spot_img
Saturday, December 7, 2024
spot_img

ಉ-ಚಿ ಲೋಕಸಭಾ ಚುನಾವಣೆ : ಯಾರಿಗೆ ಟಿಕೇಟ್‌ ಕೊಟ್ಟರೂ ಗೆಲ್ಲಬಹುದಾದಂತಹ ಸಂಘಟನಾತ್ಮಕ ಬಲವಿರುವ ಜಿಲ್ಲೆ : ಶೋಭಾ ಕರಂದ್ಲಾಜೆ

ಜನಪ್ರತಿನಿಧಿ (ಬೆಂಗಳೂರು) : ಲೋಕಸಭಾ ಚುನಾವಣೆಯ ಉಡುಪಿ ಚಿಕ್ಕಮಗಳೂರು ಬಿಜೆಪಿ ಟಿಕೇಟ್‌ ಬಗ್ಗೆ ಸಹಜವಾಗಿಯೇ ಗೊಂದಲವಿದೆ. ಯಾರಿಗೆ ಟಿಕೇಟ್‌ ಕೊಟ್ಟರೂ ಗೆಲ್ಲಬಹುದಾದಂತಹ ಸಂಘಟನಾತ್ಮಕ ಬಲವಿರುವ ಜಿಲ್ಲೆ ನಮ್ಮದು. ಉಡುಪಿ ಚಿಕ್ಕಮಗಳೂರು ಸಂಘ ಪರಿವಾರ ಕಟ್ಟಿರುವ ಜಿಲ್ಲೆ ಎಂದು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೋಭಾ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆ ನಿರಂತರವಾಗಿ ಹೋರಾಟ ಮಾಡುತ್ತಿರುವ ಜಿಲ್ಲೆ.  ಭಾರತೀಯ ಜನತಾ ಪಾರ್ಟಿ ಗೆದ್ದರುವ ಜಿಲ್ಲೆ.  ಇಲ್ಲಿ ಯಾರಿಗೆ ಟಿಕೇಟ್‌ ಕೊಟ್ಟರೂ ಗೆಲ್ಲಬಹುದು. ನನಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್‌ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದೇನೆ. ಪ್ರಧಾನಿ ಮೋದಿ ಅವರು ಎಲ್ಲಿ ಏನನ್ನು ಅಪೇಕ್ಷೆ ಮಾಡುತ್ತಾರೋ ಅದರಂತೆ ನಡೆದುಕೊಳ್ಳುವುದಕ್ಕೆ ನಾವು ಸಿದ್ದರಿದ್ದೇವೆ ಎಂದು ಅವರು ಹೇಳಿದ್ದಾರೆ.

ನಾನು ಈಗಾಗಲೇ ಸ್ಪಷ್ಟ ಮಾಡಿದ್ದೇನೆ.  ನನ್ನ ಕ್ಷೇತ್ರದಲ್ಲಿ ಹಿಂದೆಂದೂ ಬಾರದ ಅನುದಾನ ಬಂದಿದೆ. ಅಭಿವೃದ್ಧಿ ಕೆಲಸಗಳು ಆಗಿವೆ. ಮೊದಲ ಬಾರಿಗೆ ಎರಡೂ ಜಿಲ್ಲೆಗಳಲ್ಲಿ ಕೇಂದ್ರ ವಿದ್ಯಾಲಯ ಬಂದಿದೆ.  ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್‌ ಕಾಲೇಜು ಬಂದಿದೆ, ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ಉಭಯ ಜಿಲ್ಲೆಗಳಲ್ಲಿ ಆಗಿವೆ ಎಂದು ಅವರು ಪುನರುಚ್ಛರಿಸಿದ್ದಾರೆ.

ಟಿಕೇಟ್‌ಗಾಗಿ ಪೈಪೋಟಿ ಇರುವುದು ನಿಜ. ಅದು ಇರಬೇಕು. ಕಾರ್ಯಕರ್ತರಿಗೆ ಟಿಕೇಟ್‌ ಕೇಳುವಂತಹ ಹಕ್ಕಿದೆ. ಆದರೇ, ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೇಟ್‌ ಕೇಳುವುದು ತಪ್ಪು. ಈ ರೀತಿಯ ಬೆಳವಣಿಗೆಯೂ ನಮ್ಮ ಕ್ಷೇತ್ರದಲ್ಲಿ ನಡೆದಿದೆ. ಅದಕ್ಕೆ ಉತ್ತರವನ್ನು ಕೇಂದ್ರದ ಹೈಕಮಾಂಡ್‌ ನೀಡುತ್ತದೆ. ನನ್ನ ನಾಯಕತ್ವದ ಮೇಲೆ ನನಗೆ ವಿಶ್ವಾಸವಿದೆ. ಪಕ್ಷ ಹಾಗೂ ಸರ್ಕಾರ ಕೊಟ್ಟ ಕೆಲಸವನ್ನು ರಾಜ್ಯದಲ್ಲಿಯೂ, ಕೇಂದ್ರದಲ್ಲಿಯೂ ಭ್ರಷ್ಟಾಚಾರ ರಹಿತವಾಗಿ ಮಾಡುವಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಿಂದ ಟಿಕೇಟ್‌ ನೀಡುವುದಕ್ಕೆ ವಿರೋಧಿಸಿ ಸ್ವತಃ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತ ಪಡಿಸಿದ್ದರು. ಗೋ ಬ್ಲಾಕ್‌ ಶೋಭಾ ಅಭಿಯಾನ ಉಭಯ ಜಿಲ್ಲೆಗಳಲ್ಲೂ ನಡೆದಿತ್ತು. ನಿನ್ನೆ(ಮಂಗಳವಾರ) ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೋಕ್‌ ಕೊಟ್ಟು, ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಊಹಾಪೋಹಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿತ್ತು, ಈ ಬೆನ್ನಿಗೆ ಶೋಭಾ ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!