Wednesday, September 11, 2024

ಯಾವೊಬ್ಬ ರಾಜಕೀಯ ನಾಯಕನಿಗೂ ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ತರಲಾಗಿಲ್ಲ : ಡಾ. ಪಿ. ವಿ ಭಂಡಾರಿ ಆಕ್ರೋಶ

ಜನಪ್ರತಿನಿಧಿ (ಉಡುಪಿ) : ಉಡುಪಿ ಜಿಲ್ಲೆಯಾಗಿ ಇಪ್ಪತ್ತೈದು ವರ್ಷಗಳಾಯ್ತು, ಮತ್ತೆ ಲೋಕಸಭಾ ಚುನಾವಣೆ ಬರುತ್ತಿದೆ. ಈಗ ಎಲ್ಲಾ ನಾಯಕರು ಚುನಾವಣೆಗೆ ತಾನೇ ಅಭ್ಯರ್ಥಿಯಾಗಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೂ ಮೊದಲು ತಾವು ನಿಮ್ಮ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ ಎನ್ನುವುದರ ಬಗ್ಗೆ ಚರ್ಚೆಯಾಗಬೇಕು, ನೀವು ಮಾಡಿಲ್ಲ ಎಂದರೇ, ಮತದಾರರು ಆ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಖ್ಯಾತ ಮನೋವೈದ್ಯ ಹಾಗೂ ಚಿಂತಕ ಡಾ. ಪಿ. ವಿ ಭಂಡಾರಿ ಹೇಳಿದ್ದಾರೆ.

ಬಹು ವರ್ಷಗಳ ಬೇಡಿಕೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಯಾವೊಬ್ಬ ರಾಜಕೀಯ ನಾಯಕನಿಗೆ ಉಡುಪಿ ಜಿಲ್ಲೆಗೆ ತರಲಾಗಲಿಲ್ಲ. ಸರ್ಕಾರಿ ಇಂಜೀನಿಯರಿಂಗ್‌ ಕಾಲೇಜು, ಸರ್ಕಾರಿ ಪಶುವೈದ್ಯಕೀಯ ಕಾಲೇಜು ಉಡುಪಿಯಲ್ಲಿಲ್ಲ. ರಾಜ್ಯ ಸರ್ಕಾರವಾಗಿ ಅಥವಾ ಕೇಂದ್ರ ಸರ್ಕಾರವಾಗಲಿ ನಮ್ಮ ಉಡುಪಿ ಜಿಲ್ಲೆಗೆ ನೀವು ಏನು ಮಾಡಿದ್ದೀರಿ ಎನ್ನುವುದು ನಮ್ಮ ಮುಂದೆ ಇರುವ ಮೊದಲನೇ ಪ್ರಶ್ನೆ. ಜಿಲ್ಲೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎನ್ನುವುದು ನಮ್ಮ ಮುಂದೆ ಇರುವ ಎರಡನೇ ಪ್ರಶ್ನೆ. ಶಿರ್ವ, ಕಲ್ಯಾಣಪುರ, ಬ್ರಹ್ಮಾವರದಂತಹ ಭಾಗಗಳಲ್ಲಿ ವೃದ್ಧ ಪೋಷಕರು ಮನೆಯಲ್ಲಿ ಆಸರೆಯಿಲ್ಲದೇ ಮನೆಯಲ್ಲಿದ್ದಾರೆ. ಅವರ ಮಕ್ಕಳು ವಿದ್ಯಾಭ್ಯಾಸ ಮಾಡಿಕೊಂಡು ಬೆಂಗಳೂರು, ಮುಂಬೈನಂತಹ ದೊಡ್ಡ ನಗರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಉಡುಪಿಯಲ್ಲಿ ಅವರಿಗೆ ಬೇಕಾದ ಉದ್ಯೋಗ ಅವಕಾಶ ಇಲ್ಲ. ಉದ್ಯಮ ಕ್ಷೇತ್ರ ನಮ್ಮ ಉಡುಪಿ ಜಿಲ್ಲೆಯಲ್ಲಿ ಯಾಕೆ ಇನ್ನೂ ಬೆಳವಣಿಗೆ ಹೊಂದುತ್ತಿಲ್ಲ. ಇಲ್ಲಿ ಉದ್ಯಮ ಕ್ಷೇತ್ರ ಬೆಳವಣಿಗೆ ಹೊಂದಿದರೇ, ಕೌಟುಂಬಿಕ ಆರೋಗ್ಯವೂ, ಸಾಮಾಜಿಕ ಆರೋಗ್ಯವೂ ಸ್ವಾಸ್ಥ್ಯದಿಂದ ಇರುತ್ತಿತ್ತು. ಉಡುಪಿಯಲ್ಲಿ ಯಾಕೆ ಎಂಎನ್‌ಸಿ ಕಂಪೆನಿಗಳು ಹೂಡಿಕೆ ಮಾಡುತ್ತಿಲ್ಲ. ಯಾಕೆ ಇಲ್ಲಿನ ರಾಜಕೀಯ ನಾಯಕರು ಉಡುಪಿಯಂತಹ ಸಿಟಿಯಲ್ಲಿ ಹೂಡಿಕೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಾಕೆ ಪ್ರಯತ್ನ ಮಾಡಿಲ್ಲ. ಉಡುಪಿಯನ್ನು ನತದೃಷ್ಟ ಜಿಲ್ಲೆಯನ್ನಾಗಿ ಮಾಡಿದ್ದಾರೆ ಎಂದು ಅವರು ಪ್ರಶ್ನೆಯ ಮೂಲಕ ಇಲ್ಲಿನ ರಾಜಕೀಯ ನಾಯಕರ ಬಗ್ಗೆ ಟೀಕಿಸಿದ್ದಾರೆ.

ಇನ್ನು, ಉಡುಪಿಯ ಸಂಚಾರ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಹೆದ್ದಾರಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ಪರ್ಕಳ ಜಂಕ್ಷನ್‌, ಇಂದ್ರಾಳಿ ಬ್ರಿಡ್ಜ್‌ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸುವುದಕ್ಕೆ ಇನ್ನೂ ನಿಮ್ಮಿಂದ ಸಾಧ್ಯವಾಗಿಲ್ಲ. ಮೋದಿ ಅವರು ಸ್ಮಾರ್ಟ್‌ ಸಿಟಿ ಮಾಡುತ್ತೇವೆ ಎಂದು ಹೇಳುತ್ತಾರೆ. ಇಲ್ಲಿ ಒಂದು ಬ್ರಿಡ್ಜ್‌ ಕಾಮಗಾರಿ ಸರಿಪಡಿಸಿಕೊಳ್ಳುವುದಕ್ಕೆ ಆಗಿಲ್ಲ. ಸಂತೆಕಟ್ಟೆಯಲ್ಲಿ ಜನರ ಗೋರಿ ಹೂತ್ತಿಟ್ಟಿದ್ದೀರಾ ..? ಅದು ಸರಿಪಡಿಸಿಕೊಳ್ಳುವುಕ್ಕೆ ಇನ್ನೆಷ್ಟು ವರ್ಷಗಳು ಬೇಕು..? ಜನ ಇನ್ನೆಷ್ಟು ವರ್ಷಗಳು ಕಾಯಬೇಕು ? ರಾಜಕೀಯ ನಾಯಕರು, ಮುಖಂಡರು ಎಂದು ಕರೆಸಿಕೊಳ್ಳುವ ನಿಮಗೆ ನಾಚಿಕೆ ಆಗುವುದಿಲ್ಲವೇ ? ಎಂದು ಅವಕು ಕಟುವಾಗಿ ಪ್ರಶ್ನೆಗಳ ಮೂಲಕ ಕಿಡಿ ಕಾರಿದ್ದಾರೆ.

ಉಡುಪಿ ಜಿಲ್ಲೆಯ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಜನರು ಭಾವನಾತ್ಮಕವಾಗಿ ಮತ ಚಲಾಯಿಸುತ್ತಾರೆ. ಯಾರೋ ಒಬ್ಬ ರಾಜಕೀಯ ನಾಯಕನ ಹೆಸರು ನೋಡಿಯೋ ಅಥವಾ ದೇವರ ಹೆಸರನ್ನು ನೋಡಿಯೋ ಜನರು ಮತ ಹಾಕುತ್ತಾರೆ. ಚುನಾವಣೆ ಆದ ಮೇಲೆ ಯಾರೂ ಬರುವುದಿಲ್ಲ. ನಮ್ಮನ್ನು ನೋಡಿದ ತಕ್ಷಣ ʼಹಾಯ್‌ ಹಾಯ್‌ ಎಂದು ಕೈ ಬೀಸುತ್ತಾರೆʼ. ಬಿಜೆಪಿಯವರಾಗಲಿ, ಕಾಂಗ್ರೆಸ್‌ನವರಾಗಲಿ ಅವರವರ ಅಭಿವೃದ್ಧಿ ಮಾಡಿಕೊಂಡು ಅವರು ಹಾಯಾಗಿ ಇರುತ್ತಾರೆ. ಎಲ್ಲಿಯವರೆಗೆ ಮತದಾರ ಪ್ರಜ್ಞಾವಂತಾಗುವುದಿಲ್ಲವೋ, ಅಲ್ಲಿಯವರೆಗೆ  ಈ ವ್ಯವಸ್ಥೆ ಸರಿಯಾಗುವುದಲ್ಲ. ದಯವಿಟ್ಟು ಯೋಚನೆ ಮಾಡಿ ಮತದಾನ ಮಾಡಿ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!