spot_img
Monday, April 27, 2026
spot_img

ಅಯೋಧ್ಯೆಯಲ್ಲಿ ಅನುರಣಿಸಿದ ಬೆಳ್ಕಳೆ ಚೆಂಡೆ ಬಳಗದ ಚೆಂಡೆ ವಾದನ

ಕುಂದಾಪುರ: ಅಯೋದ್ಯೆ ಶ್ರೀ ರಾಮಲಲ್ಲಾ ಪ್ರತಿಷ್ಠಾ ದಿನದಿಂದ 45 ದಿನಗಳ ಕಾಲ ನಡೆಯುತ್ತಿರುವ ಮಂಡಲ ಪೂಜೆ ಮತ್ತು ಪಲ್ಲಕ್ಕಿ ಉತ್ಸವಕ್ಕೆ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರ ಅನುಗ್ರಹದೊಂದಿಗೆ ಫೆಬ್ರವರಿ 24ಮತ್ತು 25ನೇ ತಾರೀಖಿನಂದು ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗ ಬೆಳ್ಕಳೆ ಇವರಿಂದ ಚೆಂಡೆ ಸೇವೆ ನಡೆಯಿತು.

ಬಳಗದಿಂದ ಉಮೇಶ್ ಬಾಧ್ಯ, ಶ್ರೀಹರ್ಷ ಬೆಳ್ಕಳೆ, ರವಿ ಸಾಮಗ, ಸುನಿಲ್ ಭಟ್, ಶ್ರೀನಿಧಿ ಹಂದೆ, ಶ್ರೀನಾಥ್,ರಾಘವೇಂದ್ರ,ವಿಕ್ರಮ್ ಭಟ್, ನವೀನ್ ಬಾಧ್ಯ, ಅಭಿಲಾಷ್, ಪ್ರಸಾದ್, ಪನ್ನಗ ಸಾಮಗ, ಅಭಿಷ್ಟ ಹೆಬ್ಬಾರ್ ಸೇವೆಯಲ್ಲಿ ಪಾಲ್ಗೊಂಡರು.

2006 ರಲ್ಲಿ ಆರಂಭವಾದ ಬೆಳ್ಕಳೆ ಚೆಂಡೆ ಬಳಗವು ಉಡುಪಿ, ಮಂತ್ರಾಲಯ, ತಿರುಪತಿ ಹಾಗೂ ರಾಜ್ಯ ಮತ್ತು ಹೊರ ರಾಜ್ಯದ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಚೆಂಡೆ ವಾದನ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ. ಇದೀಗ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ನಾಡಿನಲ್ಲಿ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದುಗಳ ಸ್ವಾಭಿಮಾನದ ಪ್ರತೀಕವಾಗಿ ತಲೆ ಎತ್ತಿ ನಿಂತಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಚೆಂಡೆ ವಾದನ ಸೇವೆ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!