spot_img
Saturday, December 7, 2024
spot_img

ಸಿದ್ಧಾಪುರದಲ್ಲಿ ವಿಶ್ವ ಮಹಿಳಾ ದಿನಾಚರಣೆ: ಸನ್ಮಾನ

ಸಿದ್ಧಾಪುರ: ಪ್ರಗತಿಪರ ಕೃಷಿಕರಾದ ರಾಜೇಂದ್ರ ಬೆಚ್ಚಳ್ಳಿಯವರ ನೇತೃತ್ವದಲ್ಲಿ ಸಿದ್ದಾಪುರದ ರಂಗನಾಥ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಉಪನ್ಯಾಸಕಿ ಡಾ ಗುಲಾಬಿ ಪೂಜಾರಿ, ಸೂಲಗಿತ್ತಿ ಚಂದು ಮಡಿವಾಳ್ತಿ, ಸಾಹಿತಿ ಪೂರ್ಣಿಮಾ ಭಟ್ ಕಮಲಶಿಲೆ, ಶಂಕರನಾರಾಯಣ ಆರಕ್ಷಕ ಠಾಣೆಯ WPC ವಿಮಲ, ಆಶಾ ಕಾರ್ಯಕರ್ತೆ ಅಮೃತ ಶೆಟ್ಟಿ, ಸಿದ್ದಾಪುರ SLRM ಸ್ವಚ್ಛತಾ ವಾಹನ ಚಾಲಕಿ ಶಿಲ್ಪಾ ಉದಯ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಕೀಲರಾದ ಸುಶ್ಮೀತಾ ಕಿರಣ್, ಶ್ರೀಕಾಂತ್ ರಾವ್ ಸಿದ್ದಾಪುರ, ಶ್ರೀಕಾಂತ್ ನಾಯಕ್ ಸಿದ್ದಾಪುರ ಕಾರ್ಯಕ್ರಮ ರೂವಾರಿ ರಾಜೇಂದ್ರ ಬೆಚ್ಚಳ್ಳಿ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ವಾರಿಜ, ಪೂರ್ಣಿಮಾ, ಸಂಜನಾ ಇವರೆಲ್ಲರೂ ಕೂಡ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಗಾಗಿ ಆಟೋಟ ಸ್ಪರ್ಧೆ ಬಹುಮಾನ ವಿತರಣೆ ನಡೆಯಿತು. ವಕೀಲರಾದ ಸುಶ್ಮೀತಾ ಇವರು ಮಹಿಳೆಯರ ರಕ್ಷಣೆ ಮತ್ತು ಗೌರವದ ಬಗ್ಗೆ ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!