Sunday, September 8, 2024

ಬಾನುಲಿ ಕೇಂದ್ರ ಸಮುದಾಯಕ್ಕೆ ಅಗತ್ಯ-ಡಾ.ಎಚ್.ಎಸ್.ಬಲ್ಲಾಳ್

ರೇಡಿಯೋ ಕುಂದಾಪ್ರ’ ನಿರಂತರ ಪ್ರಸಾರ ಉದ್ಘಾಟನೆ

ಕುಂದಾಪುರ: ಕುಂದಾಪುರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಕ್ಕೆ ಹವಾಮಾನ, ಕೃಷಿ ಮಾಹಿತಿ, ಮೀನುಗಾರರಿಗೆ ಮಾಹಿತಿ ಒದಗಿಸುವುದರ ಜೊತೆಯಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಕೆಗಳ ವೇದಿಕೆಯಾಗಿಯೂ ಸಮುದಾಯಕ್ಕೆ ಅತ್ಯಗತ್ಯ. ವಿದ್ಯಾರ್ಥಿಗಳು ಇದರಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದ ಬೇರೆ ಬೇರೆ ಸ್ತರದ ಜನರು ಕೂಡಾ ಇದರ ಪ್ರಯೋಜನ ಪಡೆದುಕೊಳ್ಳಲಿ ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲದ ಅಧ್ಯಕ್ಷ ಡಾ. ಎಚ್.ಎಸ್.ಬಲ್ಲಾಳ್ ಹೇಳಿದರು.

ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವತಿಯಿಂದ ಪ್ರಾರಂಭಗೊಂಡ ಸಮುದಾಯ ಬಾನುಲಿ ರೇಡಿಯೋ ಕುಂದಾಪ್ರ 89.6 ಎಫ್.ಎಮ್. ನಿರಂತರ ಪ್ರಸಾರವನ್ನು ಉದ್ಘಾಟಿಸಿ ಮಾತನಾಡಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಕಾರ್ಯದರ್ಶಿ ವರದರಾಯ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಮುದಾಯಕ್ಕೆ ಮಾರ್ಗದರ್ಶನ, ಕಲೆ, ಸಾಹಿತ್ಯ, ಕೃಷಿ ವಿಚಾರಗಳ ವೇದಿಕೆಯಾಗಿ ರೇಡಿಯೋ ಕುಂದಾಪುರ ಮೂಡಿಬರಲಿ. ಇದು ಪತ್ರಿಕೋದ್ಯಮ ವಿಭಾಕ್ಕೆ ಮಾತ್ರವಲ್ಲ, ಸಮುದಾಯದ ಕಾರ್ಯಕ್ರಮವಾಗಲಿ. ಇದರನ್ನು ಜನಪ್ರಿಯಗೊಳಿಸುವುದು ಕುಂದಾಪುರದ ಜನತೆಯ ಜವಬ್ದಾರಿಯಾಗಿದೆ ಎಂದರು.

ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರೇಡಿಯೋ ಕುಂದಾಪುರ ಸಮುದಾಯ ಬಾನುಲಿ ಕೇಂದ್ರವಾಗಿದ್ದು ಕೃಷಿ, ಮೀನುಗಾರಿಕೆ, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಶೇಷ ಕಾರ್ಯಕ್ರಮಗಳ ಪ್ರಸಾರ ಇದರ ಧ್ಯೇಯೋದ್ದೇಶವಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ ವಿಷಯಗಳ ಕುರಿತು ಸ್ಥಳೀಯರ ಅನುಭವಗಳನ್ನು ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಲು ಚರ್ಚಿಸಲು ಸಮುದಾಯದ ಸದಸ್ಯರಿಗೆ ಇದೊಂದು ವೇದಿಕೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳರ್, ಕೆ.ದೇವದಾಸ್ ಕಾಮತ್, ಸದಾನಂದ ಛಾತ್ರ, ಜಯಕರ ಶೆಟ್ಟಿ, ಪ್ರಜ್ಞೇಶ್ ಪ್ರಭು, ಪ್ರಕಾಶ್ ಟಿ ಸೋನ್ಸ್, ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯದ ಪ್ರೊ.ಸತ್ಯನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಯು.ಎಸ್.ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ರೇಡಿಯೋ ಕುಂದಾಪ್ರ ನಿರ್ವಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!