Thursday, October 31, 2024

ಸಂಗೀತ ನಿರ್ದೇಶಕ, ಆರ್ಕಿಟೆಕ್ಟ್ ಎಂಜಿನಿಯರ್ ವಿಜೇತ್ ಟಿ.ಕೆ ನಿಧನ

ತೆಕ್ಕಟ್ಟೆ : ಮೂಡಬಿದಿರೆಯ ಜೈನ್ ಜೂನಿಯರ್ ಕಾಲೇಜಿನ ನಿವೃತ್ತ ಚಿತ್ರಕಲಾ ಶಿಕ್ಷಕ ದಿ| ಟಿ.ಕೆ.ಆಚಾರ್ಯ ತೆಕ್ಕಟ್ಟೆ ಅವರ ಪುತ್ರ ಆರ್ಕಿಟೆಕ್ಟ್ ಎಂಜಿನಿಯರ್ ವಿಜೇತ್ ಟಿ.ಕೆ. (37) ಅವರು ಹೃದಯಾಘಾತದಿಂದ ಮಾ.4 ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಭಾರತೀಯ ವಾಸ್ತು ಪರಂಪರೆ ಹಾಗೂ ಪಾಶ್ಚಾತ್ಯ ವಾಸ್ತುಕಲೆಯ ಬಗ್ಗೆ ಅಪಾರ ಅನುಭವನ್ನು ಹೊಂದಿದ ಅವರು ಕಳೆದ ಹಲವು ವರ್ಷಗಳಿಂದಲೂ ಬೆಂಗಳೂರಿನಲ್ಲಿ ತನ್ನದೆಯಾದ ಖಾಸಗಿ ಸಂಸ್ಥೆಯನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದರು. ಆಧುನಿಕ ತಂತ್ರಜ್ಞಾನಗಳನ್ನು ಸದ್ವಿನಿಯೋಗಿಸಿಕೊಂಡು ವಾಸ್ತುರಚನೆಗೆ ಪೂರಕವಾಗಿ ಅತ್ಯಂತ ಸೃಜನಶೀಲತೆಯಿಂದ ರಚನಾತ್ಮಕವಾಗಿ ನಕಾಶೆಗಳನ್ನು ಸಂಯೋಜಿಸುತ್ತಿದ್ದ ವಿಜೇತ್ ಟಿ.ಕೆ. ತನ್ನ ವೃತ್ತಿ ಬದುಕಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಉತ್ತಮ ಕುಂಚ ಕಲಾವಿದರಾದ ಅವರು ಭ್ರಮೆ ಎನ್ನುವ ಕಿರುಚಿತ್ರ ಸೇರಿದಂತೆ ಹಲವು ಆಲ್ಬಮ್ ಸಾಂಗ್‌ಗಳಿಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೃತರು ತಾಯಿ ವೇದಾವತಿ ಟಿ.ಕೆ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!