Sunday, September 8, 2024

ಸುಶೀಲ ಪೂಜಾರಿ ಆರೋಪದಲ್ಲಿ ಹುರುಳಿಲ್ಲ: ಕಾನೂನು ಹೋರಾಟದ ಜೊತೆ ಸಿಗಂದೂರು ದೇವಿಗೆ ಹುಯಿಲು ಕೊಡಲು ನಿರ್ಣಯ-ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ


ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮೇಲೆ ಸುಶೀಲ ಪೂಜಾರಿಯವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ನಮ್ಮ ಸಂಘದ ಯಾರಿಂದಲೂ ಯಾವುದೇ ದುರುಪಯೋಗ ಮಾಡಿಲ್ಲ. ಸಂಘದ ಘನತೆಗೆ ದಕ್ಕೆ ಆಗಿರುವ ಬಗ್ಗೆ ಈ ಬಗ್ಗೆ ಕಾನೂನು ಹೋರಾಟವನ್ನು ನಡೆಸಲಿದ್ದೇವೆ. ಮಾತ್ರವಲ್ಲ ಸಿಗಂದೂರು ದೇವಿಗೆ ಈ ಬಗ್ಗೆ ಹುಯಿಲು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಉಪ್ಪುಂದದಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ಸಂಘದ ಸದಸ್ಯೆ ಸುಶೀಲ ಪೂಜಾರಿ ಅವರು ಸಂಘದಲ್ಲಿ ಎನ್.ಎಫ್.ಎಸ್ ೧೧೦೨ರಲ್ಲಿ ರೂ.೧೫ಲಕ್ಷ ಸಾಲವನ್ನು ಪಡೆದುಕೊಂಡಿದ್ದು, ಈ ಸಾಲವು ಸರಿಯಾಗಿ ಮರುಪಾವತಿ ಮಾಡುತ್ತಾ ಬಂದಿದ್ದು, ಈ ನಡುವೆ ಹೆಚ್ಚುವರಿ ಸಾಲ ಪಡೆಯುವ ಪಡೆಯುವ ಉದ್ದೇಶದಿಂದ ಕಛೇರಿಗೆ ಭೇಟಿ ನೀಡಿ ವ್ಯವಸ್ಥಾಪಕರಲ್ಲಿ ವಿಚಾರಿಸಿದ ಮೇರೆಗೆ ೨೦೨೦ರ ಅಕ್ಟೋಬರ್ ೨೨ರಂದು ಸುಶೀಲಾ ಪೂಜಾರಿಯವರ ಸ್ಥಿರಾಸ್ತಿಯ ಮೌಲ್ಯ ಮಾಪನ ಮಾಡಲಾಗಿತ್ತು. ಆದರೆ ಅಪೇಕ್ಷಿತ ಸಾಲವನ್ನು ಪಡೆಯಲು ಅವರು ಬಾರದೇ ಹಿಂದಿನ ಬಾಕಿಯಿರುವ ಸಾಲವನ್ನು ಮರುಪಾವತಿ ಮಾಡುತ್ತಾ ಬಂದಿದ್ದು ಸಂಘದಿಂದ ಪಡಕೊಂಡ ದಾಖಲೆಗಳನ್ನು ವಾಪಸ್ಸು ನೀಡಿರುವುದಿಲ್ಲ. ಈ ಸಾಲವನ್ನು ೨೦೨೩ರ ನವಂಬರ್ ೪ರಂದು ಸಂಪೂರ್ಣ ಮರುಪಾವತಿ ಮಾಡಿದ್ದು, ಸಾಲದ ಮೂಲ ದಾಖಲೆಯನ್ನು ಕೇಳಿದ ಸಂದರ್ಭದಲ್ಲಿ ಸಾಲದ ಅರ್ಜಿಯಲ್ಲಿ ಸಹಿ ಹಾಕಿ ದಾಖಲೆಯನ್ನು ಈಗಾಗಲೇ ಪಡೆದುಕೊಂಡಿರುವ ವಿಚಾರವನ್ನು ತಿಳಿಸಲಾಗಿತ್ತು. ಅದಾಗ್ಯೂ ಈ ಸಾಲಗಾರರು ೨೦೨೩ರ ನವಂಬರ್ ೨೩ರಂದು ಸಾಲದ ದಾಖಲೆ ಸಂಬಂಧಿಸಿದ ಮೂಲ ಪ್ರತಿಯನ್ನು ನೀಡುವಂತೆ ಅರ್ಜಿಯನ್ನು ನೀಡಿದ್ದು ಅದಕ್ಕೆ ೨೦೨೩ರ ಡಿಸೆಂಬರ್ ೬ರಂದು ಹಿಂಬರಹವನ್ನು ನೀಡಲಾಗಿದೆ. ಆದರೆ ತದ ನಂತರ ಈ ಸಂಬಂಧವಾಗಿ ಸಂಘದ ಪ್ರಧಾನ ಕಛೇರಿಗೆ ೨೦೨೩ರ ಡಿಸೆಂಬರ್ ೨೬ರಂದು ಸಂಜೆ ೫ ಗಂಟೆಗೆ ಈ ಸಾಲಗಾರರ ಸಹಿತ ನಾಲ್ಕು ಜನ ಇತರರು ಅಧ್ಯಕ್ಷರ ಭೇಟಿ ಸಂಬಂಧವಾಗಿ ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಏಕಾ‌ಏಕಿಯಾಗಿ ಅಧ್ಯಕ್ಷರ ಕೊಠಡಿಗೆ ಪ್ರವೇಶಿಸಿ ತಮ್ಮ ಸ್ಥಿರಾಸ್ತಿ ದಾಖಲೆ ನೀಡುವಂತೆ ಕೇಳಿ ವಾದ ವಿವಾದ ಮಾಡಿದಲ್ಲದೇ ಏಕವಚನದಿಂದ ಸಂಬೋದಿಸಿ, ನಿಂದಿಸಿ ಗದ್ದಲ ಎಬ್ಬಿಸಿದ್ದಾರೆ. ಇದು ವಾರ್ಷಿಕ ಸುಮಾರು ೧೧೫೦ ರೂ.ಕೋಟಿಗೂ ಮಿಕ್ಕಿ ವ್ಯವಹಾರ ಮಾಡುತ್ತಿರುವ ಸಂಘದ ಘನತೆಗೆ ದಕ್ಕೆಯಾಗಿದೆ. ಈ ಸಂದರ್ಭದಲ್ಲಿ ಸಂಘದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಇವರನ್ನು ಅಧ್ಯಕ್ಷರ ಕೊಠಡಿಯಿಂದ ಹೊರ ಹೋಗುವಂತೆ ಗೌರವಪೂರ್ವವಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂಘದ ಸಿಸಿ ಕ್ಯಾಮರಾ ದೃಶ್ಯಾವಳಿ ಲಭ್ಯವಿದೆ ಎಂದರು.

ಈ ವಿಷಯಕ್ಕೆ ಸಂಬಂಧಿಸಿ ಸಾಲಗಾರರಿಗೂ ಹಾಗೂ ಸಂಬಂಧಪಟ್ಟವರಿಗೂ ಈಗಾಗಲೇ ಸ್ಥಿರಾಸ್ತಿಯ ವಿಭಾಗ ಪತ್ರದ ೩ನೇ ಪ್ರತಿಯ ಬಗ್ಗೆ ದೃಢೀಕೃಥ ಯಥಾ ಪ್ರತಿಯನ್ನು ಸಂಘದ ವತಿಯಿಂದ ನೀಡುವುದಾಗಿಯೂ ಕೂಡಾ ಹೇಳಲಾಗಿತ್ತು. ಈ ಸ್ಥಿರಾಸ್ತಿಯ ಸಂಬಂಧವಾಗಿ ನಮ್ಮ ಸಂಘದ ಯಾರಿಂದಲೂ ಯಾವುದೇ ದುರುಪಯೋಗ ಮಾಡಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಈಶ್ವರ ಹಕ್ಲತೋಡು, ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ಮೋಹನ ಪೂಜಾರಿ, ಬಿ.ಎಸ್.ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ, ಶ್ರೀಮತಿ ದಿನೀತಾ ಶೆಟ್ಟಿ, ಶ್ರೀಮತಿ ಜಲಜಾಕ್ಷಿ ಶೆಡ್ತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್ ಪೈ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!