spot_img
Thursday, December 5, 2024
spot_img

ಮಾ.13ರಿಂದ ಮಾ.17ರ ತನಕ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ, 2016 ಕಾಯಿ ಗಣಹೋಮ


ಕುಂದಾಪುರ, ಮಾ.9: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದಿ.ವೇ.ಮೂ.ಹಟ್ಟಿಅಂಗಡಿ ರಾಮಚಂದ್ರ ಭಟ್ಟರ ದಿವ್ಯ ಸಂಕಲ್ಪದ ಸ್ವರೂಪದಂತೆ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ, 2016 ಕಾಯಿ ಗಣಹೋಮ ಮಾ. 13ರಿಂದ ಮಾ.17ರ ತನಕ ನಡೆಯಲಿದೆ. ಪ್ರತಿದಿನವೂ ಧಾರ್ಮಿಕ ಕಾರ್ಯಕ್ರಮ, ಪ್ರತಿ ದಿನ ಮಹಾ ಅನ್ನಸಂತರ್ಪಣೆ, ಸಂಜೆ 6 ಘಂಟೆಯಿಂದ ಧಾರ್ಮಿಕ ಸಭೆ, ರಾತ್ರಿ 8 ಘಂಟೆಯಿಂದ ವೇ,ಮೂ. ರಾಮಚಂದ್ರ ಭಟ್ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ಟ್ ಹೇಳಿದರು.

ಅವರು ಮಾ.9ರಂದು ಹಟ್ಟಿಯಂಗಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಮಾ.13ರಂದು ಬೆಳಿಗ್ಗೆ ಲಕ್ಷ ಮೋದಕ ಹವನ ಪ್ರಾರಂಭ, ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ನೂತನ ದೇವಾಲಯ ಲೋಕಾರ್ಪಣೆ, ಶಿಖರ ಕಲಶ ಸ್ಥಾಪನೆ, ಅಭಿಷೇಕ, ಭಕ್ತರಿಗೆ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಟಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶುಭಾಸಂಸನೆಗಯ್ಯುವರು. ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕ ಜಿ. ಶಂಕರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಧಾರ್ಮಿಕ ಮಾರ್ಗದರ್ಶಕ ಧ್ವಾರಕಾನಾಥ್, ಮಾನವ ಹಕ್ಕು ಆಯೋಗದ ಸದಸ್ಯ ಟಿ. ಶ್ಯಾಮ್ ಭಟ್ಟ, ಉಧ್ಯಮಿ ಆನಂದ ಕುಂದರ್, ಉಧ್ಯಮಿ ಜಗದೀಶ ಎಂ., ಬೆಂಗಳೂರು, ಶ್ರೀ ಮಹಿಷಾಸುರಮರ್ದಿನಿ ದೇವಾಲಯ ಬಗ್ವಾಡಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹಟ್ಟಿಯಂಗಡಿ, ಗ್ರಾ.ಪಂ.ಅಧ್ಯಕ್ಷೆ ವಿದ್ಯಾಶ್ರೀ ಮೊಗವೀರ ಉಪಸ್ಥಿತರಿರುವರು.
ಬಳಿಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕನ್ನಡ ನಾಟಕ ‘ಶಿವದೂತ ಗುಳಿಗ’ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಮಾ.14ರಂದು ಬೆಳಿಗ್ಗೆ ಲಕ್ಷ ಮೋದಕ ಹವನ, 10 ಗಂಟೆಗೆ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವಾರ್ಣಲ್ಲಿ ಮಹಾಸಂಸ್ಥಾನಮ್ ಇವರ ಆಗಮನ, ದೇವರಿಗೆ ಪೂಜೆ, ಶ್ರೀಗಳಿಂದ ಆಶೀರ್ವಚನ ಹಾಗೂ ಮಂತ್ರಾಕ್ಷತೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣಮಠ ಅವರಿಂದ ಆಶೀರ್ವಚನ. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಪಂಚಾಂಗಕರ್ತ ತಟ್ಟುವಟ್ಟು ವಾಸುದೇವ ಜೋಯಿಸರು ಹಲಾಡಿ ಶುಭಾಸಂಸನೆಗೈಯುವರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎ. ಕಿರಣ್‍ಕುಮಾರ್ ಕೊಡ್ಗಿ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಗೋಪಾಲ ಪೂಜಾರಿ, ಆನೆಗುಡ್ಡೆ ವಿನಾಯಕ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮದ ಅಧ್ಯಕ್ಷ ಡಾ. ಕೆ.ಎಸ್.ಕಾರಂತ, ಉಧ್ಯಮಿಗಳಾದ ಶಿವರಾಮ ಹೆಗ್ಡೆ ಬೆಂಗಳೂರು, ಜಿ.ಕೆ.ಶೆಣೈ ಬೆಂಗಳೂರು, ಹೆಚ್.ಬಿ.ಶಿವಕುಮಾರ್ ಬೆಂಗಳೂರು, ಗುರುಪ್ರಸಾದ್ ಬೆಂಗಳೂರು, ಕರುಣಾಕರ ಶೆಟ್ಟಿ ಅರಸೀಕೆರೆ, ಅತಿಶಯ ಜೈನ ಕ್ಷೇತ್ರದ ಮೊಕ್ತೇಸರ ಸುರೇಂದ್ರ ಜೈನ್, ಶ್ರೀ ಲೋಕನಾಥೇಶ್ವರ ದೇವಸ್ಥಾನದ ಮೊಕ್ತೇಸರ ಸನತ್ ಕುಮಾರ್ ರೈ, ಉಧ್ಯಮಿ ಗೋವಿಂದ ಬಾಬು ಪೂಜಾರಿ, ಬೈಂದೂರು, ಉಧ್ಯಮಿ ಸುಧೀಂದ್ರ ಕಟ್ಟೆ ಗಂಗೊಳ್ಳಿ, ಉಪಸ್ಥಿತರಿರುವರು.

