Sunday, October 13, 2024

ಭಾರತೀಯ ನೌಕದಳದಲ್ಲಿ 254ಶಾರ್ಟ್​ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜನಪ್ರತಿನಿಧಿ (ನವ ದೆಹಲಿ) : ಭಾರತೀಯ ನೌಕಾದಳದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 254 ಶಾರ್ಟ್​ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​​​​​ಲೈನ್ ​ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ www.indiannavy.nic.in ಗೆ ಭೇಟಿ ನೀಡಬಹುದು.

ಜನರಲ್ ಸರ್ವೀಸ್, ಪೈಲಟ್, ನೇವಲ್ ಏರ್ ಆಪರೇಶನ್ಸ್ ಆಫೀಸರ್, ಏರ್ ಟ್ರಾಫಿಕ್ ಕಂಟ್ರೋಲರ್- ಬಿಇ/ಬಿ.ಟೆಕ್​, ಲಾಜಿಸ್ಟಿಕ್ಸ್​- ಬಿ.ಎಸ್ಸಿ, ಬಿ.ಕಾಂ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ, ಎಂಬಿಎ, ಸ್ನಾತಕೋತ್ತರ ಪದವಿ, ನೇವಲ್ ಅರ್ಮಾಮೆಂಟ್ ಇನ್ಸ್​ಪೆಕ್ಟರೇಟ್ ಕೇಡರ್ ಬಿಇ/ಬಿ.ಟೆಕ್, ಎಜುಕೇಷನ್-ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂ.ಟೆಕ್, ಎಂಜಿನಿಯರಿಂಗ್ ಬ್ರಾಂಚ್​ (ಜನರಲ್ ಸರ್ವೀಸ್), ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್), ನೇವಲ್ ಕನ್​ಸ್ಟ್ರಕ್ಟರ್- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂ.ಟೆಕ್ ನಲ್ಲಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ ನಿಗದಿಪಡಿಸಿಲ್ಲ. ನಿಯಮಾನುಸಾರ ಇರುತ್ತದೆ. ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಮಾಸಿಕ  56,100 ರೂ. ವೇತನ ನೀಡಲಾಗುತ್ತದೆ. ಭಾರತದಲ್ಲಿ ಯಾವುದೇ ಸ್ಥಳದಲ್ಲಿ ಕೆಲಸ ಮಾಡುವುದಕ್ಕೆ ತಯಾರಾಗಿರಬೇಕು.  ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ದಿನಾಂಕ: 24/02/2024 ರಿಂದಲೇ ಅರ್ಜಿ ಸಲ್ಲಿಸುವುದಕ್ಕೆ ವೆಬ್‌ಸೈಟ್‌ ತೆರವುಗೊಂಡಿದ್ದು, ಮಾರ್ಚ್​ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!