Wednesday, September 11, 2024

ಸುಳ್ಳನ್ನು ಹೇಳಿ ಪಡೆದಿರುವ ಆ ನಿಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ, ಮಾನ-ಮರ್ಯಾದೆ ಇದೆ ಎಂದು ಸಾಬೀತುಪಡಿಸಿ : ಸಿಎಂ, ಡಿಸಿಎಂ ಗೆ ಬಿಜೆಪಿ ಒತ್ತಾಯ

ಜನಪ್ರತಿನಿಧಿ (ಬೆಂಗಳೂರು) : ನಿರಂತರ ಸುಳ್ಳುಗಳ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಿದ್ದ ರಾಜ್ಯ ಕಾಂಗ್ರೆಸ್ ನ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಸರಿಯಾಗಿಯೇ ಚಾಟಿ ಬೀಸಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಬಿಜೆಪಿ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ ಸಮನ್ಸ್ ನೀಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು 40 ಪರ್ಸೆಂಟ್ ಕಮಿಷನ್‌ನ ಗಂಭೀರ ಆರೋಪ ಮಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ನೀಡಿದ್ದು, ಮಾರ್ಚ್ 28ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಮೂವರಿಗೂ ತಾಕೀತು ಮಾಡಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದು, ಸಮಾಜವನ್ನು ಜಾತಿ, ಧರ್ಮಗಳ ಆಧಾರದಲ್ಲಿ ವಿಭಜಿಸಲು ವಿಫಲವಾದ ತತಕ್ಷಣ, ಕಾಂಗ್ರೆಸ್‌ ಪ್ರಯೋಗಿಸಿದ್ದು ಸುಳ್ಳಿನ ಸರಮಾಲೆಯನ್ನು. ಆಧಾರ ರಹಿತ ಸುಳ್ಳುಗಳಿಗೆ ಈಗ ಸರಿಯಾದ ಬೆಲೆ ತೆರುವ ಸಂದರ್ಭ ಕಾಂಗ್ರೆಸ್‌ನದ್ದು.  ಸತ್ಯಕ್ಕೆ ಜಯ ನಿಶ್ಚಿತ, ಸುಳ್ಳಿಗೆ ಸೋಲು ಖಚಿತ-ನಿಶ್ಚಿತ-ಖಂಡಿತ ಎಂಬುದು ಕೆಲವೇ ದಿನಗಳಲ್ಲಿ ಸಾಬೀತಾಗಲಿದೆ ಎಂದಿದೆ.

ರಾಹುಲ್‌ ಗಾಂಧಿ ಅವರೇ, ಸಿದ್ದರಾಮಯ್ಯರವರೇ, ಡಿ. ಕೆ. ಶಿವಕುಮಾರ್‌ ಅವರೇ, ನ್ಯಾಯಾಲಯದಿಂದ ಸಮನ್ಸ್‌ ಪಡೆದಿರುವ ನಿಮಗೆ ನಿಜಕ್ಕೂ ಮರ್ಯಾದೆಯಿದ್ದರೆ, ಮೊದಲು ಸುಳ್ಳನ್ನು ಹೇಳಿ ಪಡೆದಿರುವ ಆ ನಿಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ, ತಮಗೆ ಕೊಂಚವಾದರೂ ಮಾನ-ಮರ್ಯಾದೆ ಇದೆ ಎಂಬುದನ್ನು ಸಾಬೀತುಪಡಿಸಿ ಎಂದು ಬಿಜೆಪಿ ಒತ್ತಾಯಿಸಿದೆ.  

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!