Sunday, September 8, 2024

ರಾಜಧಾನಿ ಬೆಂಗಳೂರು ನೀರಿನ ಸಮಸ್ಯೆ ಉಲ್ಬಣ : ಇನ್ನಾದರೂ ಮೇಕೆದಾಟು ಯೋಜನೆಗೆ ಕೇಂದ್ರ ಅನುಮೋದನೆ ನೀಡಲಿ : ಡಿಕೆಶಿ ಒತ್ತಾಯ

ಜನಪ್ರತಿನಿಧಿ (ಬೆಂಗಳೂರು) : ಬೆಂಗಳೂರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದರ ಬಗ್ಗೆ ಸರ್ಕಾರ ಶೀಘ್ರ ಪರಿಹಾರ ನೀಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನ ಎಲ್ಲಾ ಪ್ರದೇಶಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದು, ತಮ್ಮ ಮನೆಯಲ್ಲಿದ್ದ ಬೋರ್‌ವೆಲ್ ಕೂಡ ಬತ್ತಿಹೋಗಿದೆ. “ನಾವು ಭೀಕರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ, ಶೀಘ್ರದಲ್ಲೇ ನಗರಕ್ಕೆ ನೀರು ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ” ಎಂದು ಹೇಳಿದರು.

ಮಳೆ ಕೊರತೆಯಿಂದ ಕೊಳವೆಬಾವಿಗಳು ಬತ್ತಿ ಹೋಗಿರುವುದರಿಂದ ಬೆಂಗಳೂರು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದೆ. ನಿವಾಸಿಗಳು ತಮ್ಮ ದೈನಂದಿನ ಅಗತ್ಯತೆಗಳಿಗೆ ನೀರನ್ನು ಮಿತವಾಗಿ ಬಳಸುವಂತೆ ರೆಸಿಡೆನ್ಶಿಯಲ್‌ ಸೊಸೈಟಿ ಅವರು ಸೂಚನೆ ನೀಡಿದ್ದಾರೆ.

ಬಿಕ್ಕಟ್ಟಿನ ಮಧ್ಯೆ, ಹಲವಾರು ಖಾಸಗಿ ನೀರಿನ ಟ್ಯಾಂಕರ್‌ಗಳು ನೀರನ್ನು ತಲುಪಿಸಲು ನಿವಾಸಿಗಳಿಗೆ ವಿಪರೀತ ಶುಲ್ಕ ವಿಧಿಸುತ್ತಿವೆ. ಈ ಕುರಿತು ಮಾತನಾಡಿದ ಶಿವಕುಮಾರ್, ‘ಕೆಲವು ಟ್ಯಾಂಕರ್‌ಗಳಲ್ಲಿ 600 ರೂ.ಗೆ ನೀರು ಪೂರೈಸುತ್ತಿದ್ದು, ಇನ್ನು ಕೆಲವು ಟ್ಯಾಂಕರ್‌ಗಳಲ್ಲಿ 3 ಸಾವಿರ ರೂ.ವರೆಗೆ ದರ ವಿಧಿಸಲಾಗುತ್ತಿದೆ. ದರ ನಿಗದಿ ಮಾಡುವ ನಿಟ್ಟಿನಲ್ಲಿ ಎಲ್ಲ ನೀರಿನ ಟ್ಯಾಂಕರ್‌ಗಳು ಅಧಿಕಾರಿಗಳಲ್ಲಿ ನೋಂದಣಿ ಮಾಡಿಸಲು ಸೂಚಿಸಿದ್ದೇವೆ. ಟ್ಯಾಂಕರ್‌ಗಳು ಪ್ರಯಾಣಿಸುವ ದೂರವನ್ನು ಆಧರಿಸಿ ನಿಗದಿಪಡಿಸಲಾಗಿದೆ.” ಎಂದರು.

ಇನ್ನು, ಬೆಂಗಳೂರಿನ ನೀರಿನ ಬವಣೆ ನೀಗಿಸುವ ಮೇಕೆದಾಟು ಜಲಾಶಯ ಯೋಜನೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿಗೆ ನೀರು ಹರಿಸುವ ಉದ್ದೇಶದಿಂದ ಮೇಕೆದಾಟು ಯೋಜನೆಗೆ ಚಾಲನೆ ನೀಡಿದ್ದೆವು, ನಮ್ಮ ಪಾದಯಾತ್ರೆಯೊಂದಿಗೆ ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಿದ್ದರೂ ಕೇಂದ್ರ ಅನುಮೋದನೆ ನೀಡಿಲ್ಲ. ಬಿಕ್ಕಟ್ಟಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಈಗಲಾದರೂ ಯೋಜನೆ ರೂಪಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ, ಕಂದಾಯ ಸಚಿವರು, ಆರ್‌ಡಿಪಿಆರ್‌ ಸಚಿವರು, ಇತರ ಸಚಿವರೊಂದಿಗೆ ಬರ ಸಮಸ್ಯೆ ಕುರಿತು ಚರ್ಚಿಸಿ, ನಗರಗಳ 15 ಕಿ.ಮೀ ಪರಿಧಿಯ ವ್ಯಾಪ್ತಿಯಲ್ಲಿರುವ ಜಲಮೂಲಗಳನ್ನು ಬಳಸಿಕೊಂಡು ನಗರ ಪ್ರದೇಶಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಬೆಂಗಳೂರು ನಗರಕ್ಕೆ ರಾಮನಗರ, ಹೊಸಕೋಟೆ, ಚನ್ನಪಟ್ಟಣ, ಮಾಗಡಿ ಮತ್ತಿತರ ಪಟ್ಟಣಗಳಿಂದ ನೀರಿನ ಟ್ಯಾಂಕರ್‌ ಮೂಲಕ ನೀರು ತರುತ್ತೇವೆ,’’ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!