರಿಚಿತರಾಗಬೇಕಾದ ಅನಿವಾರ್ಯತೆ ಅವರಿಗಿದೆ.

ಪೂಜಾರಿ ಅವರಿಗೆ ಎಲ್ಲಾ ಜಾತಿಯ ವರ್ಗದ ಪ್ರದೇಶದ ನಾಯಕರ ಮನಸ್ಸು ಗೆದ್ದು ಪ್ರಚಾರಕ್ಕೆ ಇಳಿಯಬೇಕಾದ ಅಗತ್ಯವೂ ಇದೆ. ಅವರು ಬಲವಾಗಿ ನಂಬಿರುವುದು ಹಿಂದುತ್ವ ಮತ್ತು ಮೇೂದಿ ಅವರ ಹೆಸರಿನ ಬಲ.

ಒಂದಂತೂ ಸತ್ಯ ಈ ಬಾರಿಯ ಉಡುಪಿ  ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಸರಳತೆ ಸಜ್ಜನಿಕೆ ಯ ನಡುವಿನ ತೀವ್ರವಾದ ಪೈಪೇೂಟಿ ಹೇೂರಾಟ ನೀಡುವುದಂತೂ ನಿಜ. ಈ ದಿಸೆಯಲ್ಲಿ ಇಡಿ ಕರ್ನಾಟಕದ ಚಿತ್ತ ಉಡುಪಿ ಚಿಕ್ಕಮಗಳೂರು ಕಡೆಗೆ ಹರಿಯುವುದಂತೂ ನೂರಕ್ಕೆ ನೂರು ಸತ್ಯ.

ಅಂತೂ ಪ್ರಜಾಪ್ರಭುತ್ವದ ಪ್ರಜಾ ನಾರಾಯಣ ಯಾರ ಕಡೆಗೆ ಒಲಿಯುತ್ತಾನೆ ಅನ್ನುವುದು ಎಪ್ರಿಲ್ 26ರಂದು ನಿರ್ಧರಿಸುವ ಮೂಹೂರ್ತ ಕೂಡಿ ಬರುವ ಘಳಿಗೆಗಾಗಿ ಕಾಯೇೂಣ. ಮಾತ್ರವಲ್ಲ  ಜೂನ್ 4 ರಂದು ವಿಜಯಮಾಲೆ ಯಾರ ಕೊರಳನ್ನು ಅಲಂಕರಿಸಲಿದೆ ಅನ್ನುವುದನ್ನು ಅತ್ಯಂತ ಸಮಚಿತ್ತದಿಂದ ಕಾಯೋಣ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ರಾಜಕೀಯ ವಿಶ್ಲೇಷಕರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!