Wednesday, September 11, 2024

ವಿಶೇಷಚೇತನರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಬೇಕು-ಶೋಭಾಲಕ್ಷ್ಮೀ

ಕೋಟ: ವಿಶೇಷ ಚೇತರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಬೇಕು ಎಂದು ಕುಂದಾಪುರದ ತಹಶಿಲ್ದಾರರಾದ ಶ್ರೀಮತಿ ಶೋಭಾಲಕ್ಷ್ಮಿಯವರು ಹೇಳಿದರು.

ಫೆ.17ರಂದು ಬನ್ನಾಡಿ ಮಂಜುನಾಥ ನಿಲಯ ಹತ್ತಿರದ ಸುಬ್ಬಣ್ಣ ಹೆಗ್ಡೆ ಸಭಾಭವನದಲ್ಲಿ ನಡೆದ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ, ಲಯನ್ಸ್ ಕ್ಲಬ್ ಕೋಟ-ಗಿಳಿಯಾರು ಶ್ರೀದೇವಿ ಜ್ಯುವೆಲ್ಲರ್ಸ್ ಕೋಟ ದಿ. ಬನ್ನಾಡಿ ಮಂಜುನಾಥ ಅಕ್ಸಾಲರ ಧರ್ಮಪತ್ನಿ ದಿ. ಬನ್ನಾಡಿ ಪದ್ದು ಆಚಾರ್ ೧೭ನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಚಿತ್ರ ನೋಡಿ ಚಿತ್ರ ಬಿಡಿಸುವ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಚೇತನರಿಗೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 156 ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು 50-100 ಶೇಕಡ ಇರುವ 5 ರಿಂದ 60 ವರ್ಷದ ಒಳಗಿನ ವಿಶೇಷ ಚೇತನರಿಗೆ ಸಹಾಯಧನವನ್ನು ನೀಡಲಾಯಿತು.

ಕಾರ್ಯಕ್ರಮದ ಸಂಘಟಕ ರೋಟರಿ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಪ್ರಸ್ತಾವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕೋಟ -ಗಿಳಿಯಾರು ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ವಹಿಸಿದರು. ಮುಖ್ಯ ಅಭ್ಯಾಗತರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶಬಾನ ಅಂಜುಂ ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸುವುದು ಅವರಿಗೆ ಸಮಯೋಚಿತ ಎಂದರು.

ಈ ಕಾರ್ಯಕ್ರಮದಲ್ಲಿ ವಡ್ಡರ್ಸೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಲೋಕೇಶ್, ಹಿರಿಯವರಾದ ಅಪ್ಪಣ್ಣ ಹೆಗ್ಡೆ, ಫೇವರೆಟ್ ಕ್ಯಾಶೂಸ್ ಮಾಲಕರಾದ ಶಂಕರ್ ಹೆಗ್ಡೆ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ, ವಿಶ್ವಕರ್ಮ ಸಂಘ ಚೆಂಪಿ ಅಧ್ಯಕ್ಷರಾದ ಸುಬ್ರಾಯ ಆಚಾರ, ವಿಕಲಚೇತನರ ಇಲಾಖೆಯ ನಿವ್ರತ್ತ ಸಹಾಯಕ ನಿರ್ದೇಶಕರಾದ ನಿರಂಜನ್ ಭಟ್ ವೇದಿಕೆಯಲ್ಲಿ ಉಪಸ್ತಿತರಿದ್ದರು.

ವಿವೇಕ ಕಾಲೇಜಿನ ಉಪನ್ಯಾಸಕರಾದ ಸಂಜೀವ ಕಾರ್ಯಕ್ರಮ ನಿರೂಪಿಸಿ, ಸುಬ್ಬಣ್ಣ ಸಿಂಧು ಟ್ರಸ್ಟ್ ನ ಮುಖ್ಯಸ್ಥರಾದ ಅಜಿತ್ ಹೆಗ್ಡೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!