ಬಳಿಕ ರೂಪಕಲಾ ಕುಂದಾಪುರ ಇವರಿಂದ ಹಾಸ್ಯಮಯ ನಾಟಕ ‘ಇನ್ಸ್‍ಪೆಕ್ಟರ್ ಅಣ್ಣಪ್ಪ’ ಪ್ರದರ್ಶನಗೊಳ್ಳಲಿದೆ ಎಂದರು.

ಮಾ.15ರಂದು ಬೆಳಿಗ್ಗೆ ಲಕ್ಷ ಮೋದಕ ಹವನ ಪೂರ್ಣಾಹುತಿ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ನಂಜುಂಡ ದೀಕ್ಷಿತ್, ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಗುರುರಾಜ ಶರ್ಮ ಉಪಸ್ಥಿತರಿರುವರು. ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು, ಶ್ರೀ ಗೋಕರ್ಣ ಪರ್ತಗಾಳಿ ಮಠ ಇವರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದಿವ್ಯ ಉಪಸ್ಥಿತಿ ಇರಲಿದೆ ಎಂದೂ ತಿಳಿಸಲಾಗಿದೆ. ಸಂಜೆ 6 ಗಂಟೆಗೆ ಶ್ರೀಚಕ್ರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ. ಧಾರ್ಮಿಕ ಸಭೆಯಲ್ಲಿ ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಕಟೀಲು ದೇವಸ್ಥಾನದ ಅನುವಂಶೀಯ ಅರ್ಚಕ ಹರಿನಾರಾಯಣ ಅಸ್ರಣ್ಣ ಶುಭಾಸಂಸನೆಗೈಯುವರು. ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ರಾವ್, ಶಾಸಕ ಯಶ್‍ಪಾಲ್ ಸುವರ್ಣ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕ ಸುಕುಮಾರ ಶೆಟ್ಟಿ, ಶ್ರೀ ಕ್ಷೇತ್ರ ಕಮಲಶಿಲೆಯ ಅನುವಂಶೀಯ ಅರ್ಚಕ ಸಚ್ಚಿದಾನಂದ ಚಾತ್ರ, ಹರಿಕೃಷ್ಣ ಪುನರೂರು ಮೂಲ್ಕಿ, ಯೋಗೀಶ ಕಾಮತ್ ಚಾರ್ಟಡ್ ಅಕೌಂಟೆಂಟ್ ಕುಮಟಾ, ಉಧ್ಯಮಿಗಳಾದ ದಿನೇಶಕುಮಾರ್ ಹೆಗ್ಡೆ, ಕೆ.ಎಂ.ಶೆಟ್ಟಿ ಉಪಸ್ಥಿರಿರುವರು. ಬಳಿಕ ಕುದ್ರೋಳಿ ಗಣೇಶ್ ಅವರಿಂದ ಜಾದೂ ಜಾತ್ರೆ ‘ಮಯಾಲೋಕ’ ನಡೆಯಲಿದೆ ಎಂದರು.

ಮಾ.16ರಂದು ಬೆಳಿಗ್ಗೆ ಶತಚಂಡಿಕಾಯಾಗ ಪೂರ್ಣಾಹುತಿ, ಶ್ರೀ ಬಾಳೇಕುದುರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಹೊರನಾಡು ಧರ್ಮಕರ್ತರು ಭೀಮೇಶ್ವರ ಜೋಷಿ ಉಪಸ್ಥಿತರಿರುವರು. ಸಂಜೆ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಧರ್ಮಕರ್ತರು ಹೊರನಾಡು ಭೀಮೇಶ್ವರ ಜೋಷಿ ಶುಭಾಸಂಸನೆಗೈಯುವರು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ, ಶಾಸಕ ಸುನಿಲ್ ಕುಮಾರ್, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಕರ್ನಾಟಕ ಬ್ಯಾಂಕ್ ನಿವೃತ್ತ ಎಂ.ಡಿ. ಎಂ.ಎಸ್.ಮಹಾಬಲೇಶ್ವರ ಭಟ್ಟ, ಉಧ್ಯಮಿಗಳಾದ ಆರೂರು ಪ್ರಭಾಕರ ರಾವ್, ಶರತ್ ಸಾಲಿಯಾನ್, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಉಧ್ಯಮಿ ಚಂದ್ರûಶೇಖರ ಶೆಟ್ಟಿ ಬೆಂಗಳೂರು, ಉಪಸ್ಥಿತರಿರುವರು. ಬಳಿಕ ರಾಜ್ಯಮಟ್ಟದ ನಿರೂಪಕ ಸಂದೇಶ್ ಶೆಟ್ಟಿ ಸಳ್ವಾಡಿ ನೇತೃತ್ವದಲ್ಲಿ ಟಿವಿ ವಾಹಿನಿಗಳ ಪ್ರಸಿದ್ಧಿಯ ಕಲಾವತಿ ದಯಾನಂದ, ರವೀಂದ್ರ ಪ್ರಭು, ರಜತ್ ಮೈಯ್ಯ ಮತ್ತು ಅನೇಕ ಕಲಾವಿದರಿಂದ ‘ಸ್ವರಾಂಜಲಿ’ ನಡೆಯಲಿದೆ ಎಂದರು.

