Wednesday, October 30, 2024

ಹೆಸಕುತ್ತೂರು ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂದಾಪುರ: ಪ್ರಾಯೋಗಿಕ ಕಲಿಕೆ ವಿಜ್ಞಾನದ ಅವಿಭಾಜ್ಯ ಅಂಗ.ಪ್ರಯೋಗಗಳನ್ನು ಹೆಚ್ಚು ಹೆಚ್ಚು ಮಾಡುವುದರಿಂದ ವಿಜ್ಞಾನದ ಕಲಿಕೆಯನ್ನು ಆಕರ್ಷಣೀಯ ಗಳಿಸಬಹುದು ಎಂದು ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಚ್ ಪ್ರಕಾಶ್ ಶೆಟ್ಟಿ ಹೇಳಿದರು.

ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು ಇಲ್ಲಿ ನಡೆದ ವಿಜ್ಞಾನ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯೋಪಾಧ್ಯಾಯರಾದ ಶೇಖರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೃಷ್ಣ ಕೆದ್ಲಾಯ, ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಅಬ್ದುಲ್ ರವೂಫ್, ಪ್ರೌಢಶಾಲೆಯ ಸಹಶಿಕ್ಷಕರಾದ ಉದಯ ಕುಮಾರ್ ಶೆಟ್ಟಿ, ರಾಘವೆಂದ್ರ ದೇವಾಡಿಗ,ದೈಹಿಕ ಶಿಕ್ಷಕರಾದ ಜಯಪ್ರಸಾ ದ ಶೆಟ್ಟಿ, ಶಾಲೆಯ ಸಹಶಿಕ್ಷಕರಾದ ಸಂಜೀವ್.ಎಮ್ ,ಜಯರಾಮ ಶೆಟ್ಟಿ , ಜಯಲಕ್ಷ್ಮಿ.ಬಿ, ವಿಜಯಾ.ಆರ್, ಗೌರವ ಶಿಕ್ಷಕಿ ಮಧುರ ಉಪಸ್ಥಿತರಿದ್ದರು.

ಸಹಶಿಕ್ಷಕ ರವೀಂದ್ರ ನಾಯಕ್ ಸ್ವಾಗಿತಿಸಿದರು,ಸಹಶಿಕ್ಷಕ ವಿಜಯ ಶೆಟ್ಟಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಹಶಿಕ್ಷಕಿ ಸ್ವಾತಿ.ಬಿ ವಂದಿಸಿದರು ಹಾಗೂ ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!