Wednesday, September 11, 2024

ನೀತಿ ಸಂಹಿತೆ: ಜನರ ಆಧ್ಯತೆಗಳಿಗೆ ಅಡ್ಡಿಯಾಗದಿರಲಿ

ಈಗಾಗಲೇ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದೆ. ಚುನಾವಣಾ ನೀತಿ ಸಂಹಿತೆ ಕೂಡಾ ಚಾಲ್ತಿಯಲ್ಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ದೀರ್ಘ ಅವಧಿಯ ಚುನಾವಣಾ ನೀತಿ ಸಂಹಿತೆ ದೇಶ ಕಾಣುತ್ತಿದೆ. ಎಪ್ರಿಲ್, ಮೇ ತಿಂಗಳು ವರ್ಷದ ಬೇಡಿಕೆಯ ದಿನಗಳು. ಈ ಸಮಯದಲ್ಲಿಯೇ ಮತದಾನಗಳು ಬರುತ್ತವೆ. ಚುನಾವಣಾ ನೀತಿ ಸಂಹಿತೆ ಕಾರ್ಯಕ್ರಮಗಳ ಸಂಭ್ರಮಕ್ಕೆ ತೊಡಕ್ಕಾಗುವುದು, ಕೆಲವೊಂದು ಆರ್ಥಿಕ ವಹಿವಾಟುಗಳಿಗೆ ಅಡ್ಡಿಯಾಗುವ ಅಸಮಾಧಾನವೂ ಇದೆ. ಅದೇನೆ ಇರಲಿ, ಈ ಬಾರಿ ಸುದೀರ್ಘ ಅವಧಿಯ ನೀತಿ ಸಂಹಿತೆ ಇದೆ. ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಇರುತ್ತಾರೆ. ಮೊದಲೇ ಇಲಾಖೆಗಳಲ್ಲಿ ಖಾಲಿ ಹುದ್ದೆಗಳೇ ಹೆಚ್ಚಿವೆ. ಈ ನಡುವೆ ಇರುವ ಅಧಿಕಾರಿಗಳು ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಸರಕಾರಿ ಕಛೇರಿಗಳಲ್ಲಿ ಚುನಾವಣಾ ನೀತಿ ಸಂಹಿತೆ ಆರಂಭವಾದರೆ ಜನಸಾಮಾನ್ಯರ ಅವಶ್ಯ ಕೆಲಸಗಳು ಆಗುವುದಿಲ್ಲ ಎನ್ನುವ ಆರೋಪವಿದೆ. ಈ ವರ್ಷ ಎಲ್ಲೆಡೆ ಬರ ವಿದೆ. ಮುಂಗಾರು ಬಳಿಕ ಮಳೆಯೇ ಆಗಿಲ್ಲ. ಈಗಾಗಲೇ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೂಡಾ ಕುಡಿಯುವ ನೀರಿನ ಅಲಭ್ಯತೆಯ ಕೂಗು ಕೇಳುತ್ತಿದೆ. ಪ್ರತೀ ವರ್ಷವೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಸರ್ವೇಸಹಜವಾಗಿದೆ. ಆದರೆ ಸರಕಾರ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಜಾಗೃತಿ ಆರಂಭವಾಗುವುದು ಎಪ್ರಿಲ್ ಪ್ರಾರಂಭದಿಂದ. ಕುಡಿಯುವ ನೀರು ವಿಚಾರದಲ್ಲಿ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳುವ ಕೆಲಸಗಳು ಇಷ್ಟರ ತನಕ ಆಗಿಲ್ಲ. ಕಾಟಾಚಾರಕ್ಕಷ್ಟೇ ಸಿಕ್ಕಸಿಕ್ಕಲಿ ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ. ನಿರ್ವಹಣೆ ಇಲ್ಲದೆ ಅವು ಸೋಲುತ್ತದೆ. ಕುಡಿಯುವ ನೀರು ಎಂದಾಗ ವಾರಾಹಿಯತ್ತ ಬೆರಳು ಮಾಡುತ್ತಾರೆ. ಈ ಎಲ್ಲದ್ದಕ್ಕೂ ನೀರಿನ ಮೂಲ ವಾರಾಹಿ ಆಗಿಬಿಟ್ಟಿದೆ. ಜನ ಈಗಾಗಲೇ ಚಿಂತಕ್ರಾಂತರಾಗಿದ್ದಾರೆ. ಈ ಬಿರು ಬೇಸಿಗೆಯನ್ನು ಹೇಗೆ ಎದುರಿಸುವುದು ಎನ್ನುವ ಆತಂಕ ಎದುರಾಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಸ್ಪಂದನೆ ದೊರಕಬಹುದಾ ಎನ್ನುವ ಪ್ರಶ್ನೆ ಎದ್ದಿದೆ. ಕುಡಿಯುವ ನೀರು ಜನರ ಮೂಲ ಆದ್ಯತೆ ಆಗಿರುವುದರಿಂದ ವಿಶೇಷ ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕಾಗಿದೆ. ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಈ ಸಲ ಇತ್ತೀಚೆಗಿನ ವರ್ಷಗಳಿಗಿಂತ ಹೆಚ್ಚಾಗಿಯೇ ಕಾಡುವ ಸಾಧ್ಯತೆಗಳು ಇವೆ. ಆದ್ದರಿಂದ ಕುಡಿಯುವ ನೀರಿನ ವಿಚಾರವನ್ನು ವಿಶೇಷವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ನೀತಿ ಸಂಹಿತೆಯ ಅಡಿಯಲ್ಲಿ ಜನರ ಆಧ್ಯತೆಗಳು ಧ್ವನಿ ಕಳೆದುಕೊಳ್ಳದಿರಲಿ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!