ಮಾ.17ರಂದು ಬೆಳಿಗ್ಗೆ 2016 ಕಾಯಿ ಗಣಹವನ ಪ್ರಾರಂಭ, ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ ಇವರ ಆಗಮನ ಪೂರ್ಣ ಕುಂಭ ಸ್ವಾಗತ, ಶ್ರೀ ದೇವರ ಕಲಾ ಚೈತನ್ಯ ಪರಿಪೂರ್ಣತೆಗೋಸ್ಕರ ಪೂಜೆ, ರಜತ ಕಲಶಾಭಿಷೇಕ, ಪ್ರಧಾನ ಬ್ರಹ್ಮಕಲಶಾಭಿಷೇಕ ಮತ್ತು ಕನಕಾಭಿಷೇಕ ಗಣಹವನದ ಪೂರ್ಣಾಹುತಿಯಲ್ಲಿ ದಿವ್ಯ ಉಪಸ್ಥಿತಿ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಗಳು, ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಗಾಣಗಾಪುರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿ ಪ್ರತಿಷ್ಟಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ, ಪಾಂಡೇಶ್ವರದ ತೀರ್ಥಬೈಲಿನ ವಿಜಯ ಮಂಜ ಶುಭಾಸಂಸನೆಗೈಯುವರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಲಕ್ಷ್ಮೀ ಹೆಬ್ಬಾಳ್ಳರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಉಧ್ಯಮಿ ಸದಾನಂದ ಮಯ್ಯ ಬೆಂಗಳೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ರಾಜೇಂದ್ರ ಕಟ್ಟೆ, ಉಧ್ಯಮಿ ದಿವಾಕರ ಶೆಟ್ಟಿ ಉಡುಪಿ, ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ, ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪಾರ್ವತಿ ಉಪಸ್ಥಿತರಿರುವರು.
ರಾತ್ರಿ 8 ಗಂಟೆಗೆ ಹಟ್ಟಿಯಂಗಡಿ ಮೇಳ ಮತ್ತು ಮೆಕ್ಕೆಕಟ್ಟು ಮೇಳದವರಿಂದ ಕೂಡಾಟ ನಡೆಯಲಿದೆ ಎಂದರು.

ಉದ್ಭವ ದ್ವಿಭುಜ ಸಿದ್ಧಿವಿನಾಯಕವಾಗಿರುವುದರಿಂದ ಮೂಲ ವಿಗ್ರಹವನ್ನು ಕದಲಿಸಲು ಅವಕಾಶವಿಲ್ಲ. ಪ್ರತಿಷ್ಠಾಂಗ ವಿಧಿಗಳು ನಡೆಯುವುದಿಲ್ಲ ಎಂದು ಹೇಳಿದ ಅವರು ಪವಾಡ ಸ್ವರೂಪದಂತೆ 5-6ತಿಂಗಳಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಆಗಿದೆ. ಬೆಳ್ಳಿರಥದ ನಿರ್ಮಾಣವೂ ಆಗಿದೆ ಎಂದು ಹೇಳಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣ ಕುಮಾರ ಮಾತನಾಡಿ, ಮಾ.13ರಂದು ಮಧ್ಯಾಹ್ನ 3.30ಕ್ಕೆ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಶ್ರೀಮಜ್ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾಂಗಳವರು ಆಗಮಿಸಲಿದ್ದಾರೆ. ಶಾಲೆಯಲ್ಲಿ ನಿರ್ಮಿಸಲಾಗಿರುವ ನೂತನ ಶೃಂಗವನದ ಲೋಕಾರ್ಪಣೆ ಮತ್ತು “ಭವ ಶರಣಮ್” ಪ್ರಾರ್ಥನಾ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರಾಮದೇವಿ ರಾಮಚಂದ್ರ ಭಟ್ಟ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣ ಕುಮಾರ, ರಾಧಾಕೃಷ್ಣ ಭಟ್, ಉದಯ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!