Wednesday, September 11, 2024

ಮೂಡ್ಲಕಟ್ಟೆ: ಐ.ಎಂ.ಜೆ.ಐ.ಎಸ್. ಸಿ ಪ್ರೀಮಿಯರ್ ಲೀಗ್ 2024

ಕುಂದಾಪುರ: ಐ ಎಂ ಜೆ  ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಸಂಸ್ಥೆ ಮೂಡ್ಲಕಟ್ಟೆ,  ಕಾಲೇಜಿನ ಕ್ರೀಡಾ ವೇದಿಕೆಯಾದ ಐಕ್ಯಂ ಪ್ರಸ್ತುತಿ ಪಡಿಸಿದ ‘ಐ.ಎಂ.ಜೆ.ಐ.ಎಸ್. ಸಿ ಪ್ರೀಮಿಯರ್ ಲೀಗ್ 2024’, ಯಶಸ್ವಿಯಾಗಿ ನೆರವೇರಿತು. ಈ ಪಂದ್ಯಕೂಟದ  ಉದ್ಘಾಟನಾ ಸಮಾರಂಭ ದಿನಾಂಕ  18 ಮಾರ್ಚ್ ರಂದು  ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದು, ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾIIರಾಮಕೃಷ್ಣ ಹೆಗಡೆ ಅವರು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಂದ್ಯಕೂಟವನ್ನು ಹಾಗೂ ವಿದ್ಯಾರ್ಥಿನಿಯರಿಗೆ ತ್ರೋಬಾಲ್ ಪಂದ್ಯಕೂಟವನ್ನು ಆಯೋಜಿಸಲಾಗಿದ್ದು, ಲೀಗ್ ಮಾದರಿಯಲ್ಲಿ ನಡೆದ ಪಂದ್ಯಕೂಟದಲ್ಲಿ ತಲಾ 13 ಪಂದ್ಯಾಟ ನಡೆಯಿತು.

ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಕೂಟದಲ್ಲಿ ತಲಾ 5 ತಂಡಗಳು ಭಾಗವಹಿಸಿದ್ದವು. ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅದ್ವೈತ, ಚಾಣಕ್ಯ, ವಸಿಷ್ಟ, ಅಗಸ್ತ್ಯ ಹಾಗೂ ವಾಲ್ಮೀಕಿ ತಂಡವು ಭಾಗವಹಿಸಿರುತ್ತದೆ.  ಪುರುಷರ ಕ್ರಿಕೆಟ್ ಪಂದ್ಯಕೂಟದಲ್ಲಿ ಅಗಸ್ತ್ಯ  ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು ಹಾಗೂ ಅದ್ವೈತ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಗಸ್ತ್ಯ ತಂಡದ ಅನ್ವಿತ್ ಸರಣಿ  ಶ್ರೇಷ್ಠ ಪ್ರಶಸ್ತಿಯನ್ನು,  ಅದ್ವೈತ ತಂಡದ ದೀಕ್ಷಿತ್ ಉತ್ತಮ ದಾಂಡಿಗ  ಪ್ರಶಸ್ತಿಯನ್ನು, ಚಾಣಕ್ಯ ತಂಡದ ಸನಿತ್  ಉತ್ತಮ ಎಸೆತಗಾರ  ಪ್ರಶಸ್ತಿಯನ್ನು ಹಾಗೂ  ವಸಿಷ್ಠ ತಂಡದ ಅಶ್ವಿತ್ ಒನ್ ಮ್ಯಾನ್ ಶೋ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿನಿಯರ ವಿಭಾಗದ ತ್ರೋಬಾಲ್ ಪಂದ್ಯಕೂಟದಲ್ಲಿ ಚಾಣಕ್ಯ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು , ಅಗಸ್ತ್ಯ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. ಅಗಸ್ತ್ಯ ತಂಡದ ನಿರೋಷ ಖಾರ್ವಿ ಪಂದ್ಯ ಶ್ರೇಷ್ಠ  ಪ್ರಶಸ್ತಿಯನ್ನು ಹಾಗೂ ಚಾಣಕ್ಯ ತಂಡದ ರಕ್ಷಿತಾ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸುತ್ತಾ ಪ್ರಾಂಶುಪಾಲರಾದ ಡಾ. ಪ್ರತಿಭಾ ಪಟೇಲ್, ಉಪ ಪ್ರಾಂಶುಪಾಲರಾದ  ಜಯಶೀಲ ಕುಮಾರ್ ಹಾಗು ದೈಹಿಕ ನಿರ್ದೇಶಕರಾದ  ಪ್ರವೀಣ್ ಖಾರ್ವಿ ವಿದ್ಯಾರ್ಥಿಗಳ ಅಚ್ಚುಕಟ್ಟಾದ ಆಯೋಜನ ಕೌಶಲ್ಯವನ್ನು ಶ್ಲಾಘಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!