spot_img
Friday, March 13, 2026
spot_img

ವೈದ್ಯಕೀಯ ಸಂಸ್ಥೆಗಳು ಸೇವಾ ಮನೋಭಾವನೆ ಹೊಂದಬೇಕು- ಶೆಟ್ಟಿಗಾರ್

ಕುಂದಾಪುರ : ನೊಂದು ಬಂದ ರೋಗಿಗಳಿಗೆ ಸಮಯವನ್ನು ಪರಿಗಣಿಸದೇ, ಅವರ ಆರ್ಥಿಕ ಪರಿಸ್ಥಿತಿಯನ್ನು ಮನಗಾಣದೇ ಅವರಿಗೆ ಬಂದ ಸಮಸ್ಯೆಗೆ ಪರಿಹಾರ ಮಾಡುವುದರೊಂದಿಗೆ ಸಾಮಾನ್ಯವಾಗಿ ವೈದ್ಯಕೀಯ ಸಂಸ್ಥೆಗಳು ಸೇವಾ ಮನೋಭಾವನೆ ಹೊಂದಿದಾಗ ಮಾತ್ರ ಸಂಸ್ಥೆ ಬೆಳೆಯಲು ಕಾರಣವಾಗುತ್ತದೆ ಎಂದು ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು ಉಡುಪಿಯ ಸಮೀಪದ ಮೂಡುಬೆಳ್ಳೆಯಲ್ಲಿ ಸಮೃದ್ಧಿ ಡಿಜಿಟಲ್ ಕ್ಲಿನಿಕಲ್ ಲ್ಯಾಬರೋಟರಿಯನ್ನು ಉದ್ಘಾಟಿಸಿ ಶುಭ ಹಾರೈಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಚರ್ಚಿನ ಧರ್ಮಗುರುಗಳಾದ ಜಾರ್ಜ್ ಥಾಮಸ್ ಡಿಸೋಜ ಆಶೀರ್ವಚನಗೈದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪೆರ್ಡೂರಿನ ತಜ್ಞ ವೈದ್ಯರಾದ ಡಾ| ರವೀಂದ್ರ, ಮೂಡುಬೆಳ್ಳೆಯ, ಕೆನರಾ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್ ಡಾ. ಬೊಮ್ಮಯ್ಯ ಎಮ್. ಹಾಗೂ ಮೂಡುಬೆಳ್ಳೆಯ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯ ಆಚಾರ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.

ನೂತನ ಸಂಸ್ಥೆಯಲ್ಲಿ ಸಾಮಾನ್ಯವಾಗಿ 70 ರೀತಿಯ ಕಾಯಿಲೆಗಳನ್ನು ಗುರುತಿಸುವಿಕೆಯ ಸೇವೆಯನ್ನು ಅಳವಡಿಸಲಾಗಿದೆ. ಮೂಡುಬೆಳ್ಳೆಯ ಅನಿಲ್ ಸ್ವಾಗತಿಸಿದರು. ರಿತೇಶ್ ಕಾರ್ಯಕ್ರಮ ನಿರೂಪಿಸಿದರೆ ಪವಿತ್ರ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!