Sunday, September 8, 2024

ಚುನಾವಣಾ ಬಾಂಡ್‌ನಿಂದ ಜೆಡಿಎಸ್‌ಗೆ ಹರಿದು ಬಂತು ಕೋಟಿ ಕೋಟಿ ಹಣ | ಎಚ್‌ಡಿಕೆ ಸಿಎಂ ಆಗಿದ್ದಾಗಲೇ ಶೇ. 40 ರಷ್ಟು ದೇಣಿಗೆ !

ಜನಪ್ರತಿನಿಧಿ (ಬೆಂಗಳೂರು) : ಜನತಾ ದಳ (ಜಾತ್ಯತೀತ) ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಎನ್‌ಡಿಎ ಯ ಅಂಗ ಪಕ್ಷವಾಗಿ ಸದ್ಯ ಈಗ ಟಿಕೇಟ್‌ ಹಂಚಿಕೆಯ ವಿಚಾರದಲ್ಲಿ ಅಸಮಾಧಾನಗೊಂಡಿರುವುದರ ನಡುವೆಯೇ ಗೌಡರ ಕುಟುಂಬದ ಪಕ್ಷ ಜೆಡಿಎಸ್‌ ಗೆ ಚುನಾವಣಾ ಬಾಂಡ್‌ ಮೂಲಕ ಹರಿದು ಬಂದಿರು ದೇಣಿಗೆ ಎಷ್ಟು ಎಂಬ ವಿಚಾರ ಹಾಗೂ ಯಾವೆಲ್ಲಾ ಕಂಪೆನಿಗಳು ಗೌಡರ ಪಕ್ಷಕ್ಕೆ ದೇಣಿಗೆ ನೀಡಿವೆ ಎನ್ನುವ ವಿಚಾರ ಬಹರಂಗವಾಗಿದೆ.

ಜೆಡಿಎಸ್ ಪಕ್ಷವು ಕಳೆದ 6 ವರ್ಷಗಳ ಅವಧಿಯಲ್ಲಿ ಸುಮಾರು 90 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ರೂಪದಲ್ಲಿ ಸ್ವೀಕರಿಸಿದೆ ಎಂದು ಈಗ ತಿಳದು ಬಂದಿದೆ. ಜೆಡಿಎಸ್‌ಗೆ ಸಿಕ್ಕ ಒಟ್ಟು ಎಲೆಕ್ಷನ್ ಬಾಂಡ್ ದೇಣಿಗೆ ಪೈಕಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಶೇ. 40 ರಷ್ಟು ದೇಣಿಗೆ ಹಣ ಹರಿದು ಬಂದಿದೆ ಎನ್ನುವುದು ಹುಬ್ಬೇರಿಸುವಂತೆ ಮಾಡಿದೆ.

ಜೆಡಿಎಸ್ ಒಟ್ಟು ಈವರೆಗೆ 89.8 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ರೂಪದಲ್ಲಿ ಸಂಗ್ರಹ ಮಾಡಿದೆ ಎನ್ನುವು ಪ್ರಾಥಮಿಕ ಲೆಕ್ಕಚಾರ ದೊರಕಿದೆ. ಈ ಪೈಕಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲೇ ಜೆಡಿಎಸ್ ಪಕ್ಷಕ್ಕೆ ಹಲವು ಕಂಪನಿಗಳು 35.5 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ನೀಡಿವೆ ಎನ್ನುವುದು ತಿಳಿದು ಬಂದಿದೆ.

2018ರ ಮೇ ತಿಂಗಳಿನಿಂದ 2019ರ ಏಪ್ರಿಲ್‌ ತಿಂಗಳವರೆಗೆ ಎಚ್. ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್  ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದರು. ಈ ಅವಧಿಯಲ್ಲೇ ಪಕ್ಷಕ್ಕೆ ಅತಿ ಹೆಚ್ಚು ಚುನಾವಣಾ ಬಾಂಡ್ ದೇಣಿಗೆ ಹಣ ಹರಿದು ಬಂದಿರುವುದು ಸದ್ಯ ಬಹಿರಂಗವಾಗಿದೆ.

2023ರವರೆಗೆ ಜೆಡಿಎಸ್ ಪಕ್ಷಕ್ಕೆ ಚುನಾವಣಾ ಬಾಂಡ್ ಮೂಲಕ ಬಂದ ಒಟ್ಟು ದೇಣಿಗೆ 89.8 ಕೋಟಿ ರೂ. ಎನ್ನಲಾಗಿದ್ದು, ಈ ಕುರಿತಾದ ಹೊಸ ಮಾಹಿತಿಗಳು ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಇಷ್ಟೊಂದು ಪ್ರಮಾಣದಲ್ಲಿ ದೇಣಿಗೆ ಕೊಟ್ಟಿರುವವರು ಯಾರು?

ಜೆಡಿಎಸ್‌ ಪಕ್ಷಕ್ಕೆ ದೇಣಿಗೆ ಕೊಟ್ಟಿರುವ ವ್ಯಕ್ತಿ ಹಾಗೂ ಸಂಸ್ಥೆಗಳ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವುದು ನಾರಾ ಕನ್‌ಸ್ಟ್ರಕ್ಷನ್ ಅಂಡ್ ರಿತ್ವಿಕ್ ಪ್ರಾಜೆಕ್ಟ್‌ ಸಂಸ್ಥೆಗಳು. ಈ ಸಂಸ್ಥೆಗಳು ತಲಾ 10 ಕೋಟಿ ರೂ. ದೇಣಿಗೆ ನೀಡಿವೆ. ಮಾತ್ರವಲ್ಲದೇ ಐಎಲ್‌ಎಬಿಎಸ್ ಎಚ್‌ವೈಡಿ ಟೆಕ್ನಾಲಜೀಸ್ ಹಾಗೂ ಕೆಸಿಆರ್ ಎಂಟರ್ ಪ್ರೈಸಸ್ ಸಂಸ್ಥೆಗಳು ತಲಾ 5 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ಜೆಡಿಎಸ್‌ಗೆ ದೇಣಿಗೆಯಾಗಿ ನೀಡಿವೆ ಎಂದು ತಿಳಿದು ಬಂದಿದೆ.

ಅಷ್ಟಲ್ಲದೇ, ಸಿಗ್ಮಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌, ನಿಂಬಾ ಬಯೋಟೆಕ್, ಮೇಘಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗಳೂ ಜೆಡಿಎಸ್‌ಗೆ ಚುನಾವಣಾ ಬಾಂಡ್ ರೂಪದಲ್ಲಿ ದೇಣಿಗೆ ಸಲ್ಲಿಸಿವೆ.

ಈ ಸಂಸ್ಥೆಗಳಲ್ಲದೆ ಇನ್ನೂ ಹಲವು ಸಂಸ್ಥೆಗಳು ಜೆಡಿಎಸ್‌ಗೆ ಅಲ್ಪ ಪ್ರಮಾಣದ ದೇಣಿಗೆ ನೀಡಿವೆ. ಈ ಸಾಲಿನಲ್ಲಿ ಶಂಕರ ನಾರಾಯಣ ಕನ್‌ಸ್ಟ್ರಕ್ಷನ್, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ಟೆಕ್ನಾಲಜೀಸ್, ಶಶಿ ಎಕ್ಸ್‌ಪೋರ್ಟ್ಸ್‌, ಅಮರ ರಾಜಾ ಗ್ರೂಪ್ಸ್‌ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ಗಳು ಜೆಡಿಎಸ್‌ಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ಸಲ್ಲಿಸಿರುವ ಮಾಹಿತಿ ಸದ್ಯ ಲಭ್ಯವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!