spot_img
Friday, April 25, 2025
spot_img

ಲೋಕಸಭಾ ಚುನಾವಣೆ : ಮಾದರಿ ನೀತಿ ಸಂಹಿತೆ ಜಾರಿ ಇದ್ದರೂ ತೆರವುಗೊಳಿದ ಪ್ರಧಾನಿ ಭಾವಚಿತ್ರ ! ಕಾರ್ಕಳ ಪುರಸಭೆಯ ಬೇಜವಾಬ್ದಾರಿತನ !

ಜನಪ್ರತಿನಿಧಿ (ಕಾರ್ಕಳ) : ಲೋಕಸಭಾ ಚುನಾವಣೆಗೆ ಏ.26 ರಂದು ಮುಹೂರ್ತ ನಿಗದಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ತತ್‌ಕ್ಷಣದಿಂದ ಜಿಲ್ಲಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಬಿಸಿ ತಟ್ಟಿದ್ದರೂ, ಕಾರ್ಕಳ ಪುರಸಭೆಗೆ ಅನ್ವಯವಾಗದಿರುವುದು ಇಲ್ಲಿನ ಜನತೆ ಪ್ರಶ್ನಿಸುವಂತಾಗಿದೆ.

ಪುರಸಭೆ ವ್ಯಾಪ್ತಿಯ ಎಲ್ಲಾ ಕಡೆಗಳಿಂದಲೂ  ಅನಧಿಕೃತ ಬ್ಯಾನರ್ ಕಟೌಟ್‌ಗಳು  ಹಾಗೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಬ್ಯಾನರ್ ಕಟೌಟ್ ಗಳನ್ನು ತೆರವುಗೊಳಿಸಿದೆಯಾದರೂ, ಆನೆಕೆರೆ ಪೆಟ್ರೋಲ್ ಪಂಪ್ ನಲ್ಲಿ ಅಳವಡಿಸಿದ್ದ ಪ್ರಧಾನಿ ಭಾವಚಿತ್ರವುಳ್ಳ ಕಟೌಟ್ ಇನ್ನೂ ತೆರವುಗೊಳಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಟೌಟ್ ತೆರಗೊಳಿಸುವಂತೆ ಪೆಟ್ರೋಲ್ ಪಂಪ್ ಮಾಲಕರಿಗೆ ಸೂಚಿಸಿದರು ಅದಕ್ಕೆ ಕ್ಯಾರೆ ಎನ್ನದಿರುವುದು ಚುನಾವಣ ಆಯೋಗಕ್ಕೆ ಸೆಡ್ಡು ಹೊಡೆದಂತಾಗಿದೆ. ಈ ಬಗ್ಗೆ ಸ್ಥಳೀಯರೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಗೊಂಡ 24 ಗಂಟೆಯಲ್ಲಿ ಸರ್ಕಾರದ ಪ್ರಚಾರ ಫ‌ಲಕಗಳು, ಫ್ಲೆಕ್ಸ್‌, ಬ್ಯಾನರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದೆ. ಸರ್ಕಾರದ ವೈಬ್‌ಸೈಟ್‌ಗಳಲ್ಲಿ ಕೂಡ ಚುನಾಯಿತ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪರ ಇರುವ ಗೋಡೆ ಬರಹವನ್ನು ಸಂಪೂರ್ಣವಾಗಿ ಅಳಿಸಲಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರ ಫಲಕಗಳನ್ನು ತೆರವುಗೊಳಿಸಲಾಗುತ್ತದೆ. ಆದರೇ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುರಸಭೇ ವ್ಯಾಪ್ತಿಗೆ ಒಳಪಡುವ ಆನೆಕೆರೆ ಪೆಟ್ರೋಲ್ ಪಂಪ್ ನಲ್ಲಿ ಅಳವಡಿಸಿದ್ದ ಪ್ರಧಾನಿ ಭಾವಚಿತ್ರವನ್ನು ಒಳಗೊಂಡಿರುವ ಗರೀಬ್‌ ಕಲ್ಯಾಣ್‌ ಯೋಜನೆಯ ಪ್ರಚಾರವಿರುವ ಕಟೌಟ್ ನನ್ನು ಇನ್ನೂ ತೆರವುಗೊಳಿಸದೇ ಬೇಜವಾಬ್ದಾರಿತನ ಮೆರೆದಿದೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!