Sunday, September 8, 2024

ಬಹು ನಿರೀಕ್ಷಿತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ | ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ

ಜನಪ್ರತಿನಿಧಿ (ನವ ದೆಹಲಿ) : 2024ರ 543 ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು( ಶನಿವಾರ, ಮಾರ್ಚ್‌ 16) ಘೋಷಣೆ ಮಾಡಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌,  ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಪ್ರಸ್ತುತ ಲೋಕಸಭೆಯ ಅವಧಿ ಜೂನ್‌ 16ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಕೇಂದ್ರದ ನೂತನ ಸರ್ಕಾರ ರಚನೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಯ ಅವಧಿ ಕೂಡಾ ಮುಕ್ತಾಯಗೊಳ್ಳಲಿದ್ದು, ಇದರ ಚುನಾವಣೆ ಕೂಡಾ ಲೋಕಸಭೆ ಚುನಾವಣೆ ಜತೆಗೆ ನಡೆಯಲಿವೆ ಎಂದು ಅವರು ಹೇಳಿದರು.

ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ : ಏಪ್ರಿಲ್‌ 19ರಂದು ಮೊದಲ ಹಂತದ ಮತದಾನ. ಏಪ್ರಿಲ್‌ 26 ಮತ್ತು ಮೇ 7ರಂದು ಕರ್ನಾಟಕದಲ್ಲಿ  ಮತದಾನ, ಮೇ 7ರಂದು ಮೂರನೇ ಹಂತ, ಮೇ 13 4ನೇ ಹಂತದ ಮತದಾನ, ಮೇ 20 5ನೇ ಹಂತ, ಮೇ 25 6ನೇ ಹಂತ, ಜೂನ್‌ 1 7ನೇ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಘೋಷಣೆಯಾಗಲಿದೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ (ಏಪ್ರಿಲ್‌ 26). ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ, ಅಂಡಮಾನ್‌ ನಿಕೋಬಾರ್‌, ಆಂಧ್ರಪ್ರದೇಶ, ಚಂಡೀಗಢ್‌, ದಾದ್ರ ಹವೇಲಿ, ದೆಹಲಿ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಹರ್ಯಾಣ, ಕೇರಳ, ಲಕ್ಷದ್ವೀಪ, ಲಡಾಖ್‌, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌, ಪಾಂಡಿಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್‌, ತೆಲಂಗಾಣ, ಉತ್ತರಾಖಂಡ್‌ ನಲ್ಲಿ ಮತದಾನ ನಡೆಯಲಿಕ್ಕಿದೆ.

ಕರ್ನಾಟಕ, ರಾಜಸ್ಥಾನ, ತ್ರಿಪುರಾ, ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಚತ್ತೀಸ್‌ ಗಢ್, ಅಸ್ಸಾಂನಲ್ಲಿ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಒಡಿಶಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ನಲ್ಲಿ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮಬಂಗಾಳದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು:

*ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ

* ಒಟ್ಟು 97 ಕೋಟಿ  ದೇಶದಲ್ಲಿ  ಮತದಾರರಿದ್ದಾರೆ.

*1.82 ಕೋಟಿ ಜನರು ಈ ಬಾರಿ ಮೊದಲ ಬಾರಿ ಮತ ಚಲಾಯಿಸಲಿದ್ದಾರೆ.

*1.5 ಕೋಟಿ ಭದ್ರತಾ ಸಿಬಂದಿ, ಅಧಿಕಾರಿಗಳ ನೇಮಕ.

*ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ಬಳಕೆ

*ದೇಶದಲ್ಲಿ ಒಟ್ಟು 49.7 ಕೋಟಿ ಪುರುಷ ಮತದಾರರು ಹಾಗೂ 47.1 ಕೋಟಿ ಮಹಿಳಾ ಮತದಾರರಿದ್ದಾರೆ.

*48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ.

*ಮತಗಟ್ಟೆಗಳಲ್ಲಿ ಹೆಲ್ಫ್‌ ಡೆಸ್ಕ್‌, ವ್ಹೀಲ್‌ ಚೇರ್‌ ವ್ಯವಸ್ಥೆ.

* 2.18 ಲಕ್ಷ ಶತಾಯುಷಿ ಮತದಾರರು ಈ ಬಾರಿ ಮತ ಚಲಾವಣೆ ಮಾಡಲಿದ್ದಾರೆ.

*ಬಾರ್ಡರ್‌ ಗಳಲ್ಲಿ ಡ್ರೋನ್‌ ಮೂಲಕ ಕಣ್ಗಾವಲಿಗೆ ವ್ಯವಸ್ಥೆ.

*ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್‌ ರೂಂ ವ್ಯವಸ್ಥೆ.

*ಅಕ್ರಮವಾಗಿ ಹಣ ಸಾಗಿಸಿದರೆ ಕಠಿನ ಕ್ರಮ.

*ಕುಕ್ಕರ್‌, ಮದ್ಯ, ಹಣ ಹಂಚುವಂತಿಲ್ಲ.

*ಚುನಾವಣಾ ಪ್ರಚಾರದ ವೇಳೆ ಹಲವಾರು ಷರತ್ತು ವಿಧಿಸಲಾಗುವುದು.

*ವೈಯಕ್ತಿಕವಾಗಿ ಟೀಕೆಗೆ ಅವಕಾಶವಿಲ್ಲ.

*ಮಕ್ಕಳನ್ನು, ಶಾಲಾ ವಿದ್ಯಾರ್ಥಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ.

* ಮತದಾರರನ್ನು ಅಭ್ಯರ್ಥಿಗಳು ಪ್ರಚೋದಿಸುವುದಕ್ಕೆ ಅವಕಾಶವಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!