spot_img
Monday, April 27, 2026
spot_img

ಕಲಿತ ಶಾಲೆಯ ಋಣ ತೀರಿಸುವ ಕಾರ್ಯ ನಡೆಯಬೇಕು-ರಾಜ್ ಬೆಂಗ್ರೆ

ಬ್ರಹ್ಮಾವರ : ತಂದೆ ತಾಯಿಯವರ, ಸಮಾಜದ ಋಣ ಮತ್ತು ಕಲಿತ ಶಾಲೆಯ ಋಣ ತೀರಿಸುವ ಕಾರ್ಯ ನಡೆಯಬೇಕು ಎಂದು ರಾಧಾ ಬಾಬು ಕೋಟ್ಯಾನ್ ಪೌಂಡೇಶನ್ ಇದರ ಮುಖ್ಯಸ್ಥ ಕ್ರೀಡಾ ಪಟು ರಾಜ್ ಬೆಂಗ್ರೆ ಹೇಳಿದರು.

ಬುಧವಾರ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಮತ್ತು ರಾಧಾ ಬಾಬು ಕೋಟ್ಯಾನ್ ಪೌಂಡೇಶನ್‌ನ ಬೆಂಗ್ರೆ ಬುಲ್ಸ್ ನಡುವೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಮತ್ತು ಪ್ರತಿಷ್ಟಾನದ ಅಧ್ಯಕ್ಷೆ ಡಾ. ಅನುಸೂಯ ಇವರಿಂದ ನಡೆದ ಒಪ್ಪಂದದ ಸಮಾರಂಭದಲ್ಲಿ ಅವರು ಮಾತನಾಡಿ ಕ್ರೀಡೆಯನ್ನು ಪೋಷಿಸುವ ಮತ್ತು ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳೆಸುವ ಉದ್ದೇಶದಿಂದ ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯಾದ ನಾನು ಕಲಿತ ಶಾಲೆಯ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಮಿರಾಕಲ್ಸ್ 2023 ಬಿಡುಗಡೆಗೊಳಿಸಲಾಯಿತು ಮತ್ತು ಲಯನ್ಸ್ ಕ್ಲಬ್ 317 ಸಿ ವತಿಯಿಂದ ವಿದ್ಯಾರ್ಥಿಯೋರ್ವನಿಗೆ ಕೊಡಮಾಡಿದ ಲ್ಯಾಪ್ ಟಾಪ್ ಹಸ್ತಾಂತರಿಸಲಾಯಿತು.

ವೈಸ್ ಪ್ರಿನ್ಸಿಪಾಲ್ ಸೋಫಿಯಾ ಡಯಾಸ್ , ಫೌಂಡೇಶನ್ ಉಪಾಧ್ಯಕ್ಷೆ ದೀಪ್ತಿ, ಸರಿತಾ ಆಳ್ವ, ಸರೋಜಾ ಉಪಸ್ಥಿತರಿದ್ದರು.
ಐಕ್ಯೂ‌ಎಸಿ ಸಂಯೋಜಕ ಡಾ, ಜಯರಾಮ ಶೆಟ್ಟಿಗಾರ್ ಸ್ವಾಗತಿಸಿ, ಅಧ್ಯಾಪಕಿ ಚೈತ್ರ ವಂದಿಸಿ, ